For Quick Alerts
  ALLOW NOTIFICATIONS  
  For Daily Alerts

  ಮತ್ತೆ ಅಭಿಮಾನಿಗಳಿಗೆ ದೊಡ್ಡ ಸುದ್ದಿ ಕೊಟ್ಟ ನಟಿ 'ಸ್ಪರ್ಶ' ರೇಖಾ!

  By Naveen
  |

  ನಟಿ ರೇಖಾ ಅವರ ಮದುವೆ ಬಗ್ಗೆ ಇತ್ತೀಚಿಗಷ್ಟೆ ಸುದ್ದಿ ಬಂದಿತ್ತು. ಆದರೆ ಅದೆಲ್ಲ ಗಾಸಿಪ್ ಅಷ್ಟೇ ಅಂತ ಅವರು ಸ್ಪಷ್ಟವಾಗಿ ಹೇಳಿದ್ದರು. ಆ ನಂತರ ಈಗ ಮತ್ತೆ ತಮ್ಮ ಅಭಿಮಾನಿಗಳಿಗೆ ನಟಿ ರೇಖಾ ದೊಡ್ಡ ಸುದ್ದಿ ಕೊಟ್ಟಿದ್ದಾರೆ.

  ಕನ್ನಡದ ದೊಡ್ಡ ನಟರಾದ ಸುದೀಪ್ ಮತ್ತು ದರ್ಶನ್ ಅವರ ಸಿನಿಮಾದಲ್ಲಿ ನಟಿಸಿದ್ದ ರೇಖಾ ನಂತರ ಕೆಲ ಸಿನಿಮಾ ಮಾಡಿದರು. ಯಾಕೋ ಏನೋ 'ಸ್ಪರ್ಶ' ಮತ್ತು 'ಮೆಜಿಸ್ಟಿಕ್' ಸಿನಿಮಾದ ರೀತಿ ಬೇರೆ ಯಾವ ಚಿತ್ರವೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಅದಾದ ನಂತರ ಕಳೆದ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ಮತ್ತೆ ರೇಖಾ ಪ್ರತ್ಯಕ್ಷ ಆಗಿದ್ದರು. ಆದರೆ 'ಬಿಗ್ ಬಾಸ್' ನಂತರ ಈಗ ನಟಿ ರೇಖಾ ಮತ್ತೆ ಚಿತ್ರರಂಗಕ್ಕೆ ಬಂದಿದ್ದಾರೆ. ಮುಂದೆ ಓದಿ....

  10 ವರ್ಷದ ನಂತರ

  10 ವರ್ಷದ ನಂತರ

  10 ವರ್ಷಗಳ ನಂತರ ಮತ್ತೆ ನಟಿ ರೇಖಾ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. 'ಬಿಗ್ ಬಾಸ್' ಬಳಿಕ ಈಗ ಬಿಗ್ ಸ್ಕ್ರೀನ್ ನಲ್ಲಿ ಮಿಂಚುವುದಕ್ಕೆ ಅವರು ಸಜ್ಜಾಗಿದ್ದಾರೆ.

  ನಿರ್ಮಾಪಕಿ ಆದ ರೇಖಾ

  ನಿರ್ಮಾಪಕಿ ಆದ ರೇಖಾ

  ಇಷ್ಟು ದಿನ ನಟಿಯಾಗಿದ್ದ ರೇಖಾ ಈಗ ಒಂದು ಸಿನಿಮಾವನ್ನು ನಿರ್ಮಾಣ ಮಾಡುವ ಪ್ಲಾನ್ ಮಾಡಿದ್ದಾರೆ. ತಮ್ಮ ನಿರ್ಮಾಣದಲ್ಲಿ ಬರುತ್ತಿರುವ ಈ ಚಿತ್ರದಲ್ಲಿ ಅವರು ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟನೆ ಮಾಡಲಿದ್ದಾರಂತೆ.

  'ಡಮ್ಮೀ ಪೀಸ್'

  'ಡಮ್ಮೀ ಪೀಸ್'

  ರೇಖಾ ನಿರ್ಮಾಣ ಮಾಡುತ್ತಿರುವ ಈ ಹೊಸ ಸಿನಿಮಾಗೆ 'ಡಮ್ಮೀ ಪೀಸ್' ಎಂಬ ಟೈಟಲ್ ಫಿಕ್ಸ್ ಆಗಿದೆ. ಇನ್ನು ಇದೊಂದು ಕಾಮಿಡಿ ಹಾಗೂ ಪಕ್ಕಾ ಯುವ ಪೀಳಿಗೆಯ ಸಿನಿಮಾವಾಗಿದೆಯಂತೆ.

  ವಿವೇಕ್ ನಿರ್ದೇಶನ

  ವಿವೇಕ್ ನಿರ್ದೇಶನ

  ರೇಖಾ ಅವರ ಜೊತೆ ಕೆಲಸ ಮಾಡಿದ್ದ ವಿವೇಕ್ ಎನ್ನುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಿವೇಕ್ ಕಥೆ ರೇಖಾ ಅವರಿಗೆ ತುಂಬ ಇಷ್ಟ ಆಗಿದ್ದು, ಈ ಚಿತ್ರಕ್ಕೆ ಬಂಡವಾಳ ಹಾಕುವುದಕ್ಕೆ ಮುಂದೆ ಬಂದಿದ್ದಾರೆ.

  ಸುದೀಪ್ ಗೂ ಮೊದಲೇ ಶಿವಣ್ಣನ ಜೊತೆ ನಟಿಸಬೇಕಿತ್ತು 'ಸ್ಪರ್ಶ' ರೇಖಾ.!

  ಹುಟ್ಟುಹಬ್ಬದ ದಿನ ಅನೌನ್ಸ್ ಆಗಿದೆ

  ಹುಟ್ಟುಹಬ್ಬದ ದಿನ ಅನೌನ್ಸ್ ಆಗಿದೆ

  ನಿನ್ನೆ ರೇಖಾ ಅವರ ಹುಟ್ಟುಹಬ್ಬ ಇದ್ದು, ಇದೇ ವೇಳೆ ತಮ್ಮ ಹೊಸ ಸಿನಿಮಾದ ಬಗ್ಗೆ ಅವರು ಅನೌನ್ಸ್ ಮಾಡಿದ್ದಾರೆ. ಮುಂದೆ ತಮ್ಮ ಬ್ಯಾನರ್ ನಲ್ಲಿ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡುವುದಾಗಿ ರೇಖಾ ಹೇಳಿದ್ದಾರೆ.

  'ಸ್ಪರ್ಶ' ರೇಖಾ ಜೊತೆ ಗಾಯಕ ರಾಜೇಶ್ ಕೃಷ್ಣನ್ ಮದುವೆ.? ರೇಖಾ ಕೊಟ್ಟ ಸ್ಪಷ್ಟನೆ.!

  ನಿರ್ಮಾಪಕಿಯರಾದ ನಟಿಯರು

  ನಿರ್ಮಾಪಕಿಯರಾದ ನಟಿಯರು

  ಈಗಾಗಲೇ ಕನ್ನಡದ ನಟಿಯರಾದ ರಚಿತಾ ರಾಮ್, ಶ್ರುತಿ ಹರಿಹರನ್, ಐಶಾನಿ ಶೆಟ್ಟಿ ಕಿರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಶೃತಿ ಹರಿಹರನ್ ತಮ್ಮ 'ಟೆಸ್ಲಾ' ಚಿತ್ರಕ್ಕೆ ತಾವೇ ಬಂಡವಾಳ ಹಾಕುತ್ತಿದ್ದಾರೆ.

  English summary
  Kannada actress and Biggboss fame Rekha is producing a movie. The movie titled as 'Dummy Piece'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X