»   » ನವದೆಹಲಿಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಅಬ್ಬರ

ನವದೆಹಲಿಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಅಬ್ಬರ

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಚಲನಚಿತ್ರೋತ್ಸವ ನಿರ್ದೇಶನಾಲಯ ಒಟ್ಟಾಗಿ ಸೇರಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ಕನ್ನಡ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಒಟ್ಟು 9 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಇದೇ ಏಪ್ರಿಲ್ 16 ರಿಂದ 18ರವರೆಗೆ ಜರುಗಲಿರುವ ಚಿತ್ರ ಉತ್ಸವ ಸಮಾರಂಭ 16ನೇ ತಾರೀಖಿನಂದು ಬೆಳಗ್ಗೆ ಸರಿಯಾಗಿ 10.15ಕ್ಕೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮವನ್ನು ನವದೆಹಲಿಯ ಆಗಸ್ಟ್ ಕ್ರಾಂತಿ ಮಾರ್ಗದಲ್ಲಿರುವ ಸಿರಿಫೋರ್ಟ್ ಆಡಿಟೋರಿಯಂ-2 ನಲ್ಲಿ ಹಮ್ಮಿಕೊಳ್ಳಲಾಗಿದೆ.[KFCCಯಿಂದ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ]


Kannada Film festival in Delhi- 2016

ನಮ್ಮ ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳು ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವುದರಿಂದ ಯಾರೂ ಈ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ. 'ಆದರೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಸ್ಟಾರ್ ನಟ-ನಟಿಯರನ್ನು ಇಂತಹ ಕಾರ್ಯಕ್ರಮಗಳಿಗೆ ಕರೆತರುತ್ತೇವೆ' ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.[ಅದ್ಧೂರಿಯಾಗಿ ಆರಂಭಗೊಂಡ ಭಾರತೀಯ ಪನೋರಮಾ ಸಿನಿಹಬ್ಬ]


ಅಂದಹಾಗೆ ಈ ಸಮಾರಂಭದಲ್ಲಿ ನಿರ್ದೇಶಕ ರಾಮ್ ರೆಡ್ಡಿ ಅವರ ತಿಥಿ, ಬಿ.ಎಸ್ ಲಿಂಗದೇವರ 'ನಾನು ಅವನಲ್ಲ ಅವಳು', ಅನುಪ್ ಭಂಡಾರಿ ಅವರ 'ರಂಗಿತರಂಗ', ಮನ್ಸೂರೆ ಅವರ 'ಹರಿವು', ಪಿ.ಶೇಷಾದ್ರಿ ಅವರ 'ವಿದಾಯ', ಶಶಾಂಕ್ ಅವರ 'ಕೃಷ್ಣಲೀಲಾ', ಸಂತೋಷ್ ಆನಂದ್ ರಾಮ್ ಅವರ 'ಮಿ.ಅಂಡ್ ಮಿಸಸ್ ರಾಮಾಚಾರಿ', ನರೇಶ್ ಕುಮಾರ್ ಅವರ 'ಫಸ್ಟ್ ರ್ಯಾಂಕ್ ರಾಜು', ಹಾಗೂ ಪಿ.ವಾಸು ಅವರ 'ಶಿವಲಿಂಗ' ಸಿನಿಮಾ ಪ್ರದರ್ಶನಗೊಳ್ಳಲಿದೆ.[ಕನ್ನಡ ಚಲನಚಿತ್ರ ಸಿಂಹಾವಲೋಕನ: ಸಾಧಕರಿಗೆ ಸನ್ಮಾನ]


ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಸಿನಿಮಾಗಳ ಫೋಟೋ ಗ್ಯಾಲರಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ..


-
-
ನವದೆಹಲಿಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಅಬ್ಬರ

ನವದೆಹಲಿಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಅಬ್ಬರ

-
-
-
-
-
-
-
-
English summary
Jointly organised by the Karnataka Department of Information, Directorate of Film Festivals and the Karnataka Chalanachitra Academy, a film festival in New Delhi will screen 9 Kannada films. The event which starts from April 16th and ends on April 18th, will showcase the recently released and critically acclaimed Kannada movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada