For Quick Alerts
  ALLOW NOTIFICATIONS  
  For Daily Alerts

  ನೀರು ನಿಲ್ಲಿಸಿ, ಅದೇನಾಗುತ್ತೋ ನೋಡೋಣ: ತಾರಾ

  |

  ನಟಿ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ಇಂದು ಸುಪ್ರಿಮ್ ಕೋರ್ಟ್ ನೀಡಿರುವ ಕಾವೇರಿ ನೀರು ಹಂಚಿಕೆ ಸಂಬಂಧ ತಮ್ಮ ಮೌನ ಮುರಿದ್ದಾರೆ. "ಕೇಂದ್ರ ಸರ್ಕಾರ ಈ ರೀತಿ ಮಾಡಬಹುದು ಎಂದು ಮೊದಲೇ ಗೊತ್ತಿತ್ತು. ಇದು ಬೇಕಂತಲೇ ಎಳೆದಾಡುತ್ತಿರುವ ವಿಷಯ. ತಕ್ಷಣಕ್ಕೆ ಬಗೆಹರಿಸಬಹುದಾದ ಈ ವಿಷಯವನ್ನು 25 ದಿನಗಳಾದರೂ ಬಗೆಹರಿಸದೇ ಮತ್ತೆ ಪ್ರಧಾನಿ ಬಳಿಗೆ ಹೋಗಿ ಎಂದಿರುವುದು ನಿಜವಾಗಿಯೂ ಬೇಸರದ ಸಂಗತಿ.

  ಪದೇ ಪದೇ ಕಾವೇರಿ ನೀರಿನ ವಿವಾದ ಕರ್ನಾಟಕ ಹಾಗೂ ತಮಿಳುರಾಜ್ಯಗಳ ನಡುವೆ ಸಂಭವಿಸುತ್ತಿದ್ದರೂ ಅದಕ್ಕೊಂದು ಶಾಶ್ವತ ಪರಿಹಾರ ಕೊಡಲು ಕೇಂದ್ರ ಸರ್ಕಾರ ವಿಫಲವಾಗಿದೆ. ಅಷ್ಟೇ ಅಲ್ಲ, ನಮ್ಮ ರಾಜ್ಯದ ರಾಜಕಾರಣಿಗಳೂ ಕೂಡ ಈ ವಿಷಯದಲ್ಲಿ ಸೂಕ್ತ ನ್ಯಾಯ ದೊರಕಿಸಿಕೊಳ್ಳಲು ವಿಫಲವಾಗಿವೆ. ಹೀಗೆ ರಾಜಕೀಯ ಮಾಡಿ ತಮ್ಮನ್ನು ಆರಿಸಿಕಳುಹಿಸಿದ ಪ್ರಜೆಗಳಿಗೆ ಅನ್ಯಾಯ ಮಾಡುವುದಕ್ಕಿಂತ ರಾಜಿನಾಮೆ ನೀಡುವುದೇ ಸೂಕ್ತ" ಎಂದಿದ್ದಾರೆ ತಾರಾ.

  ಮುಂದುವರಿದ ತಾರಾ "ತುಂಬಾ ದಿನಗಳು ಅಧಿಕಾರದಲ್ಲಿ ಇರುವುದಕ್ಕಿಂತ ನಾಲ್ಕೇ ದಿನಗಳು ಇದ್ದರೂ ತೊಂದರೆಯಿಲ್ಲ. ಹರಿದುಹೋಗುತ್ತಿರುವ ನೀರನ್ನು ಮೊದಲು ನಿಲ್ಲಿಸಿ. ಇರುವ ನಾಲ್ಕು ದಿನಗಳಲ್ಲಿ ಹೀರೋ ಆಗಿಯೇ ಇರೋಣ. ಸಾಮೂಹಿಕ ರಾಜಿನಾಮೆ ನೀಡುವ ಪ್ರಸಂಗ ಬಂದರೂ ಬರಲಿ. ಆದರೆ ತಕ್ಷಣವೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಿ" ಎಂದು ಮಾಧ್ಯಮಕ್ಕೆ ನೀಡಿರುವ ಹೇಳಿಕೆಯಲ್ಲಿ ಗುಡುಗಿದ್ದಾರೆ ನಟಿ ತಾರಾ.

  ಇತ್ತೀಚಿಗಷ್ಟೇ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆಯಾಗಿರುವ ತಾರಾ, ಮೊನ್ನೆ (06 ಅಕ್ಟೋಬರ್ 2012) ನಡೆದ ಕಾವೇರಿ ಬಂದ್ ಸಂದರ್ಭದಲ್ಲಿ ಚಿತ್ರರಂಗವು ನಡೆಸಿದ ಕಾವೇರಿ ಪರ ಚಳುವಳಿಯಲ್ಲಿ ಭಾಗಿಯಾಗಿದ್ದರು. ಅಂದು ಕೂಡ ಸಕ್ರಿಯರಾಗಿ ಭಾಗವಹಿಸಿದ್ದ ತಾರಾ ದಿಟ್ಟ ಹೇಳಿಕೆ ನೀಡಿ ಗಮನಸೆಳೆದಿದ್ದರು. ತಾರಾ ಮಾತುಗಳನ್ನು ಕೇಳುತ್ತಿದ್ದರೆ ನಾಲ್ಕೇ ದಿನ ಅಧಿಕಾರದಲ್ಲಿದ್ದರೂ ದಿಟ್ಟ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ತಾರಾ ಅವರದ್ದು ಎನ್ನಬಹುದು. (ಒನ್ ಇಂಡಿಯಾ ಕನ್ನಡ)

  English summary
  Kannada Actress and Karnataka Film Association President Tara told to stop Cauvery Water to Tamilnadu. She spoke in the media about this on present issue Cauvery Water. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X