»   » ಗುಂಡಾ ಕೂಡ ಹೇಳ್ತಿದ್ದಾನೆ ಈ ಸಲ ಕಪ್ ನಮ್ದೆ, ಯಾರು ಈ ಗುಂಡಾ ?

ಗುಂಡಾ ಕೂಡ ಹೇಳ್ತಿದ್ದಾನೆ ಈ ಸಲ ಕಪ್ ನಮ್ದೆ, ಯಾರು ಈ ಗುಂಡಾ ?

Posted By:
Subscribe to Filmibeat Kannada

'ಐಪಿಎಲ್' ಮ್ಯಾಚ್ ಶುರುವಾಗುವ ಮೊದಲೇ ಎಲ್ಲೆಡೆ ಕೇಳಿ ಬರುತ್ತಿರುವ ಸುದ್ದಿ ಅಂದರೆ ಈ ಸಲ ಕಪ್ ನಮ್ದೆ . ಕೇವಲ ಸಾಮಾನ್ಯ ಜನರು ಮಾತ್ರವಲ್ಲ ಸಿನಿಮಾ ಸ್ಟಾರ್ ಗಳು ಕೂಡ ಈ ಬಾರಿ 'ಆರ್ ಸಿ ಬಿ' ತಂಡವೇ ಪಕ್ ಗೆಲ್ಲುವುದು. ಕಪ್ ಇಂದು, ಮುಂದೆ ಎಂದೆಂದಿಗೂ ನಮ್ಮದೇ ಎನ್ನುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕಪ್ ಬಗೆಗಿನ ಪ್ರೀತಿ ಹೆಚ್ಚಾಗಿದೆ.

ನಟಿ ಹರಿಪ್ರಿಯಾ ಕೂಡ ಕಾಫಿ ಕಪ್ ಹಿಡಿದು ಈ ಸಲ ಕಪ್ ನಮ್ಮದೆ ಅಂತ ಸ್ಟೇಟಸ್ ಅಪ್ಡೇಟ್ ಮಾಡಿದ್ದರು. ಈಗ ಗುಂಡಾ 'ಆರ್ ಸಿ ಬಿ' ತಂಡದ ಟೀ-ಶರ್ಟ್ ಮತ್ತು ಕ್ಯಾಪ್ ಹಾಕಿಕೊಂಡು ಈ ಸಲ ಕಪ್ ನಮ್ದೆ ಅಂತಿದ್ದಾನೆ. ಅಷ್ಟಕ್ಕೂ ಈ ಗುಂಡಾ ಯಾರು ಅಂತೀರಾ? ಹೇಳ್ತಿವಿ ಕೇಳಿ, ಗುಂಡಾ ನಟಿ ಸಂಯುಕ್ತ ಹೊರನಾಡು ಅವರ ಮುದ್ದಿನ ನಾಯಿ ಮರಿ.

Kannada actress Samyuktha Horanadu said Ee Sala Cup Namde slogan.

ಹೊಸ ಅತಿಥಿಗಳನ್ನ ಮನೆಗೆ ಕರೆತಂದ ಸಂಯುಕ್ತ ಹೊರನಾಡು

ಪ್ರತಿ ಬಾರಿ ತಮ್ಮ ಪ್ರೀತಿಯ ಶ್ವಾನಗಳನ್ನ ಬಳಸಿಕೊಂಡು ಜಾಗೃತಿ ಸಂದೇಶ ಸಾರುವ ಸಂಯುಕ್ತ ಹೊರನಾಡು ಈ ಬಾರಿ ಕಪ್ ನಮ್ದೆ ಎನ್ನುವುದನ್ನ ವಿಭಿನ್ನ ಸ್ಟೈಲ್ ನಲ್ಲಿ ಹೇಳಲು ಹೊರಟಿದ್ದಾರೆ. ತಮ್ಮ ಪ್ರೀತಿಯ ಗುಂಡಾನಿಗೆ 'ಆರ್ ಸಿ ಬಿ' ಬಟ್ಟೆ ಹಾಕಿ ಫೋಟೋ ಶೂಟ್ ಮಾಡಿದ್ದಾರೆ.

Kannada actress Samyuktha Horanadu said Ee Sala Cup Namde slogan.

ಸದ್ಯ ಸಂಯುಕ್ತ ಅವರ ಗುಂಡಾನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿಭಿನ್ನ ಪ್ರಯತ್ನಕ್ಕೆ ಶ್ವಾನ ಪ್ರಿಯರು ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದಾರೆ.

English summary
This is how Kannada Actress Samyuktha Horanadu supported Royal Challengers Bengaluru team and said 'Ee sala cup namde'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X