twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರರಂಗದಲ್ಲಿ ಬರಹಗಾರರ ಬರಕ್ಕೆ ಇದೇ ಕಾರಣ

    By Pavithra
    |

    ಕನ್ನಡ ಸಿನಿಮಾರಂಗದಲ್ಲಿ ಒಳ್ಳೆ ಒಳ್ಳೆ ಸಿನಿಮಾಗಳು ಬರುತ್ತಿವೆ. ಹೊಸ ಕಲಾವಿದರು ತಂತ್ರಜ್ಞರು ಕೂಡ ಹುಟ್ಟುಕೊಳ್ಳುತ್ತಿದ್ದಾರೆ. ಆದರೂ ಚಿತ್ರರಂಗದಲ್ಲಿ ಒಂದು ಕೊರತೆ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎನ್ನುವುದು ಅನೇಕ ನಿರ್ಮಾಪಕ ಹಾಗೂ ಪ್ರೇಕ್ಷಕರ ಅಭಿಪ್ರಾಯ.

    ಹೌದು ಸ್ಯಾಂಡಲ್ ವುಡ್ ನಲ್ಲಿ ಬರಹಗಾರರಿಲ್ಲ ಎನ್ನುವ ಮಾತಿದೆ. ಇನ್ನೊಂದು ಕಡೆ ಬರಹಗಾರರಿಗೆ ಸರಿಯಾದ ಸ್ಥಾನ ಮಾನ ಸಿಗುತಿಲ್ಲ ಎನ್ನುವುದನ್ನು ಸ್ಟಾರ್ ಕಲಾವಿದರೇ ಹೇಳಿದ್ದಾರೆ. ಇತ್ತೀಚಿಗೆ ಕನ್ನಡ ಸಿನಿಮಾರಂಗದಲ್ಲಿ ಬರಹಗಾರರು ಕಡಿಮೆ ಆಗುತ್ತಿದ್ದಾರೆ.

    ಅಭಿಮಾನಿಗಳ ಆಸೆಯಂತೆ ಇವರು 'ಗೀತಾ' ಆಗಬೇಕಂತೆ ಅಭಿಮಾನಿಗಳ ಆಸೆಯಂತೆ ಇವರು 'ಗೀತಾ' ಆಗಬೇಕಂತೆ

    ಉತ್ತಮ ಬೆಳವಣಿಗೆಗಾಗಿ ಬರಹಗಾರರು ಬೇರೆ ದಾರಿ ತುಳಿಯುತ್ತಿರುವುದೆ ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ ಈ ಹಿಂದೆ ಇದ್ದ ಬರಹಗಾರರು ಚಿತ್ರರಂಗಕ್ಕೆ ಕೊಡುಗೆ ನೀಡುವ ಉದ್ದೇಶದಿಂದಲೇ ಬೇರೆ ಕಡೆ ಮುಖ ಮಾಡಿದ್ದಾರೆ. ಹಾಗಾದರೆ ಚಂದನವನದಲ್ಲಿ ರೈಟರ್ಸ್ ಕಡಿಮೆ ಆಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ, ಮುಂದೆ ಓದಿ

    ನಿರ್ದೇಶಕರಾದ ಬರಹಗಾರರು

    ನಿರ್ದೇಶಕರಾದ ಬರಹಗಾರರು

    ಸಿನಿಮಾ ಬರಹಗಾರರಾಗಿ ಗುರುತಿಸಿಕೊಂಡಿದ್ದ ಸಾಕಷ್ಟು ಜನರು ಡೈರೆಕ್ಟರ್ ಆಗಲು ಮುಂದಾಗಿದ್ದು ಇತ್ತ ಸಿನಿಮಾಗಳಿಗೆ ಬರೆಯಲು ಬರಹಗಾರ ಅಭಾವ ಎದುರಾಗಿದೆ.

    ಸ್ಟಾರ್ ಡೈರೆಕ್ಟರ್ ಆದ ಸಂತೋಷ್

    ಸ್ಟಾರ್ ಡೈರೆಕ್ಟರ್ ಆದ ಸಂತೋಷ್

    'ರಾಜಕುಮಾರ' ಸಿನಿಮಾ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಬರಹಗಾರರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಆದರೆ ಈಗ ಫುಲ್ ಟೈಂ ಡೈರೆಕ್ಟರ್. ಸಂತೋಷ್ ಗ್ಯಾಂಗ್ ನಲ್ಲಿದ್ದ ವಿಜಯ ನಾಗೇಂದ್ರ ಕೂಡ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ.

    ಪ್ರಶಾಂತ್ ರಾಜಪ್ಪ ಈಗ ನಿರ್ದೇಶಕ

    ಪ್ರಶಾಂತ್ ರಾಜಪ್ಪ ಈಗ ನಿರ್ದೇಶಕ

    'ವಿಕ್ಟರಿ', 'ರನ್ನ', 'ಅಧ್ಯಕ್ಷ' ಸಿನಿಮಾಗಳಲ್ಲಿ ಸಂಭಾಷಣೆಕಾರನಾಗಿ ಕೆಲಸ ಮಾಡಿದ್ದ ಪ್ರಶಾಂತ್ ರಾಜಪ್ಪ ಈಗ ನಿರ್ದೇಶಕರಾಗಿ ಮೊದಲ ಚಿತ್ರ ಡೈರೆಕ್ಟ್ ಮಾಡುತ್ತಿದ್ದಾರೆ. ಅನಿಶ್ ತೇಜೇಶ್ವರ್ ಅಭಿನಯದ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

    ಮಂಜು ಮಾಂಡವ್ಯ ಕೂಡ ನಿರ್ದೇಶಕ

    ಮಂಜು ಮಾಂಡವ್ಯ ಕೂಡ ನಿರ್ದೇಶಕ

    'ಮಾಸ್ಟರ್ ಪೀಸ್' ಸಿನಿಮಾ ಡೈರೆಕ್ಟ್ ಮಾಡಿದ ನಿರ್ದೇಶಕ ಮಂಜು ಮಾಂಡವ್ಯ ಕೂಡ ಸಂಭಾಷಣೆಕಾರನಾಗಿ ಗುರುತಿಸಿಕೊಂಡವರು..ಆದರೆ ಈಗ ಮಂಜು ಅಭಿನಯ ಹಾಗೂ ನಿರ್ದೇಶನದಲ್ಲಿ ಬ್ಯುಸಿ ಆಗಿದ್ದಾರೆ.

    ದರ್ಶನ್ ತಂಡದ ಚಿಂತನ್ ಈಗ ನಿರ್ದೇಶಕ

    ದರ್ಶನ್ ತಂಡದ ಚಿಂತನ್ ಈಗ ನಿರ್ದೇಶಕ

    ದರ್ಶನ್ ಅವರ ಬಹುತೇಕ ಸಿನಿಮಾಗಳಿಗೆ ಸಂಭಾಷಣೆ ಬರೆಯುತ್ತಿದ್ದರು ಚಿಂತನ್. ದರ್ಶನ್ ಅಭಿಮಾನಿಗಳಿಗೆ ತಕ್ಕಂತ ಡೈಲಾಗ್ ಬರೆಯುತ್ತಿದ್ದ ಚಿಂತನ್ ಕಳೆದ ವರ್ಷವೇ ನಿರ್ದೇಶಕರಾದರು..

    ನಿರ್ದೇಶನದತ್ತ ಒಲುವು

    ನಿರ್ದೇಶನದತ್ತ ಒಲುವು

    ಚಂದನವನದಲ್ಲಿ ಡೈಲಾಗ್ ರೈಟರ್ ಆಗಿಯೇ ಗುರುತಿಸಿಕೊಂಡಿರುವ ರಘು ನಿಡುವಳ್ಳಿ, ಯೋಗನಂದ ಮುದ್ದಾನ್, ಅನಿಲ್ ಕುಮಾರ್ ಇನ್ನು ಅನೇಕರು ಸದ್ಯ ತಾವೇ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದ ಸ್ಯಾಂಡಲ್ ವುಡ್ ನಲ್ಲಿ ಬರಹಗಾರರಿಗೆ ಬರ ಬಂದಿದೆ.

    ಬರಹಗಾರರಾಗಿ ಉಳಿದಿರುವ ಮಾಸ್ತಿ

    ಬರಹಗಾರರಾಗಿ ಉಳಿದಿರುವ ಮಾಸ್ತಿ

    ಸದ್ಯ ಗಾಂಧಿನಗರದ ಅಂಗಳದಲ್ಲಿ ಸಿನಿಮಾ ಬರಹಗಾರರಾಗಿ ಉಳಿದುಕೊಂಡಿರುವುದು 'ಟಗರು' ಸಿನಿಮಾ ಖ್ಯಾತಿಯ ಮಾಸ್ತಿ. ಅವರ ಜೊತೆಯಲ್ಲಿ ಶರತ್ ಚಕ್ರವರ್ತಿ ಕೂಡ ಬರವಣಿಗೆಯ ಮೂಲಕ ಚಿತ್ರರಂಗದಲ್ಲಿ ಉಳಿದುಕೊಳ್ಳುವ ಸೂಚನೆ ಕೊಡುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಇವರು ಡೈರೆಕ್ಷನ್ ಕಡೆ ಗಮನ ಕೊಟ್ಟರೆ ಮತ್ತಷ್ಟು ತೊಂದರೆ ಎದುರಾಗುತ್ತೆ.

    English summary
    Kannada cinema writers focus on directing. For this reason, cinema writers are getting less.
    Thursday, September 6, 2018, 17:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X