For Quick Alerts
  ALLOW NOTIFICATIONS  
  For Daily Alerts

  ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಮೋಹಕ ತಾರೆ ರಮ್ಯಾ

  |
  Ramya to return to sandalwood with Dil ka Raja | FILMIBEAT KANNADA

  'ಅಭಿ' ಜೊತೆ 'ಎಕ್ಸ್ ಕ್ಯೂಸ್ ಮಿ' ಅಂತ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಊರಿಗೊಬ್ಳೆ ಪದ್ಮಾವತಿಯಾಗಿ ಮೆರೆದ ಮೋಹಕ ತಾರೆ ರಮ್ಯಾ ಚಿತ್ರರಂಗದಿಂದ ದೂರ ಸರಿದು ವರ್ಷಗಳೆ ಆಗಿವೆ. ಸುಮಾರು ಒಂದು ದಶಕದ ಕಾಲ ಚಿತ್ರರಂಗ ಆಳಿದ ರಮ್ಯಾ ಕೊನೆಯದಾಗಿ ನಾಗರಹಾವು ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  2014ರ ನಂತರ ರಮ್ಯಾ ಮತ್ತೆ ಬಣ್ಣ ಹಚ್ಚಿಲ್ಲ. ಸುಮಾರು ಐದು ವರ್ಷಗಳಿಂದ ಚಿತ್ರರಂಗದಿಂದ ದೂರ ಇದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದರು. ಆದ್ರೀಗ ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಬರ್ತಿದ್ದಾರೆ. ಮೋಹಕ ತಾರೆ ಮತ್ತೆ ಬಣ್ಣಹಚ್ಚುತ್ತಿದ್ದಾರಾ ಎಂದು ಅಚ್ಚರಿಯಾಗುತ್ತಿದೆಯಾ. ಅಚ್ಚರಿ ಎನಿಸಿದರು ಇದು ನಿಜ.

  'ದಿಲ್ ಕಾ ರಾಜಾ' ಮತ್ತೆ ಬಂದ: ರಮ್ಯಾ ಮೇಡಂ ಕಥೆ ಏನು.?'ದಿಲ್ ಕಾ ರಾಜಾ' ಮತ್ತೆ ಬಂದ: ರಮ್ಯಾ ಮೇಡಂ ಕಥೆ ಏನು.?

  ರಮ್ಯಾ ಅಭಿನಯದ ಕೊನೆಯ ಸಿನಿಮಾ ದಿಲ್ ಕಾ ರಾಜ ಈಗ ರಿಲೀಸ್ ಗೆ ರೆಡಿಯಾಗಿದೆ. ಸಿನಿಮಾ ಸೆಟ್ಟೇರಿ ಐದಾರು ವರ್ಷಗಳೆ ಆಗಿವೆ. ಚಿತ್ರೀಕರಣ ಕೂಡ ಬಹುತೇಕ ಮುಕ್ತಾಯವಾಗಿತ್ತು. ಆದರೆ ಒಂದಿಷ್ಟು ಚಿತ್ರೀಕರಣ ಭಾಕಿ ಇತ್ತು. ಅಷ್ಟರಲ್ಲೆ ರಮ್ಯಾ ಕೂಡ ಸಿನಿಮಾ ರಂಗದಿಂದ ದೂರ ಸರಿದಿದ್ದರು.

  ಆದ್ರೀಗ ಈ ಸಿನಿಮಾ ರಿಲೀಸ್ ಮಾಡುವ ತಯಾರಿ ಮಾಡುತ್ತಿದ್ದಾರೆ ನಿರ್ದೇಶಕ ಸೋಮನಾಥ್ ಪಿ ಪಾಟೀಲ್. ಈಗಾಗಲೆ ದಿಲ್ ಕ ರಾಜ ಚಿತ್ರದ ಟೀಸರ್ ಕೂಡ ರಲೀಸ್ ಆಗಿದೆ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಮಿಂಚಿದ್ದಾರೆ. ಸದ್ಯ ರಿಲೀಸ್ ಆಗಿರುವ ಟೀಸರ್ ನಲ್ಲಿ ರಮ್ಯಾ ಅವರ ಕೆಲವೆ ಕೆಲವು ದೃಶ್ಯಗಳಿದ್ದರು ತೆರೆ ಮೇಲೆ ರಮ್ಯಾ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

  English summary
  Kannada Actress Ramya starrer Dil Ka Raja movie teaser released. Prajwal Devaraj playing a lead role in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X