»   » ಕನ್ನಡ ಚಿತ್ರೋದ್ಯಮದ ಒಗ್ಗಟ್ಟಿಗೆ ಈ ಇಬ್ಬರು ಮುಂದಾಗಲಿ

ಕನ್ನಡ ಚಿತ್ರೋದ್ಯಮದ ಒಗ್ಗಟ್ಟಿಗೆ ಈ ಇಬ್ಬರು ಮುಂದಾಗಲಿ

By: ಬಾಲರಾಜ್ ತಂತ್ರಿ
Subscribe to Filmibeat Kannada

ಕನ್ನಡ ಚಿತ್ರೋದ್ಯಮ ಅನಧಿಕೃತವಾಗಿ ಎರಡು ಬಣಗಳಂತಾಗಿರುವುದು ಅಭಿಮಾನಿಗಳಿಗೆ ತಿಳಿದಿರುವ ವಿಚಾರ. ದಿನದಿಂದ ದಿನಕ್ಕೆ ಇತ್ತಂಡಗಳ ನಡುವೆ ಸೌಹಾರ್ದಯುತವಾದ ವಾತಾವರಣ ಕಾಣುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

ಕೆಲವೊಮ್ಮೆ ನಟರು ಸುಮ್ಮನಿದ್ದರೂ ಅಭಿಮಾನಿಗಳು ಸುಮ್ಮನಿರುವುದಿಲ್ಲ. ಅಭಿಮಾನಿಗಳಿಂದಾಗುವ ಅತಿರೇಕಕ್ಕೆ, ಗುಂಪುಗಾರಿಕೆಗೆ, ಕೆಸೆರೆರೆಚಾಟಕ್ಕೆ ನಟರು ಉತ್ತರಿಸಬೇಕಾದ ಅನಿವಾರ್ಯತೆ ಹಲವು ಬಾರಿ ಆದ ಉದಾಹರಣೆಗಳೂ ನಮ್ಮ ಮುಂದಿವೆ. (ಬಂಗಾರದಂಥ ನಿರ್ದೇಶಕರನ್ನು ಈ ರೀತಿ ಕಾಣೋದಾ)

ಇಂತಹ ಘಟನೆಗಳು ಚಿತ್ರೋದ್ಯಮಕ್ಕೆ ಮಾರಕವಾಗುವ ಶೀತಲ ಸಮರಕ್ಕೆ ಮತ್ತಷ್ಟು ತುಪ್ಪ ಸುರಿಯದೇ ಇನ್ನೇನು ಆಗುತ್ತೆ ಎನ್ನುವುದನ್ನು ಅಭಿಮಾನಿಗಳು ಅದ್ಯಾವಾಗ ಅರ್ಥ ಮಾಡಿಕೊಳ್ಳುತ್ತಾರೋ?

ಹಾಗಾದರೆ ಉತ್ತರ ಧೃವ, ದಕ್ಷಿಣ ಧೃವದಂತಾಗಿರುವ ಕನ್ನಡ ಚಿತ್ರೋದ್ಯಮವನ್ನು ಒಗ್ಗಟ್ಟಾಗಿಸಲು ಯಾರಿಂದಲೂ ಸಾಧ್ಯವಿಲ್ಲವೇ? ಒಂದು ವೇಳೆ ಸಾಧ್ಯ ಎಂತಾದರೆ ಯಾರು ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಫಲ ಸಿಗಬಹುದು? ಯಾರ ಮಾತಿಗೆ ಚಿತ್ರೋದ್ಯಮದಕ್ಕೆ ಸಂಬಂಧ ಪಟ್ಟವರು ಮತ್ತು ಅಭಿಮಾನಿ ಸಂಘಗಳಿಂದ ಬೆಲೆ ಸಿಗಬಹುದು?

ಸದ್ಯ, ಚಿತ್ರೋದ್ಯಮದ ಎರಡೂ ಬಣಗಳ ಜೊತೆ ಸಕ್ರಿಯವಾಗಿ ತೊಡಗಿಸಿಕೊಂಡಿರುವವರು ಇಬ್ಬರು. ಈ ಇಬ್ಬರು ಮನಸ್ಸು ಮಾಡಿದರೆ, ಇವರ ಮಾತಿಗೆ ಚಿತ್ರೋದ್ಯಮ ಸ್ಪಂದಿಸಿದರೆ ನಮ್ಮ ಚಿತ್ರೋದ್ಯಮ ಮತ್ತೆ 'ಯುಗಾದಿ' ಹಬ್ಬ ಕಾಣುವ ದಿನ ದೂರವಿಲ್ಲ.

ನಮ್ಮ ಕನ್ನಡ ಚಿತ್ರೋದ್ಯಮದ ಈ ಇಬ್ಬರು ಹಿರಿಯ ಕಲಾವಿದರು ಸ್ಯಾಂಡಲ್ ವುಡ್ ನಲ್ಲಿ ಒಗ್ಗಟ್ಟು ಮೂಡಿಸುವ ಕೆಲಸಕ್ಕೆ ಮುಂದಾಗಲಿ ಎಂದು ಈ ಲೇಖನದ ಮೂಲಕ ನಾವು ಮಾಡಿಕೊಳ್ಳುತ್ತಿರುವ ಮನವಿ. ಪ್ರಯತ್ನ ನಮ್ಮದು, ಫಲಿತಾಂಶ ದೇವರದ್ದು ಎನ್ನುವ ಹಾಗೆ ನಿಮ್ಮ ಪ್ರಯತ್ನದಿಂದ ಕನ್ನಡ ಚಿತ್ರೋದ್ಯಮ ಒಗ್ಗಟ್ಟಾಗಲಿ ಮತ್ತೆ ತನ್ನ ಗತವೈಭವವನ್ನು ಕಾಣಲಿ ಎನ್ನುವುದು ಸಿನಿರಸಿಕರ ಆಶಯ.

ಇಬ್ಬರು ಹಿರಿಯ ಕಲಾವಿದರು ಯಾರು? ಈ ಇಬ್ಬರಿಂದ ಯಾಕೆ ಸಾಧ್ಯ ಎನ್ನುವುದಕ್ಕೆ ನಾವು ಕೊಡುತ್ತಿರುವ ಕೆಲವೊಂದು ಸ್ಪಷ್ಟೀಕರಣ ಸ್ಲೈಡಿನಲ್ಲಿ ಹೇಳಲಾಗಿದೆ.

ಇವರಿಂದ ಖಂಡಿತ ಸಾದ್ಯ

ಚಿತ್ರೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ, ಮತ್ತು ಸದ್ಯ ವಸತಿ ಸಚಿವರಾಗಿರುವ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಂದ ಬಗೆಹರಿಯಸಲಾಗದ ಸಮಸ್ಯೆ ಇದೇನೂ ಅಲ್ಲ.

ರೆಬೆಲ್ ಸ್ಟಾರ್ ಮತ್ತು ಕನಸುಗಾರ

ಅಂಬರೀಶ್ ರಾಜಕೀಯ ಮತ್ತು ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇನ್ನು ರವಿಮಾಮ ಆವರೇ ಹೇಳುವಂತೆ ಅವರಿಗೆ ಸಿನಿಮಾ ಬಿಟ್ಟರೆ ಇನ್ನೊಂದು ಗೊತ್ತಿಲ್ಲ. ಜೊತೆಗೆ ಇಬ್ಬರೂ ಚಿತ್ರೋದ್ಯಮದ ಎಲ್ಲಾ ಚಟುವಟಿಕೆ/ಹೋರಾಟದಲ್ಲಿ ತಮ್ಮನ್ನು ಸಕ್ರಿಯವಾಗಿ ಈ ದಿನದವರೆಗೂ ತೊಡಗಿಸಿಕೊಂಡಿದ್ದಾರೆ.

ಕಾರ್ಮಿಕರ ಸಮಸ್ಯೆ

ಇತ್ತೀಚೆಗೆ ತಿಂಗಳಿಂದ ಕಾಡುತ್ತಿದ್ದ ನಿರ್ಮಾಪಕರ - ಕಾರ್ಮಿಕರ ಸಮಸ್ಯೆಗೆ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಜೊತೆಯಾಗಿ ಮಾತುಕತೆಗೆ ತೆರಳಿದ್ದರು. ಶಿವಣ್ಣ ಮತ್ತು ರವಿಚಂದ್ರನ್ ಹೆಚ್ಚುಕಮ್ಮಿಯಾಗಿ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು.

ಕ್ಲಾಪ್ ಮಾಡುವುದೇ ರವಿಚಂದ್ರನ್

ಇನ್ನು ಅಣ್ಣಾವ್ರ ಬ್ಯಾನರಿನ ಇತ್ತೀಚಿನ ಎಲ್ಲಾ ಚಿತ್ರಗಳಿಗೆ ರವಿಚಂದ್ರನ್ ಕ್ಲಾಪ್ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇತರ ಬ್ಯಾನರಿನ ಚಿತ್ರಗಳಿಗೂ ರವಿ ಸರ್ ಕ್ಲಾಪ್ ಮಾಡುವುದು ಕಡ್ಡಾಯ. ಅದಕ್ಕೆ ಕೊಡಬಹುದಾದ ಲೇಟೆಸ್ಟ್ ಉದಾಹರಣೆ ದುನಿಯಾ ಸೂರಿ ನಿರ್ದೇಶನದ ದೊಡ್ಮನೆ ಹುಡುಗ.

ಸುದೀಪ್ ನಲ್ಲಿ ಮಗನನ್ನು ಕಂಡ ರವಿ

ಮಾಣಿಕ್ಯ ಚಿತ್ರದಲ್ಲಿ ಅಪ್ಪ-ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರವಿ - ಸುದೀಪ್ ಜೋಡಿ ಯಾವ ಪಾಟಿಗೆ ಹಿಟ್ ಆಯಿತು ಎನ್ನುವುದನ್ನು ಮತ್ತೆ ನೆನಪಿಸುವ ಅವಶ್ಯಕತೆಯಿಲ್ಲ. ಸುದೀಪ್ ನಲ್ಲಿ ನನ್ನ ಮೊದಲ ಮಗನನ್ನು ಕಂಡೆ ಎಂದು ರವಿಚಂದ್ರನ್ ಹಲವಾರು ಬಾರಿ ಇತ್ತೀಚಿನ ದಿನಗಳಲ್ಲಿ ಹೇಳಿಕೊಂಡಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಮನಸ್ಸು ಮಾಡಬೇಕು

ಅಣ್ಣಾವ್ರ ಜೀವಿತ ಅವಧಿಯಲ್ಲಿ ರಾಜ್-ಅಂಬಿ ಒಡಹುಟ್ಟಿದವರಂತೆ ಇದ್ದವರು. ರಾಜ್ ಕುಟುಂಬದ ಎಲ್ಲಾ ಕಾರ್ಯಕ್ರಮಗಳಿಗೆ ಅಂಬಿ, ಕುಟುಂಬ ಸಮೇತ ಹಾಜರಾಗುವುದು ನಡೆಯುತ್ತಲೇ ಬಂದಿದೆ. ಅಂಬಿ, ಪುನೀತ್ ಅಭಿನಯದ ಮುಂದಿನ ದೊಡ್ಮನೆ ಹುಡುಗ ಚಿತ್ರದಲ್ಲಿ ಅಂಬರೀಶ್ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂಬಿ, ಸುದೀಪ್, ದರ್ಶನ್ ಒಡನಾಟ

ಈ ಮೂವರ ಒಡನಾಟದ ಬಗ್ಗೆ ಹೆಚ್ಚಿನ ವಿವರಣೆ ಅನವಶ್ಯಕ. ಸಿಸಿಎಲ್ ಪಂದ್ಯಾವಳಿ ಈ ಮೂವರ ನಡುವಣ ಸಂಬಂಧ ಇನ್ನಷ್ಟು ಬೆಸೆಯಲು ಸೂಕ್ತ ವೇದಿಕೆಯಾಗಿತ್ತು. ಇನ್ನು ಅಂಬಿ ಆಸ್ಪತೆಗೆ ದಾಖಲಾಗಿದ್ದಾಗ ಸುದೀಪ್ ಮತ್ತು ದರ್ಶನ್ ವಿಶೇಷ ಕಾಳಜಿ/ಜಬಾಬ್ದಾರಿ ವಹಿಸಿಕೊಂಡಿದ್ದು ನಮ್ಮ ಮುಂದಿದೆ. ದರ್ಶನ್ ಅಭಿನಯದ ಅಂಬರೀಶ ಚಿತ್ರದಲ್ಲಿ ರೆಬೆಲ್ ಸ್ಟಾರ್ ನಟಿಸಿದ್ದರು.

ಅಂಬಿ, ಕ್ರೇಜಿಸ್ಟಾರ್ ಮುಂದಾಗಲಿ

ಇಬ್ಬರೂ, ಎರಡೂ ಕಡೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಮನಸ್ಸು ಮಾಡಿದರೆ ಕನ್ನಡ ಚಿತ್ರೋದ್ಯಮವನ್ನು ಒಗ್ಗಾಟಾಗಿಸಬಹುದು. ನಮ್ಮ ಚಿತ್ರೋದ್ಯಮದ ಒಳಿತಿಗಾಗಿ ಇವರು ಈ ಕೆಲಸಕ್ಕೆ ಮುಂದಾಗಲಿ. ಜೊತೆಗೆ ಇತ್ತಂಡಗಳ ನಡುವೆ ತಂದಿಡುವ ವಿಘ್ನಸಂತೋಷಿಗಳನ್ನೂ ನೇಪಥ್ಯಕ್ಕೆ ತಳ್ಳಲಿ.

English summary
Kannada film industry cold war: Rebel star cum Housing Minister Ambareesh and Crazy star V Ravichandran can resolve.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada