For Quick Alerts
  ALLOW NOTIFICATIONS  
  For Daily Alerts

  ಇಶಾನ್‌ಗಾಗಿ ಯುನಿವರ್ಸಲ್ ಸಬ್ಜೆಕ್ಟ್: 'ಜೇಮ್ಸ್' ಡೈರೆಕ್ಟರ್ ಚೇತನ್ 'ಭರ್ಜರಿ' ತಯಾರಿ!

  |

  ನಿರಂತರವಾಗಿ ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದಿರೋ ನಿರ್ದೇಶಕ ಚೇತನ್ ಹೊಸ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಲೀಡ್ ರೋಲ್‌ನಲ್ಲಿ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್' ಬಳಿಕ ಹೊಸ ಕಥೆಯನ್ನು ತೆರೆಮೇಲೆ ತರುವುದಕ್ಕೆ ಸಜ್ಜಾಗಿದ್ದಾರೆ.

  'ಜೇಮ್ಸ್' ಬಳಿಕ ಚೇತನ್ ಕುಮಾರ್ ಮುಂದಿನ ಸಿನಿಮಾ ಯಾವ ಹೀರೊಗೆ ಅನ್ನೋ ಕುತೂಹಲವಿದ್ದೇ ಇತ್ತು. ಕೆಲವು ದಿನಗಳ ಹಿಂದೆ ಈ ಕುತೂಹಲಕ್ಕೆ ತೆರೆ ಬಿದ್ದಿದೆ. 'ರೆಮೋ' ಹೀರೊ ಇಶಾನ್‌ಗೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಈ ಸಿನಿಮಾಗೆ ಈಗಾಗಲೇ ತೆರೆಮರೆಯಲ್ಲಿಯೇ ಸಿದ್ಧತೆಗಳು ಕೂಡ ನಡೆಯುತ್ತಿವೆ.

  ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ಬಳಿಕ ಚೇತನ್ ಮುಂದಿನ ಸಿನಿಮಾ ಯಾವುದು?ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ಬಳಿಕ ಚೇತನ್ ಮುಂದಿನ ಸಿನಿಮಾ ಯಾವುದು?

  'ಜೇಮ್ಸ್' ಸಿನಿಮಾವರೆಗೂ ಚೇತನ್ ಕುಮಾರ್ ಸ್ಟಾರ್‌ಗಳಿಗೆ ನಿರ್ದೇಶನ ಮಾಡಿದ್ದಾರೆ. ಪಕ್ಕಾ ಮಾಸ್ ಕಮರ್ಷಿಯಲ್ ಸಿನಿಮಾಗಳನ್ನು ಡೈರೆಕ್ಟ್ ಮಾಡಿದ್ದಾರೆ. ಆದ್ರೀಗ ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟ ಇಶಾನ್‌ಗೆ ಆಕ್ಷನ್ ಕಟ್ ಹೇಳುವುದಕ್ಕೆ ಸಜ್ಜಾಗಿದ್ದು, ಆರಂಭದಲ್ಲಿಯೇ ಸಿನಿಪ್ರಿಯರಿಗೆ ಕಿಕ್ ಕೊಡುತ್ತಿದ್ದಾರೆ. ತನ್ನ ಹೊಸ ಸಿನಿಮಾ ಬಗ್ಗೆ ನಿರ್ದೇಶಕ ಚೇತನ್ ಕುಮಾರ್ ಫಿಲ್ಮಿ ಬೀಟ್ ಜೊತೆ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

  ಇಶಾನ್‌ಗೆ ಯುನಿವರ್ಸಲ್ ಕಥೆ

  ಇಶಾನ್‌ಗೆ ಯುನಿವರ್ಸಲ್ ಕಥೆ

  "ಒಬ್ಬ ಹೀರೊಗೆ ಬೇಕಿರೋ ಎಲ್ಲಾ ಅಂಶಗಳೂ ಇಶಾನ್ ಬಳಿ ಇವೆ. 'ರೋಗ್' ಸಿನಿಮಾ ಹಾಗೂ 'ರೆಮೋ' ತುಣುಕುಗಳನ್ನು ನೋಡಿದಾಗ ಹೊಸ ಭರವಸೆ ಮೂಡಿದೆ. ಪಕ್ಕಾ ಕಮರ್ಷಿಯಲ್ ಹೀರೊ ಆಗುವ ಎಲ್ಲಾ ಲಕ್ಷಣಗಳೂ ಇವೆ. ಈ ಕಾರಣಕ್ಕೆ ಇಶಾನ್‌ಗೆ ಸಿನಿಮಾ ಮಾಡಬೇಕು ಅಂತ ಕೊಂಡಿದ್ದೇನೆ. ಇದೊಂದು ಯುನಿವರ್ಸಲ್ ಸಬ್ಜೆಕ್ಟ್. ಇಶಾನ್‌ಗೆ ಹೊಸ ಇಮೇಜ್ ಕೊಡಲಿದೆ." ಎಂದು ಭರವಸೆ ಚೇತನ್ ಕುಮಾರ್ ವ್ಯಕ್ತಪಡಿಸಿದ್ದಾರೆ.

  ಕಂಟೆಂಟ್ ಜೊತೆ ಕಮರ್ಷಿಯಲ್ ಕಥೆ

  ಕಂಟೆಂಟ್ ಜೊತೆ ಕಮರ್ಷಿಯಲ್ ಕಥೆ

  ಇಲ್ಲಿವರೆಗೂ ಸ್ಟಾರ್ ಹೀರೊಗಳ ಇಮೇಜ್‌ಗೆ ತಕ್ಕಂತೆ ಚೇತನ್ ಕುಮಾರ್ ಸಿನಿಮಾ ಮಾಡಿದ್ದರು. ಈ ಬಾರಿ ತಮ್ಮ ದಾಟಿಯನ್ನು ಬದಲಾಯಿಸಿಕೊಂಡಿದ್ದಾರೆ. "ಇಶಾನ್‌ಗಾಗಿ ಕಂಟೆಂಟ್ ಜೊತೆಗೆ ಕಮರ್ಷಿಯಲ್ ಎಲಿಮೆಂಟ್ಸ್ ಸೇರಿಸಿ ಸಿನಿಮಾ ಮಾಡುತ್ತಿದ್ದೇನೆ. ಈ ಸಿನಿಮಾ ಮೂಲಕ ಇಶಾನ್ ಪಕ್ಕಾ ಕಮರ್ಷಿಯಲ್ ಹೀರೊ ಆಗಿ ಹೊರಬರಲಿದ್ದಾರೆ." ಅಂತಾರೆ ಚೇತನ್. ಮಾಸ್ ಸೀನ್‌ಗಳು, ಖಡಕ್ ಡೈಲಾಗ್‌ಗಳು ಚೇತನ್ ಕುಮಾರ್ ಸಿನಿಮಾದ ಪ್ರಧಾನ ಅಂಶಗಳು. ಈ ಸಿನಿಮಾ ಹೇಗಿರುತ್ತೆ ಅನ್ನೋ ಕೌತಕ ಮತಷ್ಟು ಹೆಚ್ಚಾಗಿದೆ.

  ಚೇತನ್ ಮುಂದಿರೋ ಸವಾಲುಗಳೇನು?

  ಚೇತನ್ ಮುಂದಿರೋ ಸವಾಲುಗಳೇನು?

  ಇಶಾನ್‌ಗೆ ಸಿನಿಮಾ ಮಾಡಲು ಮುಂದಾಗಿರೋ ಚೇತನ್ ಕುಮಾರ್ ಮುಂದೆ ಸಾಕಷ್ಟು ಸವಾಲುಗಳಿವೆ. ಮೊದಲು ಬಜೆಟ್ ವರ್ಕೌಟ್ ಆಗಬೇಕಿದೆ. ಈ ಕಥೆ ಪ್ರೇಕ್ಷಕರನ್ನು ಇಂಪ್ರೆಸ್ ಮಾಡಬೇಕು. ಜೊತೆಗೆ ಇಶಾನ್ ಈ ಸಿನಿಮಾ ಮೂಲಕ ಕಮರ್ಷಿಯಲ್ ಹೀರೊ ಆಗಿ ಹೊರಬರಬೇಕು. ಇಷ್ಟು ಸವಾಲುಗಳನ್ನು ಮುಂದಿಟ್ಟುಕೊಂಡು ಹೊಸ ಸಿನಿಮಾಗೆ ಚೇತನ್ ಕೈ ಹಾಕಿದ್ದಾರೆ. ಸದ್ಯ 'ರೆಮೋ' ಸಿನಿಮಾ ಅಕ್ಟೋಬರ್‌ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಆ ಬಳಿಕ ಕೆಲವು ದಿನ ಗ್ಯಾಪ್ ಕೊಟ್ಟು ಸಿನಿಮಾ ಶೂಟಿಂಗ್ ಆರಂಭ ಮಾಡಲಿದ್ದಾರೆ.

  ಚೇತನ್ ಸಿನಿಮಾಗೆ ಭರ್ಜರಿ ಬ್ಯುಸಿನೆಸ್

  ಚೇತನ್ ಸಿನಿಮಾಗೆ ಭರ್ಜರಿ ಬ್ಯುಸಿನೆಸ್

  ಇದೂವರೆಗೂ ಚೇತನ್ ಧ್ರುವ ಸರ್ಜಾ, ಶ್ರೀ ಮುರಳಿ, ಪುನೀತ್ ರಾಜ್‌ಕುಮಾರ್ ಅಂತಹ ಸ್ಟಾರ್ ನಟರಿಗೆ ಸಿನಿಮಾ ಮಾಡಿದ್ದಾರೆ. ಈ ಮೂವರು ಹೀರೊಗಳಿಗೆ ಚೇತನ್ ನಿರ್ದೇಶನ ಮಾಡಿದ ಸಿನಿಮಾಗಳು ಭರ್ಜರಿ ಬ್ಯುಸಿನೆಸ್ ಮಾಡಿಕೊಟ್ಟಿವೆ. ಈಗ ಸ್ಯಾಂಡಲ್‌ವುಡ್‌ನಲ್ಲಿ ಎಮರ್ಜಿಂಗ್ ಸ್ಟಾರ್ ಆಗಿ ಹೊರ ಹೊಮ್ಮುತ್ತಿರುವ ಇಶಾನ್‌ ಸಿನಿಮಾ ಇಷ್ಟೇ ದೊಡ್ಡ ಬ್ಯುಸಿನೆಸ್ ಮಾಡಬೇಕು ಅನ್ನೋ ಹಠವಿದೆ. ಈಗಾಗಲೇ ಇಶಾನ್ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗಿದೆ. ಹಾಗಾಗಿ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರಾ ಪ್ರಶ್ನೆನೂ ಎದುರಾಗಿದೆ.

  Recommended Video

  ಈ ಸಿನಿಮಾ ಮಾಡ್ತಾ ನನ್ನ ಕಾಲೆಜ್ ಡೇಸ್ ನೆನಪಾಯ್ತು | Anant Nag | Gaalipata 2 *Press Meet
  English summary
  Kannada Director Chethan Kumar Next Movie With Ishaan After James, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X