»   » ಗೊಣ್ಣೆ ಒರ್ಸಿಕೊಳ್ಳಲು ಬರದವ್ರು ಕನ್ನಡ ಸಿನಿ ವಿಮರ್ಶಕರಾ?

ಗೊಣ್ಣೆ ಒರ್ಸಿಕೊಳ್ಳಲು ಬರದವ್ರು ಕನ್ನಡ ಸಿನಿ ವಿಮರ್ಶಕರಾ?

Posted By:
Subscribe to Filmibeat Kannada

ದಶಕದಿಂದ ಕನ್ನಡ ಸಿನಿಮಾ ಪ್ರೇಕ್ಷಕರನ್ನು ತನ್ನದೇ ಆದ ಕಾಮಿಡಿ ಶೈಲಿಯಲ್ಲಿ ಸೆಳೆಯುತ್ತಿರುವವರಲ್ಲಿ ಮಂಚೂಣಿಯಲ್ಲಿ ಬರುವ ಹೆಸರು ಕನ್ನಡ ಚಿತ್ರೋದ್ಯಮ ಕಂಡ ಅಪ್ರತಿಮ ಕಲಾವಿದ ನವರಸ ನಾಯಕ ಜಗ್ಗೇಶ್.

ಜಗ್ಗೇಶ್ ತನ್ನ ಸಿನಿಮಾದ ಮೂಲಕ ಪ್ರೇಕ್ಷಕರನ್ನು ನಗೆಸಿದ್ದಾರೆಯೇ ಹೊರತು ತಾವು ಕಣ್ಣೀರಿಟ್ಟ ಉದಾಹರಣೆಗಳು ಕಮ್ಮಿ. ಆದರೆ ಅದ್ಯಾಕೋ, ಅಪರೂಕ್ಕೆ ಎನ್ನುವಂತೆ ಜಗ್ಗೇಶ್ ಟಿವಿ ಕಾರ್ಯಕ್ರಮವೊಂದರಲ್ಲಿ ಸಾಮಾಜಿಕ ತಾಣ ಮತ್ತು ಕನ್ನಡದ ಸಿನಿ ವಿಮರ್ಶಕರ ವಿರುದ್ದ ತೀರಾ ಬೇಸರದ ಮಾತನ್ನಾಡಿದ್ದಾರೆ. (ವಾಸ್ತುಪ್ರಕಾರ ಚಿತ್ರ ವಿಮರ್ಶೆ)

ವಾಸ್ತು ಪ್ರಕಾರ ಚಿತ್ರದ ಯಶಸ್ವೀ ಪ್ರದರ್ಶನದ ನಂತರ ಟಿವಿ9 ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜಗ್ಗೇಶ್, ಗೊಣ್ಣೆ ಒರ್ಸಿಕೊಳ್ಳಲು ಬರದವರೆಲ್ಲಾ ಕನ್ನಡ ಚಿತ್ರವನ್ನು ವಿಮರ್ಶೆ ಮಾಡುತ್ತಿದ್ದಾರೆ. ಎಲ್ಲಿಗೆ ಬಂದು ನಿಂತಿದೆ ನೋಡಿ ನಮ್ಮ ಕನ್ನಡ ಚಿತ್ರೋದ್ಯಮ ಎಂದು ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ.

ತನ್ನ ಸಿನಿಮಾದ ಮೂಲಕ ನೊಂದ ಜೀವಗಳಿಗೆ ಖುಷಿ ನೀಡುತ್ತಿದ್ದ ಜಗ್ಗೇಶ್, ಕಾರ್ಯಕ್ರಮದಲ್ಲಿ ತೀವ್ರ ಭಾವೋದ್ವೇಗಕ್ಕೆ ಒಳಗಾದರು. ಅವರ ಸಿಟ್ಟು, ವಾಸ್ತು ಪ್ರಕಾರ ಚಿತ್ರದ ಬಗ್ಗೆ ಸಾಮಾಜಿಕ ತಾಣದಲ್ಲಿ ಕೆಲವೊಂದು ವಿಮರ್ಶಕರು ನಡೆಸುತ್ತಿರುವ ವ್ಯವಸ್ಥಿತ ಅಪಪ್ರಚಾದ ಬಗ್ಗೆ. ಮುಂದೆ ಓದಿ..

ಎಷ್ಟೆಷ್ಟೋ ಚಿತ್ರಗಳಲ್ಲಿ ನಟಿಸಿದ್ದೇನೆ

ದಶಕದಿಂದ ಕನ್ನಡ ಚಿತ್ರೋದ್ಯಮದಲ್ಲಿದ್ದೇನೆ. ಚಿತ್ರ ನಿರ್ಮಿಸಿದ್ದೇನೆ, ನಿರ್ದೇಶಿಸಿದ್ದೇನೆ, ನಟಿಸಿದ್ದೇನೆ. ಆದರೆ ಇತ್ತೀಚೆಗೆ ಕನ್ನಡ ಚಿತ್ರೋದ್ಯಮ ಸರಿಯಾದ ದಾರಿಯಲ್ಲಿ ನಡೆಯುತ್ತಿಲ್ಲ. ಚಿತ್ರದ್ಯೋಮವನ್ನು ಮುನ್ನಡೆಸುವವರೇ ಇಲ್ಲ. ರಾಜಕುಮಾರ್ ಇದ್ದಾಗ ನಮ್ಮ ಚಿತ್ರೋದ್ಯಮ ಹೇಗಿತ್ತು. ಈಗ ಹೇಗಿದೆ ನೋಡಿ, ನೆನೆಸಿಕೊಂಡಾಗ ಸಂಕಟವಾಗುತ್ತೆ - ಜಗ್ಗೇಶ್

ಗೊಣ್ಣೆ ಒರ್ಸಿಕೊಳ್ಳಲು ಬರದವರು ಕನ್ನಡ ಸಿನಿ ವಿಮರ್ಶಕರಾಗಿದ್ದಾರೆ

ಕನ್ನಡ ಟೈಪಿಂಗ್ ಮಾಡಲು ಬರುತ್ತೇಂತ ಎಲ್ಲರೂ ವಿಮರ್ಶಕರಾಗಿದ್ದಾರೆ. ಚಿಕ್ಕ ಚಿಕ್ಕ ವಯಸ್ಸಿನವರು ಬೇಕಾಬಿಟ್ಟಿ ವಿಮರ್ಶೆ ಮಾಡಿ ಸಾಮಾಜಿಕ ತಾಣದಲ್ಲಿ ನಮ್ಮ ಚಿತ್ರದ ಬಗ್ಗೆ ಕೆಟ್ಟದಾಗಿ ಬರೆಯುತ್ತಿದ್ದಾರೆ. ಇವರಿಗೆಲ್ಲಾ ಅಧಿಕಾರ ಕೊಟ್ಟವರು ಯಾರು. ಸರಿಯಾಗಿ ಗೊಣ್ಣೆ ಒರ್ಸಿಕೊಳ್ಳಲು ಬರೋಲ್ಲಾ ಇವರೆಲ್ಲಾ ವಿಮರ್ಶಕರಾ, ಇವರೆಲ್ಲಾ ನೈಜ ಕನ್ನಡಿಗರಾ? - ಜಗ್ಗೇಶ್

ನಿರ್ಮಾಪಕರ ಕಷ್ಟ ಇವರಿಗೆ ಗೊತ್ತಾ?

ಇಂತಹ ಚಿಲ್ರೆ ಬುದ್ದಿಯವರಿಗೆ ನಮ್ಮ ನಿರ್ಮಾಪಕರ ಕಷ್ಟ ಅರಿವಾಗುತ್ತಾ? ಮನೆ, ಮಠ ಮಾರಿಕೊಂಡು,ಬಡ್ಡಿ ದುಡ್ಡು ಸುರಿದು ಚಿತ್ರ ನಿರ್ಮಿಸುತ್ತಾರೆ. ಚಿತ್ರ ನಿರ್ಮಾಣದ ಹಿಂದಿನ ನೋವು ಇವರಿಗೆ ಅರ್ಥವಾಗುತ್ತಾ? ಈ ನೋವು ಗೊತ್ತಿದ್ದರೆ ಸಾಮಾಜಿಕ ತಾಣದಲ್ಲಿ ನನ್ನ ಬಗ್ಗೆಯಾಗಲಿ, ವಾಸ್ತುಪ್ರಕಾರ ಚಿತ್ರದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರಲಿಲ್ಲ - ಜಗ್ಗೇಶ್

ಇದು ನಿಲ್ಲಬೇಕು

ಅದೆಷ್ಟೋ ಕಡೆಯಿಂದ ಮಾಹಿತಿ ಪಡೆದಿದ್ದೇನೆ. ಚಿತ್ರ ಶುರುವಾದ ಕೂಡಲೇ ಹುಡುಗರು ಮೊಬೈಲ್ ನಲ್ಲಿ ಮೆಸೇಜ್ ಮಾಡಲು ಶುರುಮಾಡುತ್ತಾರೆ. ಚಿತ್ರ ಸರಿಯಿಲ್ಲ, ನೋಡಬೇಡಿ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಇಂಥವರ ಮಾತಿಂದ ಚಿತ್ರಕ್ಕೆ ರಾಂಗ್ ಪಬ್ಲಿಸಿಟಿ ಆಗಲ್ವಾ? ಚಿತ್ರ ನೋಡಬೇಡಿ ಅನ್ನೋದಕ್ಕೆ ಇವರು ಯಾರು - ಜಗ್ಗೇಶ್

ನನ್ನ ಬಗ್ಗೆ ಕೂಡಾ ಬಹಳ ಕಾಮೆಂಟ್

ನಾನು ಇದುವರೆಗೆ ಯಾರಿಗೂ ತೊಂದರೆ ಕೊಟ್ಟವನಲ್ಲ, ನನ್ನ ತಾಯಿ ನನ್ನನ್ನು ಆ ರೀತಿ ಬೆಳೆಸಿದ್ದಾರೆ. ನಾನು ಚಿತ್ರದಲ್ಲಿ ದಪ್ಪ ಕಾಣುತ್ತೇನೆ, ಮುಖ ದಪ್ಪವಾಗಿದೆ ಎಂದೆಲ್ಲಾ ಕಾಮೆಂಟ್ ಪಾಸ್ ಮಾಡಿದ್ದಾರೆ. ಹೌದು, ನನಗೆ ಮೈಗ್ರೀನ್ ಸಮಸ್ಯೆಯಿದೆ. ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಬೇರೆ ಭಾಷೆಯವರು ವಯಸ್ಸಾದರೂ, ದಪ್ಪವಾಗಿದ್ದರೂ ಪರವಾಗಿಲ್ಲ, ನಿಮ್ಮ ಜಗ್ಗೇಶ್ ನನ್ನು ನೋಡೋಕಾಗಲ್ವಾ - ಜಗ್ಗೇಶ್

ಭಟ್ರ ತಾಕತ್ತೇ ಬೇರೆ

ನಿರ್ದೇಶಕರ ಚಿತ್ರವೆಂದು ಜನ ಥಿಯೇಟರ್ ಬರೋದು ಅದು ಯೋಗರಾಜ್ ಭಟ್ರ ಚಿತ್ರಕ್ಕೆ ಮಾತ್ರ. ಅದನ್ನು ಬಹಳಷ್ಟು ಬಾರಿ ಅವರು ಪ್ರೂವ್ ಮಾಡಿದ್ದಾರೆ. ಈ ಚಿತ್ರವೂ ಹಾಗೆ, ನನ್ನ ಚಿತ್ರವೆಂದು ಜನ ಥಿಯೇಟರಿಗೆ ಬರುತ್ತಿಲ್ಲ. ಅದು ಭಟ್ರ ಚಿತ್ರಕ್ಕಿರುವ ತಾಕತ್ತು. ಅವರು ನನಗೆ ಅವಕಾಶ ಕೊಟ್ಟಿದ್ದಕ್ಕೆ ನಾನು ಅವರಿಗೆ ಖುಣಿಯಾಗಿದ್ದೇನೆ, ಚಿತ್ರಕ್ಕೆ ಎಲ್ಲಾ ಕಡೆಯಿಂದ ಪಾಸಿಟಿವ್ ರಿಪೋರ್ಟ್ ಬರುತ್ತಿದೆ - ಜಗ್ಗೇಶ್.

English summary
Kannada film industry Navarasa Nayaka Jaggesh upset with Social Media review of his latest movie Vaastu Prakara.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada