»   » ಶ್ರುತಿ ಹರಿಹರನ್ ಅವರ ಮುಂದಿನ ಚಿತ್ರ ಯಾರ ಜೊತೆ?

ಶ್ರುತಿ ಹರಿಹರನ್ ಅವರ ಮುಂದಿನ ಚಿತ್ರ ಯಾರ ಜೊತೆ?

Posted By:
Subscribe to Filmibeat Kannada

'ಲೂಸಿಯಾ' ಬೆಡಗಿ ನಟಿ ಶ್ರುತಿ ಹರಿಹರನ್ ಅವರು ಸದ್ಯಕ್ಕೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಯಶಸ್ಸಿನ ಮೂಲಕ ಗೆಲುವಿನ ನಗೆ ಬೀರುತ್ತಿದ್ದಾರೆ.

ಇದೀಗ ಇದೇ ಖುಷಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಸಿನಿಮಾ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಕ್ಕಾಗಿ ಡಬ್ಬಲ್ ಖುಷಿಯಾಗಿದ್ದಾರೆ.[ಉಪ್ಪಿಗೆ ಮತ್ತೆ ಹುಟ್ಟಿ ಬಾ ಅಂತ ಪತ್ರ ಬರೆದಿದ್ದು ಪ್ರೇಮಾ ಅವರಾ?]

Kannada Actress Sruthi Hariharan's next movie with Real Star Upendra

ಹೌದು ಉಪೇಂದ್ರ ಅವರು ತೆಲುಗಿನ 'ಸೊಗ್ಗಾಡೆ ಚಿನ್ನಿನಾಯನ' ಚಿತ್ರದ ರೀಮೇಕ್ ಮಾಡುತ್ತಿದ್ದು, ಈ ಚಿತ್ರಕ್ಕೆ ಈಗಾಗಲೇ ಖ್ಯಾತ ನಟಿ ಪ್ರೇಮ ಅವರು ಆಯ್ಕೆಯಾಗಿದ್ದಾರೆ. ಇದೀಗ ನಟಿ ಶ್ರುತಿ ಹರಿಹರನ್ ಅವರು ಕೂಡ ಸೇರ್ಪಡೆಗೊಂಡಿದ್ದಾರೆ.

ಈ ಚಿತ್ರದಲ್ಲಿ ಉಪೇಂದ್ರ ಅವರು ದ್ವಿಪಾತ್ರದಲ್ಲಿ ಮಿಂಚಲಿದ್ದು, ತೆಲುಗಿನಲ್ಲಿ ಲಾವಣ್ಯ ತ್ರಿಪಾಟಿ ಮಾಡಿದ್ದ ಪಾತ್ರವನ್ನು ನಟಿ ಶ್ರುತಿ ಹರಿಹರನ್ ಅವರು ನಿರ್ವಹಿಸಿದರೆ, ನಟಿ ರಮ್ಯಕೃಷ್ಣ ಮಾಡಿದ್ದ ಪಾತ್ರಕ್ಕೆ ನಟಿ ಪ್ರೇಮಾ ಅವರು ಜೀವ ತುಂಬಲಿದ್ದಾರೆ.['ಉಪೇಂದ್ರ' ಮತ್ತೆ ಹುಟ್ಟಿ ಬರ್ಬೇಕಂತೆ.! ಇದು 'ಪ್ರೇಮ' ಬಯಕೆ.!]

Kannada Actress Sruthi Hariharan's next movie with Real Star Upendra

ಒಬ್ಬ ದೊಡ್ಡ ನಟನೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದಕ್ಕೆ ಫುಲ್ ಖುಷ್ ಆಗಿರುವ ನಟಿ ಶ್ರುತಿ ಹರಿಹರನ್ ಅವರು 'ನಾನೊಬ್ಬಳು ನಟಿಯೇ ಹೊರತು, ಹೀರೋಯಿನ್ ಎಂಬ ವಸ್ತುವಲ್ಲ, ಎಲ್ಲಾ ರೀತಿಯ ಚಿತ್ರದಲ್ಲೂ ಹೊಸ ಪ್ರಯೋಗ ಮಾಡಲು ಇಚ್ಛಿಸುತ್ತೇನೆ' ಎಂದಿದ್ದಾರೆ.

Kannada Actress Sruthi Hariharan's next movie with Real Star Upendra

ಈ ಚಿತ್ರಕ್ಕಾಗಿ ಎಲ್ಲಾ ಸಿದ್ಧತೆಗಳು ಈಗಿನಿಂದಲೇ ನಡೆದಿದ್ದು, ಜೂ.19 ಕ್ಕೆ ಚಿತ್ರದ ಮುಹೂರ್ತ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ. ಜೂನ್ 24ರಿಂದ ಚಿತ್ರದ ಚಿತ್ರೀಕರಣ ಆರಂಭಿಸಲು 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಚಿತ್ರತಂಡ ನಿರ್ಧರಿಸಿದೆ.[ಉಪೇಂದ್ರಗೆ 'H2O' ಕುಡಿಸಿದವರು ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟರೆ.?]

Kannada Actress Sruthi Hariharan's next movie with Real Star Upendra

ಶ್ರೀರಾಮ ಅವರು ಬಂಡವಾಳ ಹೂಡುತ್ತಿರುವ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. 'H2O' ಚಿತ್ರದ ಖ್ಯಾತಿಯ ನಿರ್ದೇಶಕ ಎನ್ ಲೋಕನಾಥ್ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ.

English summary
After a good response in Actress Sruthi Hariharan's latest film 'Godhi Banna Sadharana Mykattu', she has bagged a role in 'Upendra Matte Hutti Ba, Inti Prema'. Kannada Actor Upendra, Kannada Actress Prema in the lead role. The movie is directed by N.Lokanath,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada