»   » ಭೀಕರ ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ ರೂಪದರ್ಶಿ ರೇಗಾ ಸಿಂಧು

ಭೀಕರ ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ ರೂಪದರ್ಶಿ ರೇಗಾ ಸಿಂಧು

Posted By:
Subscribe to Filmibeat Kannada

ಕನ್ನಡ ಹಾಗೂ ತಮಿಳು ಕಿರುತೆರೆಯ ನಟಿ ಎಂದೇ ವರದಿ ಆಗುತ್ತಿರುವ  ಬೆಂಗಳೂರು ಮೂಲದ ರೂಪದರ್ಶಿ ರೇಗಾ ಸಿಂಧು (22) ಇಂದು ದುರಂತ ಸಾವಿಗೀಡಾಗಿದ್ದಾರೆ. ಇಂದು (ಶುಕ್ರವಾರ, ಮೇ 5) ಮುಂಜಾನೆ ತಮಿಳುನಾಡಿನ ವೆಲ್ಲೂರ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರೇಗಾ ಸಿಂಧು ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ 2.30 ರ ಸುಮಾರಿಗೆ ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ರೇಗಾ ಸಿಂಧು ಸಾವನ್ನಪ್ಪಿದ್ದಾರೆ ಎಂದು ವರದಿ ಆಗಿದೆ.

ದುರ್ಘಟನೆಯ ಹಿನ್ನಲೆ

ಬೆಂಗಳೂರಿನ ಬಾಣಸವಾಡಿ ನಿವಾಸಿ ಆಗಿರುವ 22 ವರ್ಷ ವಯಸ್ಸಿನ ರೇಗಾ ಸಿಂಧು ಜಾಹೀರಾತು ಒಂದರ ಚಿತ್ರೀಕರಣಕ್ಕೆಂದು ಬೆಂಗಳೂರಿನಿಂದ ಚೆನ್ನೈಗೆ ನಿಸ್ಸಾನ್ ಕಾರಿನಲ್ಲಿ ತೆರಳುತ್ತಿದ್ದರು.

ಡಿವೈಡರ್ ಗೆ ಕಾರು ಡಿಕ್ಕಿ

ಕಾರಿನಲ್ಲಿ ರೇಗಾ ಸಿಂಧು ಸೇರಿದಂತೆ ಒಟ್ಟು ಆರು ಜನ ಇದ್ದರು. ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ.

ಸ್ಥಳದಲ್ಲಿಯೇ ಸಾವನ್ನಪ್ಪಿದ ರೇಗಾ

ದುರಂತ ಸಂಭವಿಸಿದ ಸ್ಥಳದಲ್ಲಿಯೇ ರೇಗಾ ಸಿಂಧು ಸೇರಿದಂತೆ ಅಭಿಷೇಕ್ ಕುಮಾರನ್ (22), ಜಯನ್ಕಂದ್ರನ್ (23) ಹಾಗೂ ರಕ್ಷಣ್ (20) ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿದ್ದ ಉಳಿದಿಬ್ಬರನ್ನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವೆಲ್ಲೂರು ಪೊಲೀಸರು ತಿಳಿಸಿದ್ದಾರೆ.

ಕಾರಿನ ಡ್ರೈವರ್ ಅಜಾಗರೂಕತೆ

''ಕಾರಿನ ಡ್ರೈವರ್ ಅಜಾಗರೂಕತೆಯಿಂದ ದುರ್ಘಟನೆ ಸಂಭವಿಸಿದೆ'' ಎಂದಿರುವ ವೆಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರೇಗಾ ಸಿಂಧು ಯಾರು.?

''ಕನ್ನಡ ನಟಿ ರೇಖಾ ಸಿಂಧು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ'' ಎಂದು ಎಲ್ಲೆಡೆ ವರದಿ ಆಗುತ್ತಿದೆ. ಆದ್ರೆ, ರೇಖಾ ಸಿಂಧು ಅಭಿನಯಿಸಿರುವ ಸಿನಿಮಾ/ಧಾರಾವಾಹಿಗಳ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಾಗೇ, ರೇಖಾ ಸಿಂಧು ಎನ್ನಲಾಗಿರುವ ರೂಪದರ್ಶಿಯ ಫೇಸ್ ಬುಕ್ ಪುಟದಲ್ಲಿ 'ರೇಗಾ ಸಿಂಧು' ಎಂಬ ನಾಮಧ್ಯೇಯ ಇದೆ. ಅದರ ಲಿಂಕ್ ಇಲ್ಲಿದೆ ನೋಡಿ...

English summary
Bengaluru based Model Rega Sindhu was killed in a car accident early morning on Friday (May 5th) near Vellore in Tamil Nadu

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X