ಭಾರತ್ ಬಂದ್ ಗೆ ಚಿತ್ರರಂಗ ನೈತಿಕ ಬೆಂಬಲ, ಪ್ರದರ್ಶನಕ್ಕೆ ಅಡ್ಡಿಯಿಲ್ಲ
ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಮತ್ತು ಮೋಟಾರು ವಾಹನ ಮಸೂದೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ಕರೆ ನೀಡಿದೆ.
ಈ ಬಂದ್ ಗೆ ಕನ್ನಡ ಚಿತ್ರರಂಗ ನೈತಿಕ ಬೆಂಬಲ ನೀಡಿದ್ದು, ಸಿನಿಮಾ ಚಟುಟಿಕೆಗಳಿಗೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ಆದ್ರೆ, ಚಿತ್ರ ಪ್ರದರ್ಶನವನ್ನ ನಿಲ್ಲಿಸದಿರಲು ವಾಣಿಜ್ಯ ಮಂಡಳಿ ತೀಮಾರ್ನಿಸಿದೆ. ಈ ಮೂಲಕ ಚಿತ್ರಮಂದಿರದಲ್ಲಿ ಸಿನಿಮಾಗಳು ಎಂದಿನಂತೆ ಪ್ರದರ್ಶನವಾಗಲಿದೆ.
ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ?

ಇನ್ನುಳಿದಂತೆ ಮಂಗಳವಾರ ಮತ್ತು ಬುಧವಾರ ಮುಷ್ಕರ ನಡೆಯಲಿದ್ದು, ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ನೀಡಿದೆ. ಕೆಎಸ್ಆರ್ ಟಿಸಿ ಬಸ್ ಇರಲ್ಲ. ಬಿಎಂಟಿಸಿ ಬಸ್ ಕೂಡ ಅನುಮಾನ. ಆಟೋ ಸೇವಾ ಅಲಭ್ಯ. ಟ್ಯಾಕ್ಸಿಸೇವೆಯೂ ಇರಲ್ಲ.
ಎರಡು ದಿನದ ಮುಷ್ಕರದ ವೇಳೆ ಆಸ್ಪತ್ರೆ, ಮೆಡಿಕಲ್ ಶಾಪ್, ನಮ್ಮ ಮೆಟ್ರೋ, ರೈಲು ಸೇವೆಗೆ ಯಾವುದೇ ತೊಂದರೆ ಇಲ್ಲ. ಆಂಬ್ಯಲೆನ್ಸ್, ಹಾಲಿನ ವಾಹನಗಳು ಸಹ ಎಂದಿನಂತೆ ಇರಲಿವೆ.
More from Filmibeat
English summary
Won't stop film screening in Bengaluru and Karnataka. but, kannada film industry gives moral support to bharat bandh.
chinne gowda bharat bandh film chamber sandalwood ಚಿನ್ನೇಗೌಡ ಭಾರತ್ ಬಂದ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಯಾಂಡಲ್ ವುಡ್


Click it and Unblock the Notifications











