For Quick Alerts
  ALLOW NOTIFICATIONS  
  For Daily Alerts

  ಐ ಆಮ್ ಇನ್ ಲವ್: ನಟಿಯರಿಗೆ ತಾರಾ ಮೇಡಂ ಪಾಠ

  |

  ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ನವನಟಿಯರಿಗೆ ಪಾಠ ಮಾಡಿದ್ದಾರೆ. ಇತ್ತೀಚಿಗೆ ನಡೆದ 'ಐ ಆಮ್ ಇನ್ ಲವ್' ಚಿತ್ರದ ಪತ್ರಿಕಾಗೋಷ್ಠಿಗೆ ಬಂದಿದ್ದ ಆ ಚಿತ್ರದ ನಟಿಯರಾದ ಕಾವ್ಯಾ ಶೆಟ್ಟಿ ಮತ್ತು ನೇಹಾ ಇಬ್ಬರಿಗೂ 'ಡ್ರೆಸ್ ಸಂಸ್ಕೃತಿ' ಬಗ್ಗೆ ತಾರಾ ಮೇಡಂ 'ಕಿವಿ ಮಾತು' ಪಬ್ಲಿಕ್ ಆಗಿ ಹೇಳಿರುವುದು ಹಾಗೂ ಅದನ್ನು ಆ ನಟಿಯರು ಅಲ್ಲೇ ಕೇಳಿ ಅಲ್ಲೇ ಬಿಟ್ಟ ಪ್ರಸಂಗ ನಡೆದಿದೆ.

  'ಐ ಆಮ್ ಇನ್ ಲವ್' ಚಿತ್ರದ ಪತ್ರಿಕಾಗೋಷ್ಠಿಗೆ ತಡವಾಗಿ ಬಂದ ತಾರಾ, ಈ ಇಬ್ಬರೂ ನಾಯಕಿ ನಟಿಯರು ಹಾಕಿಕೊಂಡಿದ್ದ ಡ್ರೆಸ್ ನೋಡಿ ಕೋಪಗೊಂಡಿದ್ದಾರೆ. ತಕ್ಷಣವೇ ಆ ಇಬ್ಬರು ನಟಿಯರನ್ನು ಕುರಿತು ತಾರಾ ಮೇಡಂ "ಸಿನಿಮಾದಲ್ಲೇನೋ ಓಕೆ, ಪಾತ್ರಕ್ಕೆ ತಕ್ಕ ಡ್ರೆಸ್ ಹಾಕಿಕೊಳ್ಳಲೇ ಬೇಕು. ಆದರೆ 'ಪ್ರೆಸ್ ಮೀಟ್' ಗಳಿಗೆ ಹೀಗೆಲ್ಲಾ ಬರೋದು ಸಭ್ಯತೆಯ ಲಕ್ಷಣವಲ್ಲ" ಎಂಬ ಮಾತು ಹೇಳಿ ನೆರೆದಿದ್ದವರಿಗೆ 'ಶಾಕ್' ಕೊಟ್ಟರು. ಕಾವ್ಯಾ ಹಾಗೂ ನೇಹಾ ಒಂದು ಕ್ಷಣ ತಬ್ಬಿಬ್ಬಾದರು.

  ಮುಂದುವರಿದ ತಾರಾ, "ನಮ್ಮ ಸಂಸ್ಕೃತಿ ಉಳಿಸಿ ಬೆಳೆಸೋದು ನಮ್ಮ ಕರ್ತವ್ಯ ಅಲ್ಲಾ? ಒಬ್ಬಳು ಹಿರಿಯ, ಅನುಭವಸ್ಥ ನಟಿಯಾಗಿ ಈ ಮಾತು ಹೇಳುತ್ತಿದ್ದೇನೆ. ನನ್ನ ಮಾತುಗಳಿಂದ ಯಾರೂ ಬೇಜಾರು ಮಾಡಿಕೊಳ್ಳಬೇಡಿ" ಎಂದು ಕೊನೆಯಲ್ಲಿ ಸೇರಿಸಿ ಎಲ್ಲರನ್ನೂ ತಮ್ಮ ಮಾತಿನೇಟಿನಿಂದ ಕಂಗಾಲಾಗಿಸಿದರು. ಚಿತ್ರದ ಪತ್ರಿಕಾಗೋಷ್ಠಿಯೇನೋ ಮುಗಿಯಿತಾದರೂ ಎಲ್ಲರೂ ತಾರಾ ಮಾತುಗಳನ್ನೇ ಚರ್ಚಿಸತೊಡಗಿದ್ದರು.

  ಅಲ್ಲಿದ್ದವರಲ್ಲೊಬ್ಬರು ತಾರಾ ಮೇಡಂಗೆ ಒಂದು ಬಾಣ ಬಿಟ್ಟರು..."ನೀವು ಚಿಕ್ಕ ನಟಿಯರಿಗಷ್ಟೇ ಹೇಳ್ತೀರಾ...ದೊಡ್ಡ ನಟಿಯರಿಗೆ ಯಾಕೆ ಹೇಳಲ್ಲ?". ತಕ್ಷಣ ತಾರಾ, "ಅಯ್ಯೋ ರಾಮಾ.., ನನಗೆ ಚಿಕ್ಕವರಾದ್ರೇನು ದೊಡ್ಡವರಾದ್ರೇನು? ರಾಗಿಣಿಗೂ ನಾನೊಮ್ಮೆ ಈ ಮಾತು ಹೇಳಿದೀನಿ. ನನ್ನ ಕಣ್ಣಿಗೆ ಬಿದ್ದಾಗ ಹೇಳೇ ಹೇಳ್ತೀನಿ... ಹುಡುಕಿಕೊಂಡು ಹೋಗಿ ಹೇಳೋಕಾಗುತ್ಯೇ?!" ಎಂದು ಮರುಬಾಣ ಬಿಟ್ಟು ಸುಮ್ಮನಾದರು.

  ಅದೆಲ್ಲಾ ಆದ್ಮೇಲೆ "ನಿಮಗೆ ತಾರಾ ಮಾತಿನಿಂದ ಏನು ಅನ್ನಿಸಿತು ಕಾವ್ಯಾ?" ಎಂದು ನಟಿಯರಲ್ಲೊಬ್ಬರನ್ನು ಕೇಳಲಾಗಿ "ಒಬ್ಬೊಬ್ಬರದು ಒಂದೊಂದು ಟೇಸ್ಟ್ ಇರುತ್ತೆ...ಅಭಿಪ್ರಾಯ ಇರುತ್ತೆ" ಎಂದು ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಿ ಇನ್ನೊಬ್ಬಳು ನಟಿ ನೇಹಾರನ್ನು ನೋಡಿದರು. ಅವರು 'ಅಷ್ಷೇ!' ಎನ್ನುವಂತೆ ಕಾವ್ಯಾಳ ಮಾತನ್ನು ಅನುಮೋದಿಸಿದರು. ಅಲ್ಲಿದ್ದ ಯಾರೋ 'ಅವರಿಷ್ಟದಂತೆ ಬದುಕುವ ಸ್ವಾತಂತ್ರಕ್ಕೆ ಎಲ್ಲರೂ ಬದ್ಧರು' ಎಂಬ ಮಾತನ್ನು ತಾರಾ ಸೇರಿದಂತೆ ಎಲ್ಲರೂ ಕೇಳಿಸಿಕೊಂಡರಂತೆ ಎಂಬಲ್ಲಿಗೆ ಈ ಸುದ್ದಿ ಸಮಾಪ್ತಿ. (ಒನ್ ಇಂಡಿಯಾ ಕನ್ನಡ)

  English summary
  Kannada Actress and the President of Karnatala Chalanachitra Academy Tara taught a 'Lesson' to the actress of that film. In the 'I Am In Love' Movie Press meet, Tara told about the 'Dress Code Lesson' to the actress Kavya Shetty and Neha that coming to Press Meet like this dress is not decency. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X