For Quick Alerts
  ALLOW NOTIFICATIONS  
  For Daily Alerts

  ಪರಭಾಷೆಯಲ್ಲೂ ಸದ್ದು ಮಾಡಿದ 'ದಂಡುಪಾಳ್ಯ-4' ಲಿರಿಕಲ್ ವಿಡಿಯೋ

  |

  ವೆಂಕಟ್ ಮೂವೀಸ್ ಲಾಂಛನದಡಿ ನಿರ್ಮಾಣಗೊಂಡಿರುವ 'ದಂಡುಪಾಳ್ಯ 4' ಚಿತ್ರದ ಐಟಂ ಸಾಂಗ್ ವೊಂದು ಬಿಡುಗಡೆಯಾಗಿದೆ. ಮುಮೈತ್ ಖಾನ್ ಮಾದಕವಾಗಿ ಕುಣಿದಿರೋ, ಅದಕ್ಕೆ ತಕ್ಕ ಸಂಗೀತ ಮತ್ತು ಸಾಹಿತ್ಯವಿರೋ ಈ ಹಾಡು ಪಡ್ಡೆಗಳನ್ನು ಹುಚ್ಚೆಬ್ಬಿಸುವಂತೆಯೂ ಮಾಡಿದೆ.

  ಕನ್ನಡವೂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಈ ಹಾಡಿನ ಲಿರಿಕಲ್ ವೀಡಿಯೋ ರಿಲೀಸ್ ಆಗಿದ್ದು, ಈ ಮೂಲಕ 'ದಂಡುಪಾಳ್ಯ-4' ಚಿತ್ರ ಪರಭಾಷೆಗಳಲ್ಲಿಯೂ ಅಲೆಯೆಬ್ಬಿಸಿದೆ.

  ''ಸ್ಟೆಪ್ಪು ಹೊಡಿ... ಸ್ಟೆಪ್ಪು ಹೊಡಿ... ಟಪ್ಪಾಂಗುಚ್ಚಿ ಸ್ಟೆಪ್ಪು ಹೊಡಿ...'' ಎಂಬ ಇಡೀ ಹಾಡನ್ನು ಮಾದಕವಾಗಿಯೇ ಅಣಿಗೊಳಿಸಿರೋ ಚಿತ್ರತಂಡ, ಈ ಮೂಲಕವೇ ಮತ್ತಷ್ಟು ಪ್ರೇಕ್ಷಕರನ್ನು ಸೆಳೆದುಕೊಳ್ಳುವುದರಲ್ಲಿ ಗೆದ್ದಿದೆ.

  ಮುಮೈತ್ ಖಾನ್ ಸೊಂಟ ಬಳುಕಿಸಿರುವ ಈ ಹಾಡಿನ ಲಿರಿಕಲ್ ವೀಡಿಯೋ ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಲಭ್ಯವಿದ್ದು, ಅಷ್ಟೂ ಭಾಷೆಗಳಲ್ಲಿ ಬಹುಬೇಗನೆ ಅತಿ ಹೆಚ್ಚು ವೀಕ್ಷಕರನ್ನು ಪಡೆಯುವ ಮೂಲಕ ಟ್ರೆಂಡಿಂಗ್ ನಲ್ಲಿದೆ. 'ಸ್ಟೆಪ್ಪು ಹೊಡಿ' ಹಾಡಿಗೆ ನಿರ್ಮಾಪಕರಾದ ವೆಂಕಟ್ ಅವರೇ ಸಾಹಿತ್ಯ ಬರೆದಿದ್ದಾರೆ. ಆನಂದ್ ರಾಜ್ ವಿಕ್ರಂ ಸಂಗೀತ ನೀಡಿದ್ದಾರೆ. ಮುಂದೆ ಓದಿರಿ....

  ದಂಡುಪಾಳ್ಯ-4 ಚಿತ್ರದ ಕುರಿತು

  ದಂಡುಪಾಳ್ಯ-4 ಚಿತ್ರದ ಕುರಿತು

  ಕೆ.ಟಿ.ನಾಯಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈವರೆಗೆ ಮೂರು ಸರಣಿಯ ದಂಡುಪಾಳ್ಯ ಚಿತ್ರ ಮೂಡಿ ಬಂದಿದೆ. ಆದರೆ 'ದಂಡುಪಾಳ್ಯ-4' ಚಿತ್ರದಲ್ಲಿ ತಾರಾಗಣವೂ ಸೇರಿದಂತೆ ಎಲ್ಲವೂ ಬದಲಾಗಿದೆ.

  ಬರ್ತಿದೆ 'ದಂಡುಪಾಳ್ಯ 4' : ಈ ಬಾರಿ ಗ್ಯಾಂಗ್ ಸೇರಿದ್ದಾರೆ ಯಾರು ಊಹೆ ಮಾಡದ ನಟಿ!

  ಸುಮನ್ ರಂಗನಾಥ್ ಪಾತ್ರವೇನು.?

  ಸುಮನ್ ರಂಗನಾಥ್ ಪಾತ್ರವೇನು.?

  ಈ ಬಾರಿ 'ದಂಡುಪಾಳ್ಯ-4' ಚಿತ್ರದ ಪ್ರಮುಖ ಆಕರ್ಷಣೆ ಸುಮನ್ ರಂಗನಾಥ್. ಅವರಿಲ್ಲಿ ಇಮೇಜಿನ ಹಂಗಿಲ್ಲದೆ ಡಿಫರೆಂಟಾದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇದುವರೆಗೂ ಗ್ಲಾಮರ್ ಪಾತ್ರಗಳಲ್ಲಿಯೇ ಮಿಂಚುತ್ತಾ ಬಂದಿರುವ ಅವರು ದಂಡುಪಾಳ್ಯ ಗ್ಯಾಂಗಿನ ಮಹಿಳೆಯಾಗಿ ನಟಿಸಿದ್ದಾರೆ. ಈ ಕಾರಣದಿಂದಲೂ 'ದಂಡುಪಾಳ್ಯ-4' ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ.

  'ದಂಡುಪಾಳ್ಯ'ದಲ್ಲಿ ಇರಲಿದೆ ಮುಮೈತ್ ಖಾನ್ ತಕಧಿಮಿತಾ.!

  ಸದ್ದು ಮಾಡುತ್ತಿರುವ ಲಿರಿಕಲ್ ವಿಡಿಯೋ

  ಸದ್ದು ಮಾಡುತ್ತಿರುವ ಲಿರಿಕಲ್ ವಿಡಿಯೋ

  ಕನ್ನಡ ಚಿತ್ರಗಳನ್ನು ಪರಭಾಷಾ ನೆಲದಲ್ಲಿಯೂ ಮಿಂಚುವಂತೆ ಮಾಡಬೇಕೆಂಬ ಕನಸು ಹೊಂದಿರುವವರು ನಿರ್ಮಾಪಕ ವೆಂಕಟ್. ಅದರಲ್ಲಿ ಅವರು ಈ ಹಿಂದೆಯೂ ಯಶಸ್ಸು ಕಂಡಿದ್ದಾರೆ. ಅದರ ಭಾಗವಾಗಿಯೇ ಇದೀಗ ಈ ಚಿತ್ರದ ಲಿರಿಕಲ್ ವೀಡಿಯೋ ಪರಭಾಷೆಗಳಲ್ಲಿಯೂ ಸದ್ದು ಮಾಡುತ್ತಿದೆ.

  ಚಿತ್ರ ತಂಡ

  ಚಿತ್ರ ತಂಡ

  ಕೆ.ಟಿ. ನಾಯಕ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಆರ್.ಗಿರಿ ಕ್ಯಾಮರಾ, ಬಾಬು.ಎ.ಶ್ರೀವತ್ಸ, ಪ್ರೀತಿ ಮೋಹನ್ ಸಂಕಲನವಿದೆ. ಸುಮನ್ ರಂಗನಾಥ್, ಮುಮೈತ್ ಖಾನ್, ಬ್ಯಾನರ್ಜಿ, ರಾಕ್ ಲೈನ್ ಸುಧಾಕರ್, ಸಂಜೀವ್ ಕುಮಾರ್, ಅರುಣ್ ಬಚ್ಚನ್, ಬುಲೆಟ್ ಸೋಮು, ವಿಠ್ಠಲ್ ರಂಗಾಯಣ, ಜೀವಾ ಸೈಮನ್, ರಿಚ್ಚಾ ಶಾಸ್ತ್ರಿ, ಸ್ನೇಹಾ ಮುಂತಾದವರ ತಾರಾಗಣವಿದೆ. ನಿರ್ಮಾಪಕ ವೆಂಕಟ್ ಅವರು ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Kannada Film 'Dandupalya 4' lyrical video released in 4 languages.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X