»   » ಮತಚಲಾಯಿಸಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಸ್ಟಾರ್ ಗಳು

ಮತಚಲಾಯಿಸಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಸ್ಟಾರ್ ಗಳು

Posted By:
Subscribe to Filmibeat Kannada

ಮತದಾನ ಮಾಡುವುದು ಅಮೂಲ್ಯವಾದ ಕೆಲಸ. ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಮತದಾನ ಮಾಡಲೇ ಬೇಕು ಎಂದು ಈಗಾಗಲೇ ರಾಜ್ಯದ ಎಲ್ಲಾ ಕಡೆಗಳಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ. ಕನ್ನಡ ಸಿನಿಮಾರಂಗದ ಸ್ಟಾರ್ ಗಳೆಲ್ಲರೂ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ಆರ್ ಆರ್ ನಗರ ಮತ್ತು ಜಯನಗರ ಹೊರತು ಪಡಿಸಿದಂತೆ ಮಿಕ್ಕ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ವಾಸವಿರುವ ಕಲಾವಿದರು ಬೆಳ್ಳಗ್ಗಿನಿಂದಲೇ ಮತದಾನ ಮಾಡಿದ್ದಾರೆ. ಕೆಲವರು ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರೆ ಇನ್ನು ಕೆಲವು ಕೆಲಸದಲ್ಲಿ ಬಿಡುವು ಮಾಡಿಕೊಂಡು ಬಂದು ಸಾಲಿನಲ್ಲಿ ನಿಂತು ವೋಟ್ ಮಾಡಿದ್ದಾರೆ.

ವೋಟ್ ಮಾಡಿದ ಸ್ಟಾರ್ ಪಟ್ಟಿ : ಮತದಾನ ಮಾಡಿ ಜವಾಬ್ದಾರಿ ಮೆರೆದವರು

ಮತದಾನ ಮಾಡಿದ ನಂತರ ಕಲಾವಿದರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದು. ಮತದಾನ ಎಷ್ಟು ಶ್ರೇಷ್ಟ ಎನ್ನುವದನ್ನ ಅವರದ್ದೇ ರೀತಿಯಲ್ಲಿ ಹೇಳಿದ್ದಾರೆ. ಹಾಗಾದರೆ ಯಾವ ಸ್ಟಾರ್ ಏನ್ ಹೇಳಿದ್ರು ಇಲ್ಲಿದೆ ಮಾಹಿತಿ ಮುಂದೆ ಓದಿ.

ಪುನೀತ್ ಪ್ರತಿ ವರ್ಷ ಮತದಾನ

ಸದಾಶಿವನಗರದಲ್ಲಿ ಪತ್ನಿ ಜೊತೆಯಾಗಿ ಮತದಾನ ಮಾಡಿದ ನಂತರ ಮಾತನಾಡಿದ ಪವರ್ ಸ್ಟಾರ್ , "ಸಂಜೆ 6.30 ತನಕ‌ ವೋಟ್ ಮಾಡಲು ಅವಕಾಶ ಇದೆ.

18 ವರ್ಷದಿಂದ ಮತದಾನಮಾಡುತ್ತಾ ಬಂದಿದ್ದೇನೆ. ಇಲ್ಲಿಯ ತನಕ ಒಂದು ಚುನಾವಣೆಯಲ್ಲಿ ಮಾತ್ರ ಮತದಾನ ಮಾಡಲು ಸಾಧ್ಯವಾಗಲಿಲ್ಲ. 18 ತುಂಬಿದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ. ರಾಜ್ಯದ ಅಭಿವೃದ್ದಿಗೆ ಪ್ರತಿ ವೋಟ್ ಕೂಡ ಅಮೂಲ್ಯ, ನೀವು ಎಲ್ಲೆ ಇದ್ದರು ತಪ್ಪದೆ ಮತ ಹಾಕಿ". ಎಂದಿದ್ದಾರೆ.

ಮತದಾನ ಮಾಡಿದ ರವಿಮಾಮ

ರಾಜಾಜಿನಗರದಲ್ಲಿ ರವಿಚಂದ್ರನ್ ಮತದಾನ ಮಾಡಿದ್ದಾರೆ. ಪತ್ನಿ ಸಮೇತರಾಗಿ ಮತದಾನ ಮಾಡಿದ ರವಿಚಂದ್ರನ್- ರಾಜಾಜಿನಗರ ಠಾಗೂರ್ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. "ನಮ್ಮ ಹಣೆಬರಹ ಚೆನ್ನಾಗಿ ಇರಬೇಕು ಎಂದರೆ ಹಣೆಗೆ ಒತ್ತಬೇಕು. ಎಲ್ಲರೂ ಮತ ಹಾಕಿ ಅಂತ ಭಿಕ್ಷೆ ಬೇಡೋದಲ್ಲ. ಮತದಾನ ಪ್ರತಿಯೊಬ್ಬರ ಹಕ್ಕು. ನಾನು ಯಾರಿಗೂ ಮತ ಹಾಕಿ ಅಂತ ಹೇಳೋದಿಲ್ಲ ಎಂದಿದ್ದಾರೆ" ರವಿಚಂದ್ರನ್ .

ಮತದಾನ ಮಾಡಿಲ್ಲ ಅಂದರೆ ಬದುಕಿದ್ದು ಸತ್ತಂತೆ

"ಮತ ಚಲಾಯಿಸಿಲ್ಲ ಅಂದರೆ ನಾವು ಬದುಕಿದ್ದು ಸತ್ತಂತೆ. ನಮಗೆ ಸಮಯ ಬಂದಾಗ ವೋಟ್ ಮಾಡಬೇಕು, ಇಲ್ಲ ಅಂದರೆ ನಮಗೆ ಯಾವುದೇ ವಿಚಾರವನ್ನು ಪ್ರಶ್ನೆ ಮಾಡುವ ಹಕ್ಕು ಇರುವುದಿಲ್ಲ". ಎಂದಿದ್ದಾರೆ.

ಕರುನಾಡ ಕುಳ್ಳನ ಮಾತು

"ನನ್ನ ಹಕ್ಕನ್ನೂ ನಾನು ಚಲಾಯಿಸಿದ್ದೇನೆ. ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಿ. ನಮ್ಮ ನಾಯಕರನ್ನುಆಯ್ಕೆ ಮಾಡುವ ಕ್ಷಣ. ಎಲ್ಲರು ಮತ ಚಾಲಾಯಿಸಿ. ಎಂದು ವೋಟ್ ಮಾಡಿ ಸಂದೇಶ ಸಾರಿದ್ದಾರೆ" ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್.

ಸರೋಜಾ ದೇವಿ ಹೇಳಿಕೆ

'ಒಳ್ಳೆ ರಾಜಕಾರಣಿಗಳು ದೇಶಕ್ಕೆ, ರಾಜ್ಯಕ್ಕೆ ಬೇಕು. ಚುನಾವಣೆಗೂ ಮೊದಲು ಮನೆ ಮನೆಗೂ ಬರ್ತಾರೆ. ಆದ್ರೆ ಎಲೆಕ್ಷನ್ ಮುಗಿದ ಮೇಲೆ ಕೈಗೆ ಸಿಗೋಲ್ಲ. ಇನ್ನು ಮುಂದೆ ಹಾಗಾಗಬಾರದು ರಾಜ್ಯಕ್ಕೆ ಒಳ್ಳೆಯ ರಾಜಕಾರಣಿ ಬರಬೇಕು. ನನ್ನ ಕರ್ತವ್ಯ ನಾನು ಮಾಡಿದ್ದೇನೆ". ನೀವು ಮತಚಲಾಯಿಸಿ ಎಂದಿದ್ದಾರೆ.

English summary
Kannada film artists have cast their opinion in Karnataka Lok Sabha polls in 2018.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X