»   » ನಾನು ಹೇಮಂತ್ ಅವಳು ಸೇವಂತಿ ಕಾಮಿಡಿ ಟಾನಿಕ್

ನಾನು ಹೇಮಂತ್ ಅವಳು ಸೇವಂತಿ ಕಾಮಿಡಿ ಟಾನಿಕ್

Posted By:
Subscribe to Filmibeat Kannada
Naanu Hemanth Avalu Sevanthi
ಇತ್ತೀಚೆಗೆ ಈ ರೀತಿಯ ಮಾರುದ್ದ ಟೈಟಲ್ ಚಿತ್ರಗಳೇ ಬಹಳ ಅಪರೂಪವಾಗಿದ್ದರು. ಈಗ ಅಂತಹದ್ದೇ ಒಂದು ಚಿತ್ರ ಬರುತ್ತಿದೆ. ಚಿತ್ರದ ಶೀರ್ಷಿಕೆ "ನಾನು ಹೇಮಂತ್ ಅವಳು ಸೇವಂತಿ". ಈ ಚಿತ್ರದ ಅಡಿಬರಹವೂ ಅಷ್ಟೇ ಉದ್ದವಾಗಿದೆ. "ನಗೋದಕ್ಕೆ ಕಂಜೂಸ್ ಯಾಕೆ" ಎಂಬುದು ಚಿತ್ರದ ಸಬ್ ಟೈಟಲ್.

ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಸುಧಾಕರ್ ಬನ್ನಂಜೆ. ಈ ಹಿಂದೆ ಇವರು 'ದೇವೆರ್' ತುಳು ಚಿತ್ರವನ್ನು ನಿರ್ದೇಶಿಸಿದ್ದರು. ಆ ಚಿತ್ರ ಯಶಸ್ವಿಯಾಗಿಯೂ ಪ್ರದರ್ಶನ ಕಂಡಿತು. ಬಳಿಕ ಕಸ್ತೂರಿ ವಾಹಿನಿಗಾಗಿ 'ಕಂಜೂಸ್ ಕಮಂಗಿರಾಯ' ಎಂಬ ಧಾರಾವಾಹಿ ಮಾಡಿದರು.

ಈಗವರು ಸಂಪೂರ್ಣ ಹಾಸ್ಯಮಯ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ನಾನು ಹೇಮಂತ್ ಅವಳು ಸೇವಂತಿ ಚಿತ್ರವನ್ನು ಸ್ನೇಹಕೃಪಾ ಮೂವೀಸ್ ಲಾಂಛನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನವೆಂಬರ್ ತಿಂಗಳ ಕೊನೆಗೆ ಚಿತ್ರೀಕರಣ ಆರಂಭ.

ಸುಧಾಕರ್ ಬನ್ನಂಜೆ ಅವರು ತಮ್ಮ ಗೆಳೆಯರ ಜೊತೆಗೂಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಹೊಣೆಯನ್ನೂ ಅವರೇ ಹೊತ್ತಿದ್ದಾರೆ. ನಾಗರಾಜ್ ಅದ್ವಾನಿ ಛಾಯಾಗ್ರಹಣ, ಮದನ್ ಮೋಹನ್ ಸಂಗೀತ, ಗಿರೀಶ್ ಕುಮಾರ್ ಸಂಕಲನ, ತಮ್ಮ ಲಕ್ಷ್ಮಣ್ ಕಲಾನಿರ್ದೇಶನ, ಅರಸು ನಿರ್ಮಾಣ ನಿರ್ವಹಣೆ ಈ ಚಿತ್ರದಲ್ಲಿ ರಜನೀಶ್ ಮತ್ತು ವಿಜೇಶ್ ಎಂಬ ಇಬ್ಬರು ಹೊಸ ನಾಯಕರು ಪರಿಚಯವಾಗುತ್ತಿದ್ದಾರೆ.

ನಾಯಕಿ ಹಾಗೂ ಇತರೆ ಪಾತ್ರಗಳ ಆಯ್ಕೆ ನಡೆಯುತ್ತಿದೆ. ಅಲ್ಲದೆ ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯ ನಟರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿನನಿತ್ಯದ ಜಂಜಾಟದ ಬದುಕಿನಲ್ಲಿ ಜನರಿಗೆ ನಗುವಿನ ಅಗತ್ಯ ಬಹಳ ಇದೆ. ಎರಡು ಗಂಟೆಗಳ ಕಾಲ ಜನರನ್ನು ನಗಿಸುವ ಈ ಚಿತ್ರ ಸಂಗೀತ, ಲವ್, ಸೆಂಟಿಮೆಂಟ್, ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ ಎನ್ನುತ್ತಾರೆ ನಿರ್ದೇಶಕರು. (ಒನ್ಇಂಡಿಯಾ ಕನ್ನಡ)

English summary
Kannada comedy movie "Naanu Hemanth Avalu Sevanthi" starts rolling. The movie directed by Sudhakar Bannanje. Two new faces Rajaneesh and Vijesh are two are introducing from this movie.
Please Wait while comments are loading...