For Quick Alerts
  ALLOW NOTIFICATIONS  
  For Daily Alerts

  ನಟಿ ವಿಂಧ್ಯಾ ಅವರ ತಂದೆ ರಾಮಸ್ವಾಮಿ ಏನಂತಾರೆ?

  By ಉದಯರವಿ
  |

  ಕನ್ನಡದ ಉದಯೋನ್ಮುಖ ನಟಿ ವಿಂಧ್ಯಾ ಅವರು ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಅವರ ತಂದೆ ರಾಮಸ್ವಾಮಿ ಮಾಧ್ಯಮಗಳ ಮುಂದೆ ಅಸಲಿ ಏನು ನಡೆಯಿತು ಎಂಬುದನ್ನು ಹೇಳಿದರು. ರಾಮಸ್ವಾಮಿ ಅವರಿಗೆ ಕಣ್ಣು ಕಾಣದಿದ್ದರೂ ಅವರ ಒಳಗಣ್ಣು ಮಗಳ ಬಗ್ಗೆ ಸದಾ ಗಮನಿಸುತ್ತಿತ್ತು. ಅವರ ಮಾತುಗಳಲ್ಲಿ ತನ್ನ ಮಗಳ ತಪ್ಪು ಮಾಡಿದ್ದಾಳೆ ಎಂಬ ಭಾವ ಹಾಗೂ ಒಬ್ಬ ಬೇಜವಾಬ್ದಾರಿ ಹುಡುಗ ಹೇಗೆಲ್ಲಾ ಆಟವಾಡಿದ ಎಂಬುದು ವ್ಯಕ್ತವಾಗುತ್ತಿತ್ತು.

  ಈಗ ವಿಂಧ್ಯಾ ಕಂಡೀಷನ್ ಪರ್ವಾಗಿಲ್ಲ. ವೈದ್ಯರು ವಾಮಿಟ್ ಮಾಡಿಸಿದ್ದಾರೆ. ಈಗ ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ. ಈಗವಳು ಔಟ್ ಆಫ್ ಡೇಂಜರ್. ಚಿಕ್ಕಿಂದಿನಿಂದಲೂ ಚಿತ್ರಗಳಲ್ಲಿ ಆಕ್ಟ್ ಮಾಡಬೇಕು ಎಂಬ ಆಸೆಯಿತ್ತು. ದೇವರ ದಯೆಯಿಂದ ಅವಕಾಶವೂ ಸಿಕ್ಕಿತು. ಈಗ 'ಮನದ ಮರೆಯಲ್ಲಿ' ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ.

  ಇತ್ತೀಚೆಗೆ ಮಂಜುನಾಥ್ ಎಂಬ ಹುಡುಗ ಆಕೆಯನ್ನು ಲವ್ ಮಾಡುತ್ತಿದ್ದ. ಅವಳನ್ನು ನಂಬಿಸಿ ಜನವರಿಯಲ್ಲಿ ಶಿಮ್ಲಾಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಅವನ ಅಸಲಿ ಬಂಡವಾಳ ಬಯಲಾಗಿದೆ. ತುಂಬಾ ಒರಟಾಗಿ ಮಾತನಾಡುವುದು ಇವೆಲ್ಲವೂ ಅವಳಿಗೆ ಗೊತ್ತಾಗಿದೆ. ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಅಲ್ಲಿಂದ ಬಂದ ಮೇಲೆ ವಿಂಧ್ಯಾ ಅವನ ಬಗ್ಗೆ ಅಸಡ್ಡೆ ತೋರುತ್ತಿದ್ದಳು. ಇವಳಿಗೆ ಫೋನ್ ಮಾಡಿ ಅವನು ಬಾಯಿಗೆ ಬಂದಂತೆ ಮಾತನಾಡುತ್ತಿದ್ದ.

  ಒಂದು ದಿನ ತಡರಾತ್ರಿಯಲ್ಲಿ ನಮ್ಮ ಮನೆಗೆ ಬಂದವನೇ ಮಾತನಾಡಬೇಕು ಬಾಗಿಲು ತೆಗೆಯಿರಿ ಎಂದ. ನಾನು ಇಷ್ಟೊತ್ತಿನಲ್ಲಿ ಬಾಗಿಲು ತೆಗೆಯಲ್ಲ. ಬೆಳಗ್ಗೆ ಮಾತನಾಡೋಣ ಎಂದು ಹೇಳಿ ಕಳುಹಿಸಿದ್ದೆ. ಇವನು ಬೆಳಗ್ಗೆ ಸೀದಾ ಖಾಸಗಿ ಟಿವಿ ವಾಹಿನಿಯೊಂದಕ್ಕೆ ಹೋಗಿ ಅಲ್ಲಿ ವಿಂಧ್ಯಾ ಬಗ್ಗೆ ಇಲ್ಲಸಲ್ಲದ್ದನ್ನೆಲಾ ಹೇಳಿದ್ದಾನೆ. ಅವಳ ಜೊತೆಗಿನ ಫೋಟೋಗಳನ್ನೆಲ್ಲಾ ತೋರಿಸಿದ್ದಾನೆ.

  ಇಬ್ಬರೂ ಲವ್ ಮಾಡಿರುವುದು ನಿಜ. ಆದರೆ ಅವನು ಏಕಾಏಕಿ ತನ್ನ ಬಗ್ಗೆ ಈ ರೀತಿ ಮಾಡಿದ್ದು ವಿಂಧ್ಯಾಳಿಗೆ ತುಂಬಾ ಬೇಸರ ತರಿಸಿತ್ತು. ಎರಡು ಮೂರು ದಿನಗಳಿಂದ ಊಟ ಮಾಡದೆ ಚಿಂತೆಯಲ್ಲಿದ್ದಳು. ನಾನು ಸಮಾಧಾನ ಮಾಡಿದೆ. ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಅವರು ಖಿನ್ನತೆಗೆ ಒಳಗಾಗಿದ್ದಳು.

  ನನ್ನ ಪತ್ನಿ ಬಳಸುವ ಶುಗರ್ ಟ್ಯಾಬ್ಲೆಟ್ ಗಳನ್ನು ಮನೆಯಲ್ಲಿ ಇಟ್ಟಿದ್ದೆವು. ಅವಳು ಏಕಾಏಕಿ 40-50 ಟ್ಯಾಬ್ಲೆಟ್ ತಗೊಂಡಿದ್ದಾಳೆ. ನನ್ನಿಂದ ಎಲ್ಲರಿಗೂ ತೊಂದರೆಯಾಗಿದೆ. ಅವನು ನನಗೆ ಬಹಳ ಅವಮಾನ ಮಾಡಿದ್ದಾನೆ. ಹೊರಗಡೆ ತಲೆಯೆತ್ತಿ ತಿರುಗಲು ಆಗುತ್ತಿಲ್ಲ. ನನಗೆ ಬದುಕಕ್ಕೇ ಬೇಜಾರಾಗಿದೆ ಎಂದು ಹೇಳಿದಳು.

  ಹೆಚ್ಚಿಗೆ ಶುಗರ್ ಟ್ಯಾಬ್ಲೆಟ್ ತೆಗೆದುಕೊಂಡ ಕಾರಣ ಪ್ರಜ್ಞೆತಪ್ಪಿ ಬಿದ್ದಳು. ಕೂಡಲೆ ಅವಳನ್ನು ಬೌರಿಂಗ್ ಆಸ್ಪತ್ರೆಗೆ ಸೇರಿಸಿದೆವು. ಮಂಜುನಾಥನಿಗೂ ಇವಳಿಗೂ ಕೇವಲ ಮೂರು ತಿಂಗಳಿಂದ ಪರಿಚಯವಿದೆ. ಆಗಾಗ ಮನೆಗೆ ಬರುವುದು ಹೋಗುವುದು ಮಾಡುತ್ತಿದ್ದ. ಅವನು ಕರೆಕ್ಟಾಗಿದ್ದಿದ್ದರೆ ಇವಳು ಈ ರೀತಿ ಮಾಡುತ್ತಿರಲಿಲ್ಲ. ಆದರೆ ಅವನು ಪಕ್ಕಾ ಸ್ಲಂ ಹುಡುಗರ ತರಹ ಮಾತನಾಡುತ್ತಿದ್ದ. ಒಂದು ಹೆಣ್ಣಿಗೆ ಹೇಗೆ ಗೌರವ, ಬೆಲೆ ಕೊಡಬೇಕು ಎಂಬ ಯೋಚನೆಯೇ ಅವನಿಗಿಲ್ಲ.

  ಅವಳಿಗೆ ಅವನ ನಡವಳಿಕೆ ಹಿಡಿಸಲಿಲ್ಲ. ಕೆಲದಿನಗಳ ಹಿಂದೆ ಇವರೆಲ್ಲಾ ಹೊರಗೆ ಹೋಗಿದ್ದರು. ಅಲ್ಲಿಂದ ಬಂದ ಮೇಲೆ ಅವನ ಬಗ್ಗೆ ನನಗೆ ಗೊತ್ತಾಯಿತು. ಸಿಗರೇಟಲ್ಲಿ ಅವಳಿಗೆ ಸುಟ್ಟಿದ್ದಾನೆ. ಹೊಡೆದಿದ್ದಾನೆ. ಫೋಟೋಗಳನ್ನು ತೆಗೆದುಕೊಂಡಿದ್ದಾನೆ.

  ಚಿತ್ರರಂಗದಲ್ಲಿ ಇವಳು ಸೆಟ್ಲ್ ಆಗುತ್ತಿದ್ದಾಳೆ. ಈ ಫೋಟೋಗಳನ್ನು ಇಟ್ಟುಕೊಂಡು ಇವಳ ಹತ್ತಿರ ದುಡ್ಡು ಕೀಳಬೇಕು ಎಂಬ ಉದ್ದೇಶದಿಂದ ಅವನು ಆ ರೀತಿ ಮಾಡಿದ್ದಾನೆ. ಮದುವೆಯಾಗುವ ಉದ್ದೇಶವೂ ಅವನಿಗಿಲ್ಲ. ಹೀಗೇ ರೋಲ್ ಕಾಲ್ ಮಾಡುವ ಉದ್ದೇಶ ಅವನದು. ಇವಳು ಬಲಿಯಾಗಿದ್ದಾಳೆ ಅಷ್ಟೇ.

  ಮನದ ಮರೆಯಲ್ಲಿ ಚಿತ್ರ ಪ್ರೊಮೋಟ್ ಆಗಬೇಕಾದ ಸಮಯಕ್ಕೆ ಸರಿಯಾಗಿ ಅವನು ಈ ರೀತಿ ಮಾಡಿದ್ದಾನೆ. ನಾಲ್ಕು ವರ್ಷಗಳ ಬಳಿಕ ಮಂಜುನಾಥನನ್ನು ಮದುವೆಯಾಗಬೇಕು ಎಂದಿದ್ದಳು. ಆದರೆ ಅವನ ಸ್ವಭಾವ ಇಷ್ಟವಾಗದೆ ಅವನಿಂದ ದೂರವಿದ್ದಳು. ಲೈವ್ ಪ್ರೋಗ್ರಾಂನಲ್ಲಿ ಅವಳ ಜೊತೆಗಿನ ಫೋಟೋಗಳನ್ನು ತೋರಿಸಿ ಅವಮಾನ ಮಾಡಿದ್ದರಿಂದ ತುಂಬಾ ನೊಂದು ಈಗ ಈ ರೀತಿ ಮಾಡಿಕೊಂಡಿದ್ದಾಳೆ.

  English summary
  Kannada actress Vindhya's father Ramaswamy reacts on her behavior and love matter. Vindhya has attempted suicide on Monday (3rd March) night and admitted to Bowrin hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X