»   » ಉದಯೋನ್ಮುಖ ನಟಿ ವಿಂಧ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್

ಉದಯೋನ್ಮುಖ ನಟಿ ವಿಂಧ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್

Posted By:
Subscribe to Filmibeat Kannada

ಬಾಯ್ ಫ್ರೆಂಡ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಶ್ರೀವಿಂಧ್ಯಾ ಅವರ ದೇಹಾರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಶ್ರೀವಿಂಧ್ಯಾ ಅವರು ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳಿಸಲಾಗಿದೆ ಎಂದು ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ಪ್ರೇಮಿಯೊಬ್ಬನ ಕಾಟಕ್ಕೆ ಬಳಲಿದ್ದ ವಿಂಧ್ಯಾ ಅವರು ತಮ್ಮ ತಾಯಿ ನಾಗಮ್ಮ ಅವರು ಮಧುಮೇಹಕ್ಕೆ ಬಳಸುತ್ತಿದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸುಮಾರು 40-50 ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟ ವಿಂಧ್ಯಾ ಅವರನ್ನು ಬೌರಿಂಗ್ ಆಸ್ಪತ್ರೆ ವೈದ್ಯರು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಂಧ್ಯಾ ಅವರು ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯವರ ತಮ್ಮ ನಿವಾಸಕ್ಕೆ ತೆರಳಿದ್ದಾರೆ.

ಬೆಂಗಳೂರಿನ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ವಿಂಧ್ಯಾ ಅವರ ದೇಹಸ್ಥಿತಿ ಕಳೆದ ಕೆಲ ದಿನಗಳ ಹಿಂದೆ ವಿಷಯ ಸ್ಥಿತಿ ತಲುಪಿತ್ತು. ವಿಂಧ್ಯಾ ಅವರನ್ನು ಕಳೆದ ವಾರ ಎಪ್ಪತ್ತೆರಡು ಗಂಟೆಗಳ ಕಾಲ ಅಬ್ಸರ್ ವೇಷನ್ ನಲ್ಲಿ ಇಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸಿದ ವಿಂಧ್ಯಾ ಅವರು ಈಗ ಸಂಪೂರ್ಣ ಗುಣಮುಖರಾಗಿದ್ದು, ವಿಶ್ರಾಂತಿ ಪಡೆದುಕೊಳ್ಳಬೇಕಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಖಾದ್ರಿ ಅವರು ವಿಂಧ್ಯಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿವರ ನೀಡಿದ್ದಾರೆ.

Kannada actress Vindhya Discharged from Bowring Hospital Bangalore

ಶ್ರೀಕಾಂತ್ ಉರುಫ್ ಶ್ರೀಕಿ ಜೊತೆ ನಾಯಕಿಯಾಗಿ ಅಭಿನಯಿಸಿರುವ 'ಮನದ ಮರೆಯಲ್ಲಿ' ಚಿತ್ರ ಇನ್ನೇನು ಬಿಡುಗಡೆಯಾಗಬೇಕಿದೆ. ಮಂಜುನಾಥ ಎಂಬ ಆಕೆಯ ಬಾಯ್ ಫ್ರೆಂಡ್ ಕೊಡುತ್ತಿದ್ದ ಕಿರುಕುಳದಿಂದ ಬೇಸತ್ತು ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಡಿಸೆಂಬರ್ 2013ರಲ್ಲಿ ಮಂಜುನಾಥ್ ಪರಿಚಯವಾಗಿದೆ. ವಿಂಧ್ಯಾ ಸಹ ಆತನನ್ನು ಲವ್ ಮಾಡುತ್ತಿದ್ದಳು. ಆದರೆ ಆತನ ಸ್ವಭಾವ ಇಷ್ಟವಾಗದೆ ದೂರ ಉಳಿದಿದ್ದಾಳೆ. ಮದುವೆ ಆಗಲ್ಲ ಎಂದು ದೂರ ಸರಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಜುನಾಥನೇನಾದರೂ ವಿಂಧ್ಯಾ ಅವರಿಗೆ ಮೆಂಟಲಿ ಟಾರ್ಚರ್ ಕೊಟ್ಟಿದ್ದಾನಾ? ಅದರಿಂದ ಏನಾದರೂ ವಿಂದ್ಯಾ ಆತ್ಮಹತ್ಯೆಗೆ ಯತ್ನಿಸಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ರಂಗಭೂಮಿ ಹಿನ್ನೆಲೆಯುಳ್ಳ ವಿಂಧ್ಯಾ ಅವರ ತಂದೆ ತಾಯಿ ಇಬ್ಬರಿಗೂ ದೃಷ್ಟಿ ದೋಷವಿದೆ. ಮನದ ಮರೆಯಲ್ಲಿ ಚಿತ್ರದ ನಿರ್ದೇಶಕ ರಾಜೀವ್ ನೇತ್ರ ಹಾಗೂ ನಿರ್ಮಾಪಕ ಮಹೇಶ್ ಗೌಡ ಅವರು ವಿಂಧ್ಯಾ ಮನೆ ಪರಿಸ್ಥಿತಿ ನೋಡಿ ಪ್ರತಿಭಾವಂತೆ ವಿಂಧ್ಯಾಗೆ ಚಿತ್ರದಲ್ಲಿ ಅವಕಾಶ ನೀಡಿದ್ದರು. ಚಿತ್ರತಂಡಕ್ಕೆ ಈಕೆ ಪ್ರೇಮ ಕಥೆ -ವ್ಯಥೆ ಗೊತ್ತಿತ್ತು. ಆದರೆ, ಯಾರೊಬ್ಬರ ನೆರವನ್ನು ಆಕೆ ಈ ವಿಷಯದಲ್ಲಿ ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ. [ವಿಂಧ್ಯಾ 'ಮನದ ಮರೆಯಲ್ಲಿ' ಏನು ನಡೀತು?]

English summary
The budding Kannada actress Vindhya, who was hospitalised on 4th March has been discharged from Bowring and Lady Curzon Hospital, Bangalore today(Mar.9). Vindhya attempted suicide by consuming excess sugar treatment pills, has turned critical.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada