»   » ರಾಮ್ ಗೋಪಾಲ್ ವರ್ಮಾ ಬಗ್ಗೆ ಎಂಥಾ ಕಾಮೆಂಟು.!

ರಾಮ್ ಗೋಪಾಲ್ ವರ್ಮಾ ಬಗ್ಗೆ ಎಂಥಾ ಕಾಮೆಂಟು.!

Posted By:
Subscribe to Filmibeat Kannada

''ರಾಮ್ ಗೋಪಾಲ್ ವರ್ಮಾ ತಿಕ್ಕಲಾದ್ರೂ, ತಾಕತ್ತಿರುವ ಮನುಷ್ಯ''. ಹೀಗಂತ ನಾವ್ ಹೇಳ್ತಿಲ್ಲ. ನಿರ್ದೇಶಕ ಯೋಗರಾಜ್ ಭಟ್ ಶಿಷ್ಯ, 'ಪ್ರೀತಿ ಗೀತಿ ಇತ್ಯಾದಿ' ನಿರ್ದೇಶಕ ವೀರೇಂದ್ರ ಬರೆದಿರುವ ಸಾಲು.

''ಆಯಪ್ಪ 'ರಾಮ್ ಗೋಪಾಲ್ ವರ್ಮಾ' ಎಷ್ಟೇ ತಿಕ್ಕಲಾಗಿ ಮಾತಾಡಿದ್ರೂ 'ತಾಕತ್ತಿರೋ ಮನುಷ್ಯ ಮಾತಾಡ್ಬೋದು' ಅನ್ನೋದಕ್ಕೆ ಇದೇ ಸಾಕ್ಷಿ..ಎಷ್ಟ್ ಜನ ವೀರಪ್ಪನ್ ಬಗ್ಗೆ ಸಿನಿಮಾಗಳನ್ನ ಮಾಡಿದ್ರು. ನಾನು ಕಂಡಂತೆ ವೀರಪ್ಪನ್ ಪಾತ್ರಕ್ಕೆ ನೈಜತೆಗೆ ಸಾಕಷ್ಟು ಹತ್ತಿರವಾದಂತಹ ಪಾತ್ರಧಾರಿಯೊಬ್ಬನನ್ನ ನೋಡಿದ್ದು ಇದೇ ಮೊದಲು..!! ವೀರಪ್ಪನ್ ಪಾತ್ರಧಾರಿ ಸಂದೀಪ್..ಸೂಪರ್ರು ಗುರು ಇದಂತೂ..ಮೇಕಪ್ಪು ಕಾಸ್ಟ್ಯೂಮು ಆಟಿಟ್ಯೂಡು..ಎಲ್ಲಾ ಡಿಟ್ಟೋ ಟೀವೀಲಿ ಪೇಪರಲ್ಲಿ ನೋಡಿದ್ದ ವೀರಪ್ಪನ್ನೇ ಕಂಡಂಗಾಗತ್ತೆ..!'' [ಬಂದ..ಬಂದ..ನೋಡಿ ಹೊಸ ವೀರಪ್ಪನ್..]

Kannada Director Veerendra comments on RGV's 'Killing Veerappan'

ಹೀಗಂತ ಸಾಮಾಜಿಕ ಜಾಲತಾಣದಲ್ಲಿ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಕಾಡುಗಳ್ಳ ವೀರಪ್ಪನ್ ಪಾತ್ರಧಾರಿ ಸಂದೀಪ್ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ನಿರ್ದೇಶಕ ವೀರೇಂದ್ರ ಕಾಮೆಂಟ್..ಅಲ್ಲ ಅಲ್ಲ...ಕಾಂಪ್ಲಿಮೆಂಟ್ ಕೊಟ್ಟಿರುವ ಪರಿ ಇದು. [ರಾಮ್ ಗೋಪಾಲ್ ವರ್ಮಾ ಕನ್ನಡದಲ್ಲಿ ಮಾಡೋದೇನು?]

Kannada Director Veerendra comments on RGV's 'Killing Veerappan'

ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ನಿರ್ದೇಶಕ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ತಾವೇ ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುವ ವರ್ಮಾ, ಮಾಡಿಕೊಂಡಿರುವ ಎಡವಟ್ಟುಗಳು ಒಂದೆರಡಲ್ಲ. ಆದ್ರೂ, 'ರಿಯಲ್' ಕಥೆಗಳನ್ನ ಇಟ್ಟುಕೊಂಡು ಸಿನಿಮಾ ಮೇಕಿಂಗ್ ಮಾಡುವ ವಿಷಯದಲ್ಲಿ ವರ್ಮಾ ಸಾಹೇಬರನ್ನ ಮೀರಿಸುವ ಗಂಡೆದೆ ಯಾರಿಗೂ ಇಲ್ಲ. [ವೀರಪ್ಪನ್ ಬೇಟೆಗೆ ಹೊರಟ ಆರ್.ಜಿ.ವಿ-ಶಿವಣ್ಣ..!]

Kannada Director Veerendra comments on RGV's 'Killing Veerappan'

ಈಗ 'ಕಿಲ್ಲಿಂಗ್ ವೀರಪ್ಪನ್' ಮೂಲಕ ವೀರಪ್ಪನ್ ಸಾವಿನ ಕುರಿತು ಅನೇಕ ರಹಸ್ಯಗಳನ್ನ ರಾಮ್ ಗೋಪಾಲ್ ವರ್ಮಾ ಬಯಲಿಗೆಳೆಯಲಿದ್ದಾರೆ. ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ 'ವೀರಪ್ಪನ್' ಫಸ್ಟ್ ಲುಕ್ ಔಟ್ ಆಗಿದೆ. ಎಲ್ಲಡೆ, ರಂಗಭೂಮಿ ಕಲಾವಿದ ಸಂದೀಪ್ ಪ್ರತಿಭೆ ಬಗ್ಗೆ ಮೆಚ್ಚುಗೆ ಮಾತುಗಳು ವ್ಯಕ್ತವಾಗ್ತಿದೆ. ಅದ್ರಲ್ಲಿ ವೀರೇಂದ್ರ ಮಾಡಿರುವ ಈ ಕಾಮೆಂಟ್ ಕೂಡ ಒಂದು.

English summary
Theatre Artist Sandeep is roped into play Forest Brigand Veerappan in Director Ram Gopal Varma directorial,'Killing Veerappan' is know to all. On this, Director Veerendra has taken his social networking site to comment on RGV.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada