»   » ಹೊಸ ವರ್ಷಕ್ಕೆ ಸ್ಯಾಂಡಲ್ ವುಡ್ ಗೆ ಹೊಸ ನಾಯಕನ ಎಂಟ್ರಿ

ಹೊಸ ವರ್ಷಕ್ಕೆ ಸ್ಯಾಂಡಲ್ ವುಡ್ ಗೆ ಹೊಸ ನಾಯಕನ ಎಂಟ್ರಿ

Posted By:
Subscribe to Filmibeat Kannada
ಹೊಸ ವರ್ಷಕ್ಕೆ ಸ್ಯಾಂಡಲ್ ವುಡ್ ಗೆ ಹೊಸ ನಾಯಕನ ಎಂಟ್ರಿ | Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಅದ್ದೂರಿಯಾಗಿರುವ ಸಿನಿಮಾಗಳನ್ನು ನಿರ್ಮಾಣ ಮಾಡಿ ಗಂಡುಗಲಿ ನಿರ್ಮಾಪಕ ಅಂತಾಲೇ ಹೆಸರು ಪಡೆದಿರುವ ನಿರ್ಮಾಪಕ ಕೆ.ಮಂಜು. ಸಾಕಷ್ಟು ನಾಯಕ ನಟರನ್ನು ಸಿನಿಮಾರಂಗಕ್ಕೆ ಪರಿಚಯಿಸಿರುವ ಕೆ.ಮಂಜು ಸ್ಯಾಂಡಲ್ ವುಡ್ ಗೆ ಈಗ ಹೊಸ ನಟನನ್ನು ಪರಿಚಯಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ.

ಹಲವಾರು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಪಳಗಿರುವ ಕೆ.ಮಂಜು ಒಬ್ಬ ನಾಯಕನಿಗೆ ಇರಬೇಕಾದ ಕ್ವಾಲಿಟಿಗಳೇನು ಎನ್ನುವುದನ್ನು ಚೆನ್ನಾಗಿ ಅರಿತಿದ್ದಾರೆ. ಈ ಹಿನ್ನಲೆಯಲ್ಲಿ ತಾವು ಇಂಟ್ರೊಡ್ಯೂಸ್ ಮಾಡುತ್ತಿರುವ ನಾಯಕನನ್ನು ಪರ್ಫೆಕ್ಟ್ ಆಗಿ ರೆಡಿ ಮಾಡುವ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಅಷ್ಟಕ್ಕೂ ಕೆ.ಮಂಜು ಪರಿಚಯಿಸುತ್ತಿರುವ ಆ ನಾಯಕ ನಟ ಯಾರು ಎಂಬುದು ಮುಂದೆ ಓದಿ...

ಸ್ಯಾಂಡಲ್ ವುಡ್ ಗೆ ಹೊಸ ನಾಯಕನ ಎಂಟ್ರಿ

ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ರನ್ನು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಳೆದ ವರ್ಷವೇ ಕೆ ಮಂಜು ಮಗನಿಗಾಗಿ ಸಿನಿಮಾ ನಿರ್ಮಾಣ ಮಾಡುತ್ತಾರೆ ಎನ್ನುವ ಸುದ್ದಿಗಳು ಹರಿಡಿತ್ತು. ಆದರೆ ಈಗ ನಿರ್ಮಾಪಕರು ತಮ್ಮ ಮಗನ ಲಾಂಚ್ ಗಾಗಿ ಡೇಟ್ ಫಿಕ್ಸ್ ಮಾಡಿದ್ದಾರೆ.

ಯಾರು ಹಿತವರು ಮೂವರಲ್ಲಿ

2018 ಜನವರಿಯಲ್ಲಿ ಶ್ರೇಯಸ್ ಕೆ ಮಂಜು ಅಭಿನಯದ ಚಿತ್ರ ಸೆಟ್ಟೇರಲಿದೆ. ಯೋಗರಾಜ್ ಭಟ್, ಇಮ್ರಾನ್ ಸರ್ದಾರಿಯಾ, ಗುರು ದೇಶ್ ಪಾಂಡೆ ಈ ಮೂವರಲ್ಲಿ ಒಬ್ಬರ ಕತೆಯನ್ನು ಆಯ್ಕೆ ಮಾಡಿಕೊಳ್ಳಲು ಕೆ.ಮಂಜು ನಿರ್ಧಾರ ಮಾಡಿದ್ದಾರೆ.

ಒಳ್ಳೆ ಕತೆಗಾಗಿ ಕಾಯುತ್ತಿರುವ ಕೆ ಮಂಜು

ಮಗನನ್ನು ಒಂದು ವರ್ಷದಿಂದಲೇ ಸಿನಿಮಾಗಾಗಿ ತಯಾರಿ ಕೊಡಿಸುತ್ತಿರುವ ಕೆ ಮಂಜು ಹೈದರಾಬಾದ್ ನಲ್ಲಿ ರಾಮ್ ಚರಣ್ ತೇಜಾ, ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಇನ್ನು ಅನೇಕರು ತರಬೇತಿ ಪಡೆದುಕೊಂಡ ಜಾಗದಲ್ಲಿ ಮಗನ ನಟನೆಯ ಕೋರ್ಸ್ ಮಾಡಿಸಿದ್ದಾರೆ. ಇದರ ಜೊತೆಯಲ್ಲಿ ಪಾಂಡಿಚೇರಿ ಯಲ್ಲಿ ಕಲರಿಫೈಟು ಟ್ರೈನಿಂಗ್ ಕೊಡಿಸಿದ್ದಾರೆ. ಇಮ್ರಾನ್ ಸರ್ದಾರಿಯಾ ಟೀಂನಲ್ಲಿ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ.

ಒಳ್ಳೆ ನಾಯಕನಾಗುವ ಭರವಸೆ

23 ವರ್ಷದ ಶ್ರೇಯಸ್ ರಿಗೆ ಈ ಹಿಂದೆಯೇ ಸಾಕಷ್ಟು ಆಫರ್ ಗಳು ಬಂದಿತ್ತು. 'ಕೆಂಡಸಂಪಿಗೆ' ಸಿನಿಮಾದಲ್ಲಿಯೇ ಶ್ರೇಯಸ್ ಅಭಿನಯಿಸಬೇಕಿತ್ತು. ಆದರೆ ಪರ್ಫೆಕ್ಟ್ ಆದ ನಂತರವೇ ನಾಯಕ ಆಗಲಿ ಎನ್ನುವುದು ಕೆ ಮಂಜು ಅವರ ನಿರ್ಧಾರ. ಇದೇ ಕಾರಣಕ್ಕೆ ಶ್ರೇಯಸ್ ಮುಂದಿನ ವರ್ಷ ಸ್ಯಾಂಡಲ್ ವುಡ್ ನಲ್ಲಿ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ.

English summary
Kannada cinema producer K Manju is introducing his son Sreyas. while Shreyas movie will be set in 2018.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada