»   » ಡಿಟಿಎಸ್ ನಲ್ಲಿ ಶಿವಣ್ಣ ಮಚ್ಚು ಹಿಡಿದ ಮೊದಲ ಚಿತ್ರ ಓಂ

ಡಿಟಿಎಸ್ ನಲ್ಲಿ ಶಿವಣ್ಣ ಮಚ್ಚು ಹಿಡಿದ ಮೊದಲ ಚಿತ್ರ ಓಂ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಲಾಂಗು ಮಚ್ಚುಗಳ ಪರಂಪರೆಗೆ ನಾಂದಿ ಹಾಡಿದ ಚಿತ್ರ 'ಓಂ'. ಈ ಚಿತ್ರ ಹೊಸ ಮೈಲಿಗಲ್ಲು ಸೃಷ್ಟಿಸಿದ್ದು ಮತ್ತೊಂದು ದಾಖಲೆ. ಇದೀಗ ಹೊಸ ತಂತ್ರಜ್ಞಾನದಲ್ಲಿ ಮತ್ತೆ ಶಿವಣ್ಣ ಅಭಿಮಾನಿಗಳ ಮುಂದೆ ಬರುತ್ತಿದೆ.

ಈಗಾಗಲೆ ಈ ಚಿತ್ರ ಸಾಕಷ್ಟು ಸಲ ರೀ ರಿಲೀಸ್ ಆಗಿ ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದಿದೆ. ಇದೀಗ ಹೊಸ ಡಿಐ ಹಾಗೂ ಡಿಟಿಎಸ್ ನಲ್ಲಿ ತೆರೆಕಾಣುತ್ತಿರುವುದು ವಿಶೇಷ.

ಸದ್ಯಕ್ಕೆ ಈ ಚಿತ್ರಕ್ಕೆ ಹೊಸ ತಂತ್ರಜ್ಞಾನ ಅಳವಡಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಇನ್ನೂ ಬಿಡುಗಡೆ ದಿನಾಂಕ ಗೊತ್ತಿಲ್ಲದಿದ್ದರೂ ಶೀಘ್ರದಲ್ಲೇ ಚಿತ್ರರಸಿಕರ ಮುಂದೆ ಬರಲಿದೆ. ಈ ಚಿತ್ರ ಬಾಕ್ಸ್ ಆಫೀಸಲ್ಲಿ ರು.25 ಕೋಟಿ ಗಳಿಸುವ ಮೂಲಕ ದಾಖಲೆ ಬರೆದಿತ್ತು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Kannada blockbuster Om re release in DTS technology

ಬೆಂಗಳೂರು ಭೂಗತ ಜಗತ್ತಿಗೆ ಸಂಬಂಧಿಸಿದ ಹಲವಾರು ಸನ್ನಿವೇಶಗಳು ಚಿತ್ರದಲ್ಲಿದ್ದು, ಹೊಡಿಬಡಿ ದೃಶ್ಯಗಳು ಅತಿಯಾಗಿವೆ ಎಂಬ ವಿವಾದಕ್ಕೂ ಚಿತ್ರ ಕಾರಣವಾಗಿತ್ತು. ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನಕಣ್ಣು ರಾಜೇಂದ್ರ, ಕೊರಂಗು, ತನ್ವೀರ್ ಸೇರಿದಂತೆ ಹಲವರು ರಿಯಲ್ ರೌಡಿಗಳು ಚಿತ್ರದಲ್ಲಿ ಅಭಿನಯಿಸಿದ್ದರು.

ಸತ್ಯ ಆಗಿ ಶಿವಣ್ಣ ಹಾಗೂ ಮಧು ಪಾತ್ರದಲ್ಲಿ ಪ್ರೇಮಾ ಅಭಿನಯಿಸಿರುವ ಈ ಚಿತ್ರ ಇಂದಿಗೂ ಪ್ರೇಕ್ಷಕರನ್ನು ಸೆಳೆಯುವ ಎಲ್ಲ ಅಂಶಗಳನ್ನು ಒಳಗೊಂಡಿದೆ. ಹಂಸಲೇಖ ಸಂಗೀತ, ಶಶಿಕುಮಾರ್ ಸಂಕಲನ ಹಾಗೂ ಬಿ.ಸಿ.ಗೌರಿಶಂಕರ್ ಛಾಯಾಗ್ರಹಣ ಚಿತ್ರಕ್ಕಿದೆ. ಡಾ.ರಾಜ್ ಕುಟುಂಬದ ಸ್ಞಂತ ಬ್ಯಾನರ್ ವಜ್ರೇಶ್ಞರಿ ಕಂಬೈನ್ಸ್ ನಿರ್ಮಾಣದ ಚಿತ್ರ. (ಏಜೆನ್ಸೀಸ್)

English summary
Kannada blockbuster Om, which is the biggest hit in the history of Sandalwood, is getting re-released soon. However, this is not the first time the movie is getting re-released, but the special attraction for this time will be the technical touch for the movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada