Don't Miss!
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂಜನಾ ಗಲ್ರಾನಿ ಹೇಳಿದ್ದೇನು?: ಗಂಡು ಮಗು ಎಂದಿದ್ದೇಕೆ?
2020 ಹಾಗೂ 2021 ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿಗೆ ಆಶಾದಾಯಕವಾಗಿರಲಿಲ್ಲ. ಡ್ರಗ್ಸ್ ಕೇಸ್, ಅನಾರೋಗ್ಯ ಅಂತ ಸಂಜನಾ ಗಲ್ರಾನಿ ಎರಡು ವರ್ಷ ಸಂಕಷ್ಟದಲ್ಲಿ ಸಿಲುಕಿದ್ದರು. ಸಂಜನಾ ಜೈಲಿನಲ್ಲಿರುವಾಗಲೇ ರಹಸ್ಯವಾಗಿ ಮದುವೆ ಆಗಿರುವ ವಿಷಯ ಕೂಡ ಲೀಕ್ ಆಗಿತ್ತು. ಜೈಲಿನಿಂದ ಹೊರ ಬಂದ ಬಳಿಕ ಮದುವೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು ಬಳಿಕ ಒಪ್ಪಿಕೊಂಡಿದ್ದರು. ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದನ್ನು ಬಹಿರಂಗ ಪಡಿಸಿದ್ದಾರೆ.
ಸಂಜನಾ ಗಲ್ರಾನಿ 2020 ಹಾಗೂ 2021ರಲ್ಲಿ ತನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಹೊಸ ಜೀವನ ಕಂಡುಕೊಂಡಿದ್ದಾರೆ. 2022ಕ್ಕೆ ಅವರ ಬದುಕಿನಲ್ಲಿ ಹೊಸ ಅತಿಥಿಯ ಆಗಮನವಾಗಲಿದೆ. ಡ್ರಗ್ಸ್ ಪ್ರಕರಣದ ಬಳಿಕ ಜೈಲಿನಿಂದ ಹೊರಬಂದರೂ, ವೈಯುಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಮಾಹಿತಿಯನ್ನು ಹಂಚಿಕೊಳ್ಳದ ಸಂಜನಾ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದನ್ನು ಒಪ್ಪಿಕೊಂಡಿದ್ದಾರೆ.

ಸಂಜನಾ ಈಗ 5 ತಿಂಗಳ ಗರ್ಭಿಣಿ
'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಗಲ್ರಾನಿ ತಾಯಿಯಾಗುತ್ತಿರುವ ವಿಷಯವನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಜನಾ 'ನಾನೀಗ 5 ತಿಂಗಳ ಗರ್ಭಿಣಿ" ಎಂದು ಹೇಳಿಕೊಂಡಿದ್ದಾರೆ. " ನನಗೆ ನನ್ನ ಬದುಕಿಗೆ ತುಂಬಾನೇ ಧನ್ಯತೆ ಇದೆ. ಇದೊಂದು ಸುಂದರ ಜರ್ನಿ. ನನಗೆ ಗಂಡು ಮಗು ಆಗಲಿದೆ ಎನ್ನುವ ಭಾವನೆ ನನಗೆ ಬರುತ್ತಿದೆ." ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಗಂಡು ಮಗುವೇ ಜನಿಸುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ಇರುವುದೇಕೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಪ್ರೆಗ್ನೆನ್ಸಿ ಬಗ್ಗೆ ಭಯವಿತ್ತು
ಸಂಜನಾಗೆ ಮಕ್ಕಳು ಎಂದರೆ ತುಂಬಾನೇ ಇಷ್ಟವಂತೆ. ಹೀಗಾಗಿ ತಾನು ಗರ್ಭಿಣಿಯಾಗಿದ್ದೇನೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಸಂತಸ ಪಟ್ಟರಂತೆ. " ಪ್ರೆಗ್ನೆನ್ಸಿ ಬಗ್ಗೆ ನನಗೆ ಭಯವಿತ್ತು. ಗರ್ಭಿಣಿಯಾದ ಬಳಿಕ ದೇಹದಲ್ಲಾಗುವ ಬದಲಾವಣೆ ಬಗ್ಗೆ ಆತಂಕವಿತ್ತು. ಹೀಗಾಗಿ ನಾನು ಪ್ರೆಗ್ನೆನ್ಸಿಯನ್ನು ಮುಂದೂಡುತ್ತಲೇ ಇದ್ದೆ. ನನ್ನ ಪೋಷಕರು ಯಾವಾಗಲೂ ಮಕ್ಕಳು ಯಾವಾಗ ಮಾಡಿಕೊಳ್ಳುತ್ತೀಯ ಎಂದು ಕೇಳುತ್ತಲೇ ಇದ್ದರು. ನನಗೀಗ 34 ವರ್ಷ ಇದು ಸರಿಯಾದ ಸಮಯ ಎಂದುಕೊಂಡು, ನಾನು, ನನ್ನ ಗಂಡ ಮಗು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದೆವು." ಎಂದು ಸಂಜನಾ ಹೇಳಿದ್ದಾರೆ.

ಕೊನೆ ಎರಡು ವಾರದವರೆಗೂ ಆ್ಯಕ್ಟಿವ್ ಆಗಿರುತ್ತೇನೆ
ಸಂಜನಾ ಗಲ್ರಾನಿ ಮಗು ಜನಿಸುವವರೆಗೂ ಆ್ಯಕ್ಟಿವ್ ಆಗಿರಲು ಚಿಂತಿಸಿದ್ದಾರೆ. "ಮಗು ಹುಟ್ಟುವವರೆಗೂ ತುಂಬಾನೇ ಆ್ಯಕ್ಟಿವ್ ಆಗಿರಲು ತೀರ್ಮಾನಿಸಿದ್ದೇನೆ. ಮಗು ಜನಿಸುವ ಎರಡು ವಾರಗಳವರೆಗೂ ಕೆಲಸ ಮಾಡಲು ನಾನು ನಿರ್ಧರಿಸಿದ್ದೇನೆ. ಕೆಲ ಮಹಿಳೆಯನ್ನು ನೋಡಿ, ಅವರಿಂದ ಪ್ರೇರಣೆ ಹೊಂದಿದ್ದೇನೆ. ನಾನು ವಾರದಲ್ಲಿ 3-4 ದಿನ ಕೆಲಸ ಮಾಡಿದರೂ, ನಾನು ಬ್ಯುಸಿಯಾಗಿರುತ್ತೇನೆ." ಎಂದು ಮಗು ಜನಿಸುವವರೆಗೂ ಕೆಲಸ ಮಾಡುತ್ತೇನೆ ಎಂದು ಸಂಜನಾ ಮಾಹಿತಿ ಹಂಚಿಕೊಂಡಿದ್ದಾರೆ.

ವೈದ್ಯನೊಂದಿಗೆ ಸಂಜನಾ ವಿವಾಹ
ಜೈಲಿನಿಂದ ಹೊರ ಬಂದ ಬಳಿಕವೂ ಸಂಜನಾ ತನ್ನ ಮದುವೆ ಬಗ್ಗೆ ಮಾತಾಡಿರಲಿಲ್ಲ. ಆದರೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಸಂಜನಾ ಮದುವೆ ವಿವಾಹದ ಹುಟ್ಟನ್ನು ರಟ್ಟು ಮಾಡಿದ್ದರು. ಮೊದಲ ಲಾಕ್ ಡೌನ್‌ನಲ್ಲಿ ಮದುವೆಯಾಗಿದ್ದು, ಕೆಲವು ಕಾರಣಗಳಿಂದ ಆ ವಿಷಯವನ್ನು ಹಂಚಿಕೊಳ್ಳಲು ಸಾಧ್ಯವಾಗಿಲ್ಲವೆಂದು ಹೇಳಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಅಜೀಜ್ ಪಾಷಾರನ್ನು ಸಂಜನಾ ವಿವಾಹವಾಗಿದ್ದರು. ಸಂಜನಾ ಜೈಲಿನಲ್ಲಿದ್ದಾಗ, ಇಬ್ಬರೂ ಮದುವೆ ಆಗಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.