»   » ಕನ್ನಡದ ಮೋಸ್ಟ್ ಎಲಿಜಿಬಲ್ ಬ್ರಹ್ಮಚಾರಿ ನಟರು

ಕನ್ನಡದ ಮೋಸ್ಟ್ ಎಲಿಜಿಬಲ್ ಬ್ರಹ್ಮಚಾರಿ ನಟರು

Posted By:
Subscribe to Filmibeat Kannada

ಚತುರಾಶ್ರಮಗಳಲ್ಲಿ ಎರಡನೆಯದ್ದು ಬ್ರಹ್ಮಚರ್ಯ. ಮಾನವನ ವಯಸ್ಸನ್ನು ಅಂದಾಜು ನೂರು ವರ್ಷ ಎಂದು ಇಟ್ಟುಕೊಂಡರೆ ಅದರಲ್ಲಿ ಮೊದಲ ಇಪ್ಪತ್ತೈದು ವರ್ಷ ಬ್ರಹ್ಮಚರ್ಯಕ್ಕೆ ನಂತರದ 25 ವರ್ಷ ಗೃಹಸ್ಥಾಶ್ರಮಕ್ಕೆ. ವೇದಗಳಲ್ಲಿ ಹೇಳಿದಂತೆ ನಿಜವಾದ ಬ್ರಹ್ಮಚರ್ಯ ಅಂದರೆ ಮದುವೆಯಾಗದಿರುವುದು ಮಾತ್ರ ಅಲ್ಲ. ಭಗವಂತನನ್ನು ಧ್ಯಾನಿಸುತ್ತಾ, ಜ್ಞಾನಾರ್ಜನೆಯಲ್ಲಿ ವಿಹರಿಸುವುದು ಎನ್ನುವ ಅರ್ಥವೂ ಇದೆ.

ಮೊದಲ ಪ್ಯಾರಾದಲ್ಲಿ ಬರೆದ ವಿಚಾರ ಸೆಲೆಬ್ರಿಟಿಗಳಿಗೆ ಅಥವಾ ಸೆಲೆಬ್ರಿಟಿ ಜಗತ್ತಿಗೆ ಸಂಬಂಧಪಟ್ಟ ವಿಚಾರವಂತೂ ಅಲ್ಲವೇ ಅಲ್ಲ, ಯಾಕೆಂದರೆ ಬ್ರಹ್ಮಚರ್ಯ ಸಿದ್ಧಿಸಬೇಕಾದಲ್ಲಿ ಮೇಲಿನ ವಿಚಾರದ ಜೊತೆಗೆ ಇಂದ್ರಿಯ ನಿಗ್ರಹ ಸಾಧಿಸುವುದು ಅತ್ಯವಶ್ಯಕ.

ಹಾಗಿದ್ದರೂ ಸಿನಿಮಾ ಜಗತ್ತಿನಲ್ಲಿ ಇನ್ನೂ ಕೆಲವರು ಬ್ರಹ್ಮಚಾರಿಗಳಾಗಿದ್ದಾರೆ. ಬಾಲಿವುಡ್ ಸೆಲೆಬ್ರಿಟಿ ಜಗತ್ತಿನಲ್ಲಿ ನೋಡುವುದಾದರೆ, ಬ್ಯಾಡ್ ಬಾಯ್ ಸಲ್ಲೂ ಮಿಯಾ ಇನ್ನೂ ಗೃಹಸ್ಥಾಶ್ರಮಕ್ಕೆ ಫಿಕ್ಸ್ ಆಗದೇ ಇರೋದು ನೋಡಿದ್ರೆ ಯಾಕೋ ಫುಲ್ ಟೈಮ್ ಬ್ರಹ್ಮಚಾರಿ ಆಗೋ ರೂಟ್ ನಲ್ಲಿ ಸಾಗುತ್ತಿದ್ದಾರೋ ಎಂದು ಅನಿಸುತ್ತಿದೆ.

ಅಲ್ಲಿದ್ದು ಬಿಡಿ ನಮ್ಮ ಸ್ಯಾಂಡಲ್ ವುಡ್ಡಿನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಯಾರು?

ಆದಿತ್ಯ

ಜನಿಸಿದ್ದು : 04.05.1978
ತಂದೆ, ತಾಯಿ: ರಾಜೇಂದ್ರ ಸಿಂಗ್ ಬಾಬು, ಅನುರಾಧಾ
ಹುಟ್ಟಿದ ಸ್ಥಳ : ಬೆಂಗಳೂರು
ಒಟ್ಟು ನಟಿಸಿದ ಚಿತ್ರಗಳು : 13

ದಿಗಂತ್

ಜನಿಸಿದ್ದು : 28.12.1983
ತಂದೆ, ತಾಯಿ: ಕೃಷ್ಣಮೂರ್ತಿ, ಮಲ್ಲಿಕಾ
ಹುಟ್ಟಿದ ಸ್ಥಳ : ಸಾಗರ
ಒಟ್ಟು ನಟಿಸಿದ ಚಿತ್ರಗಳು : 22

ಚೇತನ್ ಕುಮಾರ್

ಜನಿಸಿದ್ದು : 24.02.1984
ಹುಟ್ಟಿದ ಸ್ಥಳ : ಚಿಕಾಗೋ, ಅಮೇರಿಕಾ
ಒಟ್ಟು ನಟಿಸಿದ ಚಿತ್ರಗಳು : 06

ಪ್ರಜ್ವಲ್ ದೇವರಾಜ್

ಜನಿಸಿದ್ದು : 04.07.1987
ತಂದೆ : ದೇವರಾಜ್
ಹುಟ್ಟಿದ ಸ್ಥಳ : ಬೆಂಗಳೂರು
ಒಟ್ಟು ನಟಿಸಿದ ಚಿತ್ರಗಳು : 17

ಯಶ್

ಜನಿಸಿದ್ದು : 08.01.1986
ಹುಟ್ಟಿದ ಸ್ಥಳ : ಮೈಸೂರು
ಒಟ್ಟು ನಟಿಸಿದ ಚಿತ್ರಗಳು : 12

ಯೋಗೀಶ್

ಜನಿಸಿದ್ದು : 06.07.1988
ತಂದೆ, ತಾಯಿ : ಟಿ ಪಿ ಸಿದ್ದರಾಜು, ಅಂಬುಜಾ
ಹುಟ್ಟಿದ ಸ್ಥಳ : ಬೆಂಗಳೂರು
ಒಟ್ಟು ನಟಿಸಿದ ಚಿತ್ರಗಳು : 18

English summary
Kannada film industries most eligible bachelor actors. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada