twitter
    For Quick Alerts
    ALLOW NOTIFICATIONS  
    For Daily Alerts

    ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಮೆಚ್ಚಿದ ಯೋಗ್‌ರಾಜ್‌ ಭಟ್. ಪತ್ರ ಬರೆದು ಅಭಿನಂದನೆ

    |

    ಇತ್ತೀಚೆಗಷ್ಟೆ ಬಿಡುಗಡೆಯಾಗಿ ಉತ್ತಮ ಪ್ರತಿಕ್ರೀಯೆ ಪಡೆಯುತ್ತಿರುವ ಸಿನಿಮಾ ಗರುಡ ಗಮನ ವೃಷಭ ವಾಹನ. ರಾಜ್ ಬಿ ಶೆಟ್ಟಿ ನಟಿಶಿ ನಿರ್ದೇಶಿಸಿರುವ ಬಹಲ ವಿಭಿನ್ನವಾದ ಕಥಾ ಹಂದರ ಹೊಂದಿರುವ ಸಿನಿಮಾ ಗರುಡ ಗಮನ ವೃಷಭ ವಾಹನ. ಸಿನಿಮಾವನ್ನು ಹೀಗೂ ಮಾಡಬಹುದು ಎಂಬುದನ್ನು ಈ ಚಿತ್ರ ಸಾಬೀತು ಮಾಡಿದೆ. ಒಂದು ಸಿನಿಮಾ ಅಂದ್ರೆ ಅಲ್ಲಿ ನಾಯಕ ನಟ-ನಟಿ, ನಾಲ್ಕು ಹಾಡು, ಒಂದೆರೆಡು ಫೈಟ್ ಸಿನ್, ಕಾಮಿಡಿ ಡಯಲಾಗ್ಸ್ ಇದೆಲ್ಲ ಇದ್ದರೇನೇ ಒಂದು ಸಿನಿಮಾ ಅನ್ನೋದನ್ನ ಗರುಡ ಗಮನ ವೃಷಭ ವಾಹನ ಸಿನಿಮ ಬ್ರೇಕ್ ಮಾಡಿದೆ. ಸಿಂಪಲ್ ಕಥೆಯನ್ನು ಜನರ ಮನಸ್ಸಿಗೆ ಮುಟ್ಟುವಂತೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಸಿನಿಮಾ ರಿಲೀಸ್ ಆದಾಗಿನಿಂದಲೂ ಸಿನಿಮಾಗೆ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಸಾಕಷ್ಟು ನಿರ್ದೇಶಕರು ಕಲಾವಿದರು ಸಿನಿಮಾ ನೊಡಿ ಚಿತ್ರದ ಬಗ್ಗೆ ಮೆಚ್ಚಿಗೆಯ ಮಾತುಗಳನ್ನಾಡುತ್ತಿದ್ದಾರೆ.

    ನಿರ್ದೇಶಕ ಯೋಗ್‌ರಾಜ್ ಭಟ್ ಕೂಡ ಇತ್ತೀಚೆಗೆ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ವೀಕ್ಷಿಸಿದ್ದು, ಸಿನಿಮಾದ ಬಗ್ಗೆ ಹಾಗೂ ರಾಜ್‌ ಬಿ ಶೆಟ್ಟಿ ಬಗ್ಗೆ ಬರೆದುಕೊಂಡಿದ್ದಾರೆ. ಈ ಮೂಲಕ ಚಿತ್ರತಂಡಕ್ಕೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. "ನಮಸ್ತೆ ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿದೆ, ಆನಂದಿಸಿದೆ. ಒಳ್ಳೆಯ ಪ್ರಯೋಗಗಳು, ಒಳ್ಳೆಯ ಫಲಿತಾಂಶ ನೀಡುವ ಕಾಲ ಕನ್ನಡಕ್ಕೆ ಬಂದಂತಿದೆ. ನಿರ್ದೇಶಕ ಮಿತ್ರ ರಾಜ್‌ ಬಿ ಶೆಟ್ಟಿಗೆ ಅಭಿನಂದನೆ. ರಿಶಬ್ ಶೆಟ್ಟಿಗೆ ಅಭಿನಂದನೆ. ಜೈ ಚಿತ್ರತಂಡ" ಎಂದು ಬರೆದುಕೊಂಡಿದ್ದಾರೆ.

    ನಿರ್ದೇಶಕ ಯೋಗ್‌ರಾಜ್ ಭಟ್ ಮಾತ್ರವಲ್ಲದೇ ಕನ್ನಡದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೂಡ ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರದ ಬಗ್ಗೆ ಹಾಗೂ ರಾಜ್‌ ಬಿ ಶೆಟ್ಟಿ ನಟನೆಯ ಬಗ್ಗೆ ಹಾಡಿ ಹೋಗಳಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಬಂದವನೇ ಮೌನವಾಗಿ ಕೂತುಬಿಟ್ಟೆ. ನನಗೆ ನನ್ನ ತಾರುಣ್ಯದ ದಿನಗಳು ನೆನಪಿಗೆ ಬಂದವು. ಹಾಗೇ ನಾನು ಈ ಹಿಂದೆ ನೋಡಿದ ಮತ್ತು ಮೆಚ್ಚಿಕೊಂಡ ದೇಶ ವಿದೇಶಗಳ ಸಿನಿಮಾಗಳು ನೆನಪಿಗೆ ಬಂದವು. ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿದ ನಂತರ ನನ್ನ ಲೆಕ್ಕಾಚಾರಗಳು ಬದಲಾಗಿದ್ದಂತು ಸುಳ್ಳಲ್ಲ. ನಾವು ನೋಡುವ ಕ್ರಮವೇ ಬದಲಾಗಬೇಕು ಅನ್ನಿಸಿದ್ದಂತೂ ಹೌದು. ತಕ್ಷಣವೇ ನಾನು ರಾಜ್‌ ಬಿ ಶೆಟ್ಟಿಗೆ ಕರೆ ಮಾಡಿ ಸುದೀರ್ಘವಾಗಿ ಮಾತಾಡಿದೆ" ಎಂದಿದ್ದಾರೆ.

    Kannada directors impressed with Garuda Gamana Vrishabha Vahana

    ಸ್ತ್ರೀ ಪಾತ್ರ ಇಲ್ಲದೇ, ನಾಯಕ ಪಾತ್ರ ಇಲ್ಲದೆ, ಹಾಸ್ಯ ಸನ್ನಿವೇಶಗಳು ಇಲ್ಲದೇ, ಅನಗತ್ಯ ದೃಶ್ಯಗಳೇ ಇಲ್ಲದ ಒಂದು ಚಿತ್ರವನ್ನು ಒಬ್ಬ ನಿರ್ದೇಶಕ ಮಾಡಿ ಪ್ರೇಕ್ಷಕರ ಮುಂದಿಡುತ್ತಾನೆ ಅಂದರೆ ಅವನಿಗೆ ತನ್ನ ಕಥೆಯ ಮೇಲೆ ಎಷ್ಟು ನಂಬಿಕೆ ಇರಬೇಕು ಅನ್ನುವುದು ನನ್ನನ್ನು ಕಾಡಲಾರಂಭಿಸಿದೆ. ಮತ್ತು ನಾನು ಕನ್ನಡ ಚಿತ್ರರಂಗ ಹಾಗೂ ಒಟ್ಟಾರೆಯಾಗಿ ಭಾರತೀಯ ಚಿತ್ರರಂಗದ ಸುತ್ತ ಯೋಚಿಸುತ್ತಾ ಕೂತೆ," ಎಂದು ಗರುಡ ಗಮನ ವೃಷಭ ವಾಹನ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Kannada directors impressed with Garuda Gamana Vrishabha Vahana

    ನವೆಂಬರ್ 19ರಂದು ರಾಜ್ಯಾದ್ಯಂತ ಯಾವುದೇ ಆಡಂಬರ ಇಲ್ಲದೇ ತೆರೆಕಂಡ ಸಿನಿಮಾ ಗರುಡ ಗಮನ ವೃಷಭ ವಾಹನ. ಸಿನಿಮಾ ರಿಲೀಸ್ ಆದಾಗಿನಿಂದಲೂ ಸಾಕಷ್ಟು ಮಂದಿ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್‌ನ ಹೆಸರಾಂತ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ವೀಕ್ಷಿಸಿ ಚಿತ್ರತಂಡಕ್ಕೆ ಹುರುಪು ನೀಡುವಂತೆ ಪ್ರೊತ್ಸಾಹಿಸಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಕೂಡಲೇ ರಾಜ್‌ ಬಿ ಶೆಟ್ಟಿಗೆ ಕರೆ ಮಾಡಿದ್ದ ಅನುರಾಗ್ ಕಶ್ಯಪ್ ಕೆಲಹೊತ್ತು ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

    Kannada directors impressed with Garuda Gamana Vrishabha Vahana

    ಈ ಸಂದರ್ಭದಲ್ಲಿ ಗರುಡ ಗಮನ ವೃಷಭ ವಾಹನ ಚಿತ್ರವನ್ನು 32 ದಿನದಲ್ಲಿ ಶೂಟಿಂಗ್ ಮಾಡಿದ್ದ ಎಂದು ಕೇಳಿ ಅನುರಾಗ್ ಕಶ್ಯಪ್ ಚಕಿತ ಗೊಂಡಿದ್ದರು ಎಂದು ಸ್ವತಃ ರಾಜ್‌ ಬಿ ಶೆಟ್ಟಿ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾಗೆ ದೊಡ್ಡ ದೊಡ್ಡ ನಿರ್ದೇಶಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದು, ಸಿನಿಮಾವನ್ನು ಮೆಚ್ಚಿಕೊಳ್ಳುತ್ತಿದ್ದಾರೆ.

    English summary
    kannada directors Rajendra singh babu and Yograj bhat impressed with garuda gamana vrishabha vahana.
    Monday, November 29, 2021, 10:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X