For Quick Alerts
  ALLOW NOTIFICATIONS  
  For Daily Alerts

  ಬಾಂಬೆ ಹೈಕೋರ್ಟ್ ಕಟಕಟೆಗೆ ಕನ್ನಡ ಡರ್ಟಿ ಪಿಕ್ಚರ್

  By Rajendra
  |

  ಪಾಕಿಸ್ತಾನಿ ಹಾಟ್ ಬೆಡಗಿ ವೀಣಾ ಮಲಿಕ್ ಅಭಿನಯಿಸಿರುವ ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗ' ಚಿತ್ರದ ಬಿಡುಗಡೆಯನ್ನು ಬಾಂಬೆ ಹೈಕೋರ್ಟ್ ತಡೆಹಿಡಿದೆ. ಈ ಸಂಬಂಧ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಜೆ ಕಥವಲ್ಲ ಅವರು ಕನ್ನಡದ 'ಡರ್ಟಿ ಪಿಕ್ಚರ್' ನಿರ್ಮಾಣದ ಅಕ್ಷಯ್ ಪ್ರೊಡಕ್ಷನ್ಸ್ ಸಂಸ್ಥೆಗೆ ಆದೇಶಿಸಿದ್ದಾರೆ.

  "ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗ" ಚಿತ್ರ ಕಾಪಿರೈಟ್ ಕಾಯಿದೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಬಾಲಾಜಿ ಮೋಷನ್ ಪಿಕ್ಚರ್ಸ್ ಲಿ. ಸಂಸ್ಥೆ ಬಾಂಬೆ ಹೈಕೋರ್ಟ್ ಮೊರೆಹೋಗಿತ್ತು. ಕೇಸನ್ನು ಕೈಗೆತ್ತಿಕೊಂಡಿರುವ ಬಾಂಬೆ ಹೈಕೋರ್ಟ್ ಮುಂದಿನ ವಿಚಾರಣೆಯವರೆಗೂ ಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಆದೇಶಿಸಿದೆ.

  ಬಾಲಿವುಡ್ ತಾರೆ ವಿದ್ಯಾ ಬಾಲನ್ ಅಭಿನಯದ 'ಡರ್ಟಿ ಪಿಕ್ಚರ್' ಹಿಂದಿ ಚಿತ್ರವನ್ನು ಬಾಲಾಜಿ ಫಿಲಂಸ್ ಸಂಸ್ಥೆ ನಿರ್ಮಿಸಿತ್ತು. ತಮ್ಮ ಚಿತ್ರಕ್ಕೂ ಕನ್ನಡದ ಡರ್ಟಿ ಪಿಕ್ಚರ್ ಚಿತ್ರಕ್ಕೂ ಬಹಳಷ್ಟು ಸಾಮ್ಯತೆಗಳಿವೆ. ಚಿತ್ರದ ಶೀರ್ಷಿಕೆಯನ್ನೂ ಯಥಾವತ್ತಾಗಿ ಬಳಸಿಕೊಳ್ಳಲಾಗಿದ್ದು, ಅಡಿಬರಹವನ್ನು ಸಿಲ್ಕ್ ಸಖತ್ ಹಾಟ್ ಮಗ ಎಂದಿಡಲಾಗಿದೆ.

  ಚಿತ್ರದ ಅಡಿಬರಹ ನೋಡಿದರೆ ಸಿಲ್ಕ್ ಸ್ಮಿತಾ ಬಗೆಗಿನ ಚಿತ್ರ ಎಂದು ಸಾರುತ್ತದೆ. ತಮ್ಮ ಚಿತ್ರದ ಕಥಾವಸ್ತುವೂ ಇದೇ ರೀತಿಯದಾಗಿದೆ. ಕಾಪಿರೈಟ್ ಉಲ್ಲಂಘನೆ ಮಾಡಿರುವ ಈ ಚಿತ್ರದ ವಿರುದ್ಧ ಕ್ರಮಕೈಗೊಳ್ಳುವಂತೆ ಬಾಲಾಜಿ ಫಿಲಂಸ್ ಸಂಸ್ಥೆ ಬಾಂಬೆ ಹೈಕೋರ್ಟ್ ನಲ್ಲಿ ಆರೋಪಿಸಿದೆ.

  ಕನ್ನಡದ ಡರ್ಟಿ ಪಿಕ್ಚರ್ ಚಿತ್ರ ಸಿಲ್ಕ್ ಸ್ಮಿತಾ ಜೀವನ ಕತೆಯಾಧಾರಿತ ಚಿತ್ರ ಎನ್ನಲಾಗಿದೆ. ಆಕ್ಷನ್ ಕಟ್ ಹೇಳುತ್ತಿರುವವರು ತ್ರಿಶೂಲ್. ತೆಳ್ಳಗೆ ಬಳುಕುವ ಬಳ್ಳಿಯಂತಿದ್ದ ವೀಣಾ ತಮ್ಮ ಪಾತ್ರಕ್ಕಾಗಿ ಕೊಂಚ ಮೈಕೈ ತುಂಬಿಕೊಂಡಿದ್ದಾರೆ. ತಮ್ಮ ದೇಹದ ತೂಕವನ್ನು 5 ಕೆ.ಜಿ ಹೆಚ್ಚಿಸಿಕೊಂಡು ದುಂಡಗೆ ಗುಂಡಗೆ ಕಾಣಿಸಲಿದ್ದಾರೆ. ಚಿತ್ರದಲ್ಲಿ ತಮ್ಮದು ವೇಶ್ಯೆಯ ಪಾತ್ರವಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)

  English summary
  Kannada film Dirty Picture: silk Sakkath Maga lands in legal trouble. The Bombay high court has posted a copyright dispute between Balaji Films and Akshaya Productions for further hearing in November second week after restraining Akshaya Productions from releasing a movie on or before November 9, 2012.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X