For Quick Alerts
  ALLOW NOTIFICATIONS  
  For Daily Alerts

  ಮದುವೆಯ ಮೆಹೆಂದಿ ಸಂಭ್ರಮದಲ್ಲಿ ನಟಿ ಜಾಕಿ ಭಾವನಾ

  By Pavithra
  |
  ಮದುವೆಯ ಸಂಭ್ರಮದಲ್ಲಿ ನಟಿ ಜಾಕಿ ಭಾವನಾ | Filmibeat Kannada

  ಕಳೆದ ವರ್ಷ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ಭಾವನಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರ್ನಾಟಕ ಮೂಲದ ನಿರ್ಮಾಪಕ ನವೀನ್ ಕುಮಾರ್ ಅವರ ಜೊತೆ ಭಾವನಾ ಸಪ್ತಪದಿ ತುಳಿದಿದ್ದಾರೆ. ಹಿಂದೂ ಸಂಪ್ರದಾಯದಂತೆ ಇಂದು(ಜ:22) ಮದುವೆ ಶಾಸ್ತ್ರಗಳು ಜರುಗಿವೆ.

  ಕೇರಳದ ತ್ರಿಶೂರ್ ನಲ್ಲಿರುವ ತಿರುವಂಬಾಡಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಮದುವೆಯ ಮಹೂರ್ತ ಸಮಾರಂಭ ನಡೆದಿದೆ. ಭಾವನಾ ಅವರ ಸಂಬಂಧಿಕರು ಹಾಗೂ ನವೀನ್ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ.

  ಮದುವೆ ಮುಂಚೆ ಭಾವನಾ ಅವರ ಮೆಹೆಂದಿ ಸಮಾರಂಭ ಅದ್ದೂರಿಯಾಗಿ ನಡೆದಿದ್ದು ಕಾರ್ಯಕ್ರಮದ ವಿಡಿಯೋ ಸಖತ್ ವೈರಲ್ ಆಗಿದೆ. ಭಾವನಾ ಜೊತೆ ಮಲೆಯಾಳಂನ ಅನೇಕ ನಟಿಯರು ಮಧುವಿನ ಜೊತೆ ಹೆಜ್ಜೆ ಹಾಕಿದ್ದಾರೆ. ಮೆಹೆಂದಿ ಸಂಭ್ರಮ ಹೇಗಿತ್ತು? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

  ನಟಿ ಭಾವಾನ ಮದುವೆ ಸಂಭ್ರಮ

  ನಟಿ ಭಾವಾನ ಮದುವೆ ಸಂಭ್ರಮ

  ಜಾಕಿ ಸಿನಿಮಾ ಮೂಲಕ ಕರ್ನಾಟಕದಲ್ಲಿ ಪ್ರಖ್ಯಾತಿ ಗಳಿಸಿರುವ ನಟಿ ಭಾವನಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಗೂ ಮುಂಚೆ ಮೆಹೆಂದಿ ಸಮಾರಂಭ ನಡೆದಿದ್ದು ಅನೇಕ ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

  ಹಳದಿ ಬಣ್ಣದ ವಸ್ತ್ರದಲ್ಲಿ ಭಾವನಾ ಮಿಂಚು

  ಹಳದಿ ಬಣ್ಣದ ವಸ್ತ್ರದಲ್ಲಿ ಭಾವನಾ ಮಿಂಚು

  ಮೆಹೆಂದಿ ಶಾಸ್ತ್ರದಲ್ಲಿ ಭಾವನಾ ಹಳದಿ ಬಣ್ಣದ ಸಿಂಪಲ್ ಗೌನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೇರಳದಲ್ಲಿರುವ ಅನೇಕ ಸಿನಿಮಾ ಸ್ನೇಹಿತರು ಮೆಹೆಂದಿ ಸಂಭ್ರಮದಲ್ಲಿ ಭಾಗಿಯಾಗಿ ಡ್ಯಾನ್ಸ್ ಮಾಡಿದ್ದಾರೆ.

  ಮೆಹೆಂದಿ ಮೇಕಿಂಗ್ ವಿಡಿಯೋ

  ಮೆಹೆಂದಿ ಮೇಕಿಂಗ್ ವಿಡಿಯೋ

  ಮೆಹೆಂದಿ ಸಂಭ್ರಮ ಅದ್ದೂರಿಯಾಗಿಯೇ ನಡೆದಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಮೆಹೆಂದಿ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿದೆ.

  ಬೆಂಗಳೂರಿನಲ್ಲಿ ಆರತಕ್ಷತೆ

  ಬೆಂಗಳೂರಿನಲ್ಲಿ ಆರತಕ್ಷತೆ

  ಫೆಬ್ರವರಿ 4 ರಂದು ಬೆಂಗಳೂರಿನಲ್ಲಿ ಭಾವನಾ ಹಾಗೂ ನವೀನ್ ಆರತಕ್ಷತೆ ನಡೆಯಲಿದೆ. ಸ್ಯಾಂಡಲ್ ವುಡ್ ನ ಸ್ಟಾರ್ ಗಳು ರಿಸೆಪ್ಷನ್ ನಲ್ಲಿ ಭಾಗಿಯಾಗಲಿದ್ದು ಆರತಕ್ಷತೆ ನಡೆಯುವ ಸ್ಥಳವನ್ನ ಮಾತ್ರ ಇನ್ನೂ ಬಿಟ್ಟುಕೊಟ್ಟಿಲ್ಲ.

  English summary
  Kannada and Malayalam Actress Bhavana getting married today(jan;22). Many Kerala celebrities have been involved in the Bhavana's Mehndi ceremony .actress Bhavana married Kannada producer Naveen

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X