»   » ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್‌ಗೆ ನಾರಾಯಣ್

ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್‌ಗೆ ನಾರಾಯಣ್

Posted By:
Subscribe to Filmibeat Kannada
S Narayan
ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರು ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವುದು ಗೊತ್ತೇ ಇದೆ. ಅವರು ಜೆಡಿಎಸ್ ಪಕ್ಷಕ್ಕೆ ಆ.11ರಂದೇ ಅಧಿಕೃತವಾಗಿ ಸೇರ್ಪಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ.

ಜೆಡಿಎಸ್ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಅವರು ಸೆ.28ರಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ಎಸ್ ನಾರಾಯಣ್ ಅವರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ ಬೆಂಗಳೂರಿನಲ್ಲೇ ನಡೆಯಲಿದೆ. 2013ರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿನೆಮಾ ತಾರೆಗಳು ಒಬ್ಬೊಬ್ಬರಾಗಿ ರಾಜಕೀಯ ಕ್ಷೇತ್ರಕ್ಕೆ ಧುಮುಕುತ್ತಿರುವುದು ಗಾಂಧಿನಗರದಲ್ಲಿ ಚರ್ಚನೀಯ ವಿಷಯವಾಗಿದೆ.

"ಅದು ರಾಜಕೀಯವೇ ಇರಲಿ, ಸಿನೆಮಾ ಕ್ಷೇತ್ರವೇ ಇರಲಿ ನನ್ನ ತನವನ್ನು ನಾನು ಬಿಟ್ಟುಕೊಡಲ್ಲ. ನಾನು ಯಾವುದನ್ನೂ ಸುತ್ತಿ ಬಳಸಿ ಹೇಳುವ ಪೈಕಿಯಲ್ಲ. ಎಲ್ಲವನ್ನೂ ನೇರ ನಿಷ್ಠುರವಾಗಿ ಹೇಳುತ್ತೇನೆ. ಚಿತ್ರೋದ್ಯಮದಲ್ಲಿರುವ ಎಲ್ಲರಿಗೂ ಇದು ಗೊತ್ತು. ರಾಜಕೀಯದಲ್ಲೂ ಅಷ್ಟೇ ಇದೇ ರೀತಿ ಇರುತ್ತೇನೆ" ಎಂದಿದ್ದರು ನಾರಾಯಣ್.

ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರಿಗೂ ಎಸ್ ನಾರಾಯಣ್ ಅವರಿಗೂ ಮೊದಲಿನಿಂದಲೂ ಒಡನಾಟವಿತ್ತು. ಕುಮಾರಸ್ವಾಮಿ ಅವರ ಬ್ಯಾನರ್ ನಲ್ಲಿ ಬಂದಂತಹ ಹಲವಾರು ಚಿತ್ರಗಳನ್ನು ನಾರಾಯಣ್ ನಿರ್ದೇಶಿಸಿದ್ದಾರೆ. ಅವುಗಳಲ್ಲಿ 'ಸೂರ್ಯವಂಶ', 'ಗಲಾಟೆ ಅಳಿಯಂದಿರು', 'ಚಂದ್ರಚಕೋರಿ' ಪ್ರಮುಖವಾದವು.

ನಾರಾಯಣ್ ನಿರ್ದೇಶಿಸಿರುವ ಲೇಟೆಸ್ಟ್ ಚಿತ್ರ 'ಅಪ್ಪಯ್ಯ' ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೆ ಕನ್ನಡ ಚಿತ್ರರಂಗದ ತಾರೆಗಳಾದ ಪೂಜಾಗಾಂಧಿ, ಮಾಳವಿಕಾ ಅನಿನಾಶ್ ಅವರು ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. ರಮ್ಯಾ ಅವರು ಕಾಂಗ್ರೆಸ್ ಪಕ್ಷದ ಕೈಹಿಡಿದ್ದಾರೆ. ತಾರೆ ರಕ್ಷಿತಾ ಅವರು ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜಾಡಿನಲ್ಲಿ ಈಗ ಕಲಾ ಸಾಮ್ರಾಟ್ ಹೆಜ್ಜೆ ಹಾಕುತ್ತಿರುವುದು ವಿಶೇಷ. (ಒನ್ ಇಂಡಿಯಾ ಕನ್ನಡ)

English summary
Kannada films popular director Kala Samrat S Narayan officially to join JD(S) on 28th Sept, 2012 in presence of former prime minister HD Deve Gowda and JD(S) state president HD Kumaraswamy. Narayan done films like, "Suyavamsha', "Galate Aliyandiru' and "Chandra Chakori" with Kumara Swamy.
Please Wait while comments are loading...