»   » ಕನ್ನಡದ ಈ ಹುಡುಗಿಯರಿಗೆ ಪರಭಾಷೆಯಲ್ಲಿ ಇರುವ ಡಿಮ್ಯಾಂಡ್ ನೋಡಿ!

ಕನ್ನಡದ ಈ ಹುಡುಗಿಯರಿಗೆ ಪರಭಾಷೆಯಲ್ಲಿ ಇರುವ ಡಿಮ್ಯಾಂಡ್ ನೋಡಿ!

Posted By:
Subscribe to Filmibeat Kannada

ಒಂದು ಕಾಲಕ್ಕೆ ಪರಭಾಷೆ ನಟಿಯರನ್ನು ಕನ್ನಡಕ್ಕೆ ಕರೆತರುವ ಪದ್ಧತಿ ಹೆಚ್ಚಾಗಿತ್ತು. ಈಗಲೂ ಕೂಡ ಅದು ಮುಂದುವರೆದಿದೆ. ಬೇರೆ ಭಾಷೆಯ ದೊಡ್ಡ ದೊಡ್ಡ ನಟಿಯರನ್ನು ಅವರು ಕೇಳಿದ ಸಂಭಾವನೆ ಕೊಟ್ಟು ಗಾಂಧಿನಗರಕ್ಕೆ ಕರೆ ತರುತ್ತಾರೆ. ಪೂರ್ಣ ಸಿನಿಮಾದಲ್ಲಿ ನಟನೆ ಮಾಡದಿದ್ದರು, ಒಂದು ಹಾಡಿನಲ್ಲಿ ಆದರು ಬೇರೆ ಭಾಷೆಯ ನಟಿ ಇದ್ದರೆ ಸಿನಿಮಾ ಹಿಟ್ ಆಗುತ್ತದೆ ಎನ್ನುವುದು ಕೆಲವು ನಿರ್ಮಾಪಕರ ನಂಬಿಕೆ.

ಆದರೆ ಈಗ ಕನ್ನಡದ ನಟಿಯರಿಗೆ ಪರಭಾಷೆಯಲ್ಲಿ ಡಿಮ್ಯಾಂಡ್ ಜಾಸ್ತಿಯಾಗಿದೆ. ಸ್ಯಾಂಡಲ್ ವುಡ್ ಯುವ ನಟಿಯರಾದ ರಶ್ಮಿಕಾ ಮಂದಣ್ಣ, ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಸಂಯುಕ್ತ ಹೆಗ್ಡೆ ಈಗ ತಮಿಳು, ತೆಲುಗು ಮಲೆಯಾಳಂ ನಲ್ಲಿ ಹೆಸರು ಮಾಡುತ್ತಿದ್ದಾರೆ. ತಮ್ಮ ಪ್ರತಿಭೆ ಮೂಲಕ ಇಲ್ಲಿ ಯಶಸ್ಸು ಗಳಿಸಿದ ಈ ನಟಿಯರು ಅಲ್ಲಿಯೂ ಮಿಂಚುತ್ತಿದ್ದಾರೆ. ಮುಂದೆ ಓದಿ...

ಟಾಲಿವುಡ್ ನಲ್ಲಿ ರಶ್ಮಿಕಾ ಮಂದಣ್ಣ ಮೋಡಿ

'ಕಿರಿಕ್ ಪಾರ್ಟಿ' ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಈಗ ಎರಡು ದೊಡ್ಡ ಚಿತ್ರವನ್ನು ಮಾಡುತ್ತಿದ್ದಾರೆ. ಅದರ ಜೊತೆಗೆ ಟಾಲಿವುಡ್ ನಲ್ಲಿಯೂ ಎರಡು ಸಿನಿಮಾಗಳಿಗೆ ರಶ್ಮಿಕಾ ನಾಯಕಿ ಆಗಿದ್ದಾರೆ. ರಶ್ಮಿಕಾ ಅವರ 'ಚಲೋ' ಚಿತ್ರ ಇದೇ ತಿಂಗಳು ರಿಲೀಸ್ ಆಗಲಿದ್ದು, ತಮ್ಮ ಎರಡನೇ ಚಿತ್ರದಲ್ಲಿ 'ಅರ್ಜುನ್ ರೆಡ್ಡಿ' ಖ್ಯಾತಿಯ ವಿಜಯ್ ದೇವರುಕೊಂಡಗೆ ರಶ್ಮಿಕಾ ನಾಯಕಿ ಆಗಿದ್ದಾರೆ.

ಕಾಲಿವುಡ್ ನಲ್ಲಿ ಶ್ರದ್ಧಾ ಶ್ರೀನಾಥ್ ಮಿಂಚು

'ಯೂ ಟರ್ನ್' ಮೂಲಕ ಕನ್ನಡಕ್ಕೆ ಕಾಲಿಟ್ಟ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ತಮಿಳಿನಲ್ಲಿಯೂ ಒಳ್ಳೆಯ ಹೆಸರು ಮಾಡಿದ್ದಾರೆ. ಈಗಾಗಲೇ 'ವಿಕ್ರಂ ವೇದ' ಸೇರಿದಂತೆ ತಮಿಳಿನಲ್ಲಿ ಮೂರು ಸಿನಿಮಾದಲ್ಲಿ ನಟಿಸಿದ್ದಾರೆ. 'ಉಳಿದವರು ಕಂಡತೆ' ತಮಿಳು ರಿಮೇಕ್ 'ರಿಚ್ಚಿ' ಚಿತ್ರದಲ್ಲಿಯೂ ಶ್ರದ್ಧಾ ನಾಯಕಿ ಆಗಿದ್ದಾರೆ.

ಟಾಲಿವುಡ್ ನಲ್ಲಿ 'ತಾರಕ್' ಚೆಲುವೆ: ಚತುರ್ಭಾಷಾ ನಟಿ ಆದ ಶೃತಿ ಹರಿಹರನ್

ಚತುರ್ಭಾಷಾ ನಟಿ ಆದ ಶೃತಿ ಹರಿಹರನ್

ಕನ್ನಡ, ತಮಿಳು, ಮಲೆಯಾಳಂ ನಲ್ಲಿ ನಟಿಸಿದ್ದ ಶೃತಿ ಹರಿಹರನ್ ಇತ್ತೀಚಿಗೆ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಎಲ್ಲ ಭಾಷೆಯ ಸಿನಿಮಾದಲ್ಲಿ ನಟಿಸಿದ ಖ್ಯಾತಿ ಪಡೆದಿರುವ ಶೃತಿ ಚತುರ್ಭಾಷಾ ನಟಿ ಆಗಿದ್ದಾರೆ.

ತಮಿಳು ಸೂಪರ್ ಸ್ಟಾರ್ ವಿಜಯ್ ಗೆ ಶ್ರದ್ಧಾ ಶ್ರೀನಾಥ್ ನಾಯಕಿ.!

ತಮಿಳು ಮತ್ತು ತೆಲುಗಿನಲ್ಲಿ ಸಂಯುಕ್ತ ಹೆಗ್ಡೆ

'ಕಿರಿಕ್ ಪಾರ್ಟಿ' ಚಿತ್ರದ ಮತ್ತೊಬ್ಬ ನಾಯಕಿ ಸಂಯುಕ್ತ ಹೆಗ್ಡೆ ಕೂಡ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ತಮಿಳಿನಲ್ಲಿ ನಟ ಪ್ರಭುದೇವ ಚಿತ್ರದಲ್ಲಿ ಸಂಯುಕ್ತ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜೊತೆಗೆ 'ಕಿರಿಕ್ ಪಾರ್ಟಿ' ತೆಲುಗು ರಿಮೇಕ್ ನಲ್ಲಿ ತಮ್ಮ ಪಾತ್ರವನ್ನು ತಾವೇ ನಿರ್ವಹಿಸಲಿದ್ದಾರೆ.

English summary
List of Kannada actresses who have more movie offers in other languages.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada