»   » ಹೊಸ ಸಾಹಸ ಮಾಡುತ್ತಿರುವ ಕನ್ನಡದ ಯುವ ನಟಿಯರು

ಹೊಸ ಸಾಹಸ ಮಾಡುತ್ತಿರುವ ಕನ್ನಡದ ಯುವ ನಟಿಯರು

Posted By:
Subscribe to Filmibeat Kannada

ಕನ್ನಡದ ಯುವ ನಟಿಯರು ಕಿರುಚಿತ್ರದ ಬಗ್ಗೆ ತುಂಬ ಒಲವನ್ನು ಹೊಂದಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡಿರುವ ಈ ನಟಿಯರು ಕಿರುಚಿತ್ರಗಳಲ್ಲಿಯೂ ಕಮಾಲ್ ಮಾಡಿದ್ದಾರೆ.

ಬಾಲಿವುಡ್ ರೀತಿ ಕನ್ನಡದ ನಟಿಯರು ಈಗ ಕಿರುಚಿತ್ರಗಳಲ್ಲಿ ನಟಿಸುವುದು ಹೆಚ್ಚಾಗುತ್ತಿದೆ. ನಟನೆ, ನಿರ್ದೇಶನ, ನಿರ್ಮಾಣ.... ಹೀಗೆ ಕಿರುಚಿತ್ರಗಳಲ್ಲಿ ಈ ನಟಿಯರು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.

ಪ್ರಜ್ವಲ್ ದೇವರಾಜ್ ಪತ್ನಿ ಅಭಿನಯದ 'ರಿಷಭಪ್ರಿಯ' ಪೋಸ್ಟರ್ ಬಿಡುಗಡೆ

ಕನ್ನಡದ ಜನಪ್ರಿಯ ನಟಿಯರ ಕೆಲ ಕಿರುಚಿತ್ರಗಳ ವಿವರ ಇಲ್ಲಿದೆ ಓದಿ...

ಶ್ರದ್ಧಾ ಶ್ರೀನಾಥ್

ಸದ್ಯ ಕನ್ನಡದ ಬಹು ಬೇಡಿಕೆಯ ನಟಿ ಅಂದರೆ ಶ್ರದ್ಧಾ ಶ್ರೀನಾಥ್. 'ಯೂ ಟರ್ನ್' ಬೆಡಗಿ ಶ್ರದ್ಧಾ ಈ ಹಿಂದೆ 'ಒಂದಾನೊಂದು ದಿನ' ಎಂಬ ಒಂದು ವಿಭಿನ್ನ ಕಿರುಚಿತ್ರದಲ್ಲಿ ನಟಿಸಿದ್ದರು.

ನಟಿ ಶ್ರದ್ಧಾ ಶ್ರೀನಾಥ್ ಬರೆದ 'ಒಂದು ಮೊಟ್ಟೆಯ ಕಥೆ' ವಿಮರ್ಶೆ

ಶೃತಿ ಹರಿಹರನ್

ನಟಿ ಶೃತಿ ಹರಿಹರನ್ ಸಹ ಕಿರುಚಿತ್ರದ ಬಗ್ಗೆ ಸಖತ್ ಕ್ರೇಜ್ ಹೊಂದಿದ್ದಾರೆ. 'ಎ ಬಿ ಸಿ' ಸೇರಿದಂತೆ ಕೆಲ ಶಾರ್ಟ್ ಫಿಲ್ಮ್ ಗಳಲ್ಲಿ ಶೃತಿ ಹರಿಹರನ್ ಬಣ್ಣ ಹಚ್ಚಿದ್ದಾರೆ.

ರಾಧಿಕಾ ಚೇತನ್

'ರಂಗಿತರಂಗ' ಚಿತ್ರದ ನಟಿ ರಾಧಿಕಾ ಚೇತನ್ 'ನೆವರ್ ಎಂಡ್' ಎಂಬ ಕಿರುಚಿತ್ರದಲ್ಲಿ ನಾಯಕಿಯಾಗಿದ್ದರು. 'ರಂಗಿತರಂಗ' ಯಶಸ್ಸಿನ ಬಳಿಕ ರಾಧಿಕಾ ಈ ಶಾರ್ಟ್ ಫಿಲ್ಮ್ ಮೂಲಕ ಗಮನ ಸೆಳೆದಿದ್ದರು.

ಮೂಗುತಿ ಸುಂದರಿಯರ ಸಾಲಿಗೆ ಸೇರಿದ ರಶ್ಮಿಕಾ ಮಂದಣ್ಣ

ರಚಿತಾ ರಾಮ್

ನಟಿ ರಚಿತಾ ರಾಮ್ ಈಗ ಒಂದು ಕಿರುಚಿತ್ರವನ್ನು ನಿರ್ಮಿಸುತ್ತಿದ್ದಾರೆ. 'ರಿಷಭಾಪ್ರಿಯ' ಎಂಬ ಹೆಸರಿನ ಈ ಕಿರುಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ನಟಿಸುತ್ತಿದ್ದಾರೆ.

ಐಶಾನಿ ಶೆಟ್ಟಿ

ನಟಿ ಐಶಾನಿ ಶೆಟ್ಟಿ ಸಹ ಈಗ ಒಂದು ಕಿರುಚಿತ್ರವನ್ನು ನಿರ್ದೇಶನ ಮಾಡುವುದಕ್ಕೆ ಹೊರಟಿದ್ದಾರೆ. ಈ ಹಿಂದೆ 'ವಾಸ್ತು ಪ್ರಕಾರ' ಮತ್ತು 'ರಾಕೆಟ್' ಚಿತ್ರಗಳಲ್ಲಿ ನಾಯಕಿಯಾಗಿ ಐಶಾನಿ ಕಾಣಿಸಿಕೊಂಡಿದ್ದರು.

English summary
Here is the list of Kannada actresses In Short films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada