»   » ಜಾಹೀರಾತು ಜಗತ್ತಿನಲ್ಲಿ ಕನ್ನಡದ ಸೆಲೆಬ್ರಿಟಿಗಳು

ಜಾಹೀರಾತು ಜಗತ್ತಿನಲ್ಲಿ ಕನ್ನಡದ ಸೆಲೆಬ್ರಿಟಿಗಳು

Posted By:
Subscribe to Filmibeat Kannada

ಗ್ರಾಹಕರನ್ನು ಆಕರ್ಷಿಸಲು ಕಂಪೆನಿಗಳು ನವನವೀನ ಪ್ರಯೋಗ ಮಾಡುವುದು ಸಾಮಾನ್ಯ. ಅದರಲ್ಲೂ ಕಂಪೆನಿಗಳ ಮೊದಲ ಆಯ್ಕೆ ಸೆಲೆಬ್ರಿಟಿ ಜಗತ್ತಿನವರನ್ನು ಕರೆಸಿ ತಮ್ಮ ತಮ್ಮ ಉತ್ಪನ್ನಗಳ ಬಗ್ಗೆ ಜಾಹೀರಾತು ನೀಡುವುದು ಬಹು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಟ್ರೆಂಡ್.

ಬಾಲಿವುಡ್ ಸಿನಿಮಾ ಮಂದಿಗಳು, ಕ್ರೀಡಾಪಟುಗಳು ತಮ್ಮ ಮೂಲ ವೃತ್ತಿಯ ಮೂಲಕ ಗಳಿಸುವ ಆದಾಯಕ್ಕಿಂತ ದುಪ್ಪಟ್ಟೋ ಅಥವಾ ಹತ್ತು ಪಟ್ಟೊ ಹೆಚ್ಚಾಗಿ ಜಾಹೀರಾತಿನ ಮೂಲಕ ಗಳಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಆದರೆ ಸ್ಯಾಂಡಲ್ ವುಡ್ದಿನ ಸೆಲೆಬ್ರಿಟಿಗಳಿಗೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಹೆಚ್ಚುಕಮ್ಮಿ ಹೊಸದೇ. ಹದಿನೈದು ವರ್ಷಗಳ ಹಿಂದೆ ಡಾ.ರಾಜಕುಮಾರ್ ನಂದಿನಿ ಹಾಲಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ ಇತ್ತೀಚಿನ ಕೆಲ ವರ್ಷಗಳ ತನಕ ಇಲ್ಲವೇ ಇಲ್ಲ ಎನ್ನಬಹುದು.

ಕನ್ನಡ ಚಿತ್ರರಂಗ ಬೆಳೆಯುತ್ತಿದ್ದಂತೆ, ಕನ್ನಡದ ಚಿತ್ರಗಳು ಬೇರೆ ಬೇರೆ ಭಾಷೆಯವರನ್ನು ಆಕರ್ಷಿಸಲು ಶುರುವಾಗುತ್ತಿದ್ದಂತೆ ನಮ್ಮ ನಟ, ನಟಿಯರಿಗೂ ಜಾಹೀರಾತಿನಲ್ಲಿ ಆಫರ್ ಗಳು ಬರಲಾರಂಭಿಸಿತು.

ಬನ್ನಿ.. ಕನ್ನಡ ಬಣ್ಣದ ಜಗತ್ತಿನ ಪ್ರಮುಖ ಸೆಲೆಬ್ರಿಟಿಗಳು ಯಾವ ಯಾವ ಜಾಹೀರಾತಿನಲ್ಲಿ endorsement ಮಾಡಿಕೊಂಡಿದ್ದಾರೆ ಎನ್ನುವುದನ್ನು ಸ್ಲೈಡ್ ಮೂಲಕ ನೋಡೋಣ..

ಡಾ. ರಾಜಕುಮಾರ್

ಕೆಎಂಎಫ್ ನಂದಿನಿ ಹಾಲಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಕೆಎಂಎಫ್ ಉತ್ತಮವಾಗಿ ಕೆಲಸ ಮಾಡುತ್ತಿದೆ, ರೈತರಿಗೆ ನನ್ನ ಕಿರು ಸಹಾಯವೆಂದು ಜಾಹೀರಾತಿಗೆ ಅಣ್ಣಾವ್ರು ಸಂಭಾವನೆ ಪಡೆದಿರಲಿಲ್ಲ.

ರಿಯಲ್ ಸ್ಟಾರ್ ಉಪೇಂದ್ರ

ಉಪೇಂದ್ರ ಕೂಡಾ ನಂದಿನಿ ಹಾಲಿನ ಜಾಹೀರಾತಿನಲ್ಲಿ ಸಂಭಾವನೆ ಪಡೆಯದೆ ಕಾಣಿಸಿಕೊಂಡಿದ್ದರು. ಲೂನಾರ್ಸ್, ಯುಬಿ ಎಕ್ಸ್ ಪೋರ್ಟಿನ ಪಿಂಟ್ ಉತ್ಪನ್ನದ ಜಾಹೀರಾತಿನಲ್ಲಿ ಕೂಡಾ ಉಪೇಂದ್ರ ಕಾಣಿಸಿಕೊಂಡಿದ್ದರು. ಪಿಂಟ್ ಜಾಹೀರಾತಿಗೆ ಅವರು ಬಳಸಿದ "ಎಲ್ಲಾ ಒಕೆ..ಕೂಲ್ ಡ್ರಿಂಕ್ಸ್ ಯಾಕೆ" ಡೈಲಾಗ್ ಈಗಲೂ ಫೇಮಸ್.

ಚಾಲೆಂಜಿಂಗ್ ಸ್ಟಾರ್ ದರ್ಶನ್

ದರ್ಶನ್ ತೂಗುದೀಪ್ ನಾಕ್ ಔಟ್ ಬೀರ್ ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಶಿವರಾಜ್ ಕುಮಾರ್ ಕಲ್ಯಾಣ್ ಜ್ಯುವೆಲರ್ಸ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಪ್ರಸಿದ್ದ ನಟರು ಮತ್ತು ಅಮಿತಾಬ್ ಬಚ್ಚನ್ ಕೂಡಾ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್

ಬಾಕ್ಸ್ ಆಫೀಸಿನಲ್ಲಿ ಹೇಗೋ ಕನ್ನಡದ ಮಟ್ಟಿಗೆ ಜಾಹೀರಾತು ಜಗತ್ತಿನಲ್ಲಿ ಕೂಡಾ ಪುನೀತ್ ಪವರ್ ಸ್ಟಾರ್. ಸಂಭಾವನೆ ಇಲ್ಲದೆ ನಂದಿನಿ ಹಾಲಿಗೆ ಮತ್ತು ಸಂಭಾವನೆಯೊಂದಿಗೆ
F Square, ಮಣಪ್ಪುರಂ ಫೈನಾನ್ಸ್ ಮತ್ತು 7UP ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್

ಗಣೇಶ್ ಸಿನಿಮಾ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ಕೋಕೋ ಕೋಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ರಾಗಿಣಿ, ರಮ್ಯಾ ಮತ್ತು ಪೂಜಾಗಾಂಧಿ

ಈ ಮೂವರೂ ಟಾಪ್ ಕನ್ನಡದ ನಟಿಯರು ನಂದಿನಿ ಹಾಲಿನ ಜಾಹೀರಾತಿನಲ್ಲಿ ಸಂಭಾವನೆ ಪಡೆಯದೆ ಕಾಣಿಸಿಕೊಂಡಿದ್ದರು.

ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಜೋಸ್ ಅಲುಕ್ಕಾಸ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಡಾ. ವಿಷ್ಣುವರ್ಧನ್

ಡಾ.ವಿಷ್ಣುವರ್ಧನ್ ಶುಭ್ ಜ್ಯೂವೆಲರ್ಸ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು

English summary
Some of the Kannada film celebrities acted in different Ad endorsements.
Please Wait while comments are loading...