»   » ಮಹಿಳಾ ಪ್ರಧಾನ ಚಿತ್ರ 'ಉರ್ವಿ' ಟ್ರೈಲರ್ ನೋಡಿದ್ರಾ?

ಮಹಿಳಾ ಪ್ರಧಾನ ಚಿತ್ರ 'ಉರ್ವಿ' ಟ್ರೈಲರ್ ನೋಡಿದ್ರಾ?

Posted By:
Subscribe to Filmibeat Kannada

'ಲೂಸಿಯ' ಬೆಡಗಿ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ಅವರ ಮುಖ್ಯ ಭೂಮಿಕೆಯಲ್ಲಿ ಮೂಡಿಬರುತ್ತಿರುವ 'ಉರ್ವಿ' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ದಂಪತಿಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ನೆನ್ನೆ(ಫೆ.9) ಬಿಡುಗಡೆ ಮಾಡಿದ್ದಾರೆ. ಟ್ರೈಲರ್ ಈಗಾಗಲೇ 2.5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲನೇ ಸ್ಥಾನದಲ್ಲಿದೆ.['ಉರ್ವಿ' ಟ್ರೈಲರ್ ಬಿಡುಗಡೆ ಮಾಡಲಿರುವ 'ಯಶ್-ರಾಧಿಕಾ' ದಂಪತಿ]

'ಉರ್ವಿ' ಚಿತ್ರದಲ್ಲಿ ಶಕ್ತಿ, ಯುಕ್ತಿ ಮತ್ತು ಭಕ್ತಿ ಎಂಬ ಮೂರು ಪ್ರಧಾನ ಅಂಶಗಳನ್ನು ಮೂವರು ನಾಯಕಿಯರು ಪ್ರತಿನಿಧಿಸುತ್ತಿದ್ದು, ಒಂದು ಸಮಸ್ಯೆಯ ಮೇಲೆ ಮೂವರು ಮಹಿಳೆಯರು ಸಿಡಿದೇಳುವ ಮಹಿಳಾ ಪ್ರಧಾನ ಸಿನಿಮಾ ಇದಾಗಿದೆ.

Kannada Actress Sruthi Hariharan, Shradda srinath starrer 'Urvi' film Trailer

ವೇಶ್ಯಾವಾಟಿಕೆ ಜೊತೆಗೆ ಹಲವು ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಅಂಶಗಳನ್ನು 'ಉರ್ವಿ' ಸಿನಿಮಾ ಹೊಂದಿದ್ದು, ನೆಗೆಟಿವ್ ಶೇಡ್ ನಲ್ಲಿ ಅಚ್ಯುತ್ ಕುಮಾರ್ ಅಭಿನಯಿಸಿದ್ದಾರೆ. ಈ ಹಿಂದೆ ಟೀಸರ್ ಮೂಲಕವೇ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಚಿತ್ರ, ಈಗ ಟ್ರೈಲರ್ ಮೂಲಕ ಮತ್ತಷ್ಟು ಕುತೂಹಲ ಕೆರಳಿಸಿದೆ.

Kannada Actress Sruthi Hariharan, Shradda srinath starrer 'Urvi' film Trailer

ನವ ನಿರ್ದೇಶಕ ಪ್ರದೀಪ್ ವರ್ಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರತಂಡ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಸಿಕೊಂಡಿದೆ. 'ಉರ್ವಿ' ಟ್ರೈಲರ್ ನೋಡಿ ಕಿಚ್ಚ ಸುದೀಪ್, ಕಾನ್ಸೆಪ್ಟ್ ಮತ್ತು ಟ್ರೈಲರ್ ಬಗ್ಗೆ ಹೋಗಳಿ ಟ್ವೀಟ್ ಮಾಡಿದ್ದಾರೆ.

ಚಿತ್ರದ ಟ್ರೈಲರ್ ನೋಡಿ

English summary
Kannada Actress Sruthi Hariharan, Shradda srinath starrer 'Urvi' film Trailer Released. Sandalwood New Couple Yash And Radhika Pandit was released 'Urvi' movieTrailer.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada