»   » ಅಂತೂ ಇಂತೂ ಲೂಸಿಯಾ ಚಿತ್ರ ಸ್ಟ್ಯಾಂಡ್ ಆಯ್ತು

ಅಂತೂ ಇಂತೂ ಲೂಸಿಯಾ ಚಿತ್ರ ಸ್ಟ್ಯಾಂಡ್ ಆಯ್ತು

Posted By:
Subscribe to Filmibeat Kannada

ಹೊಸಬರ ಪ್ರಯತ್ನದ 'ಲೂಸಿಯಾ' ಚಿತ್ರ ಮಿಶ್ರ ಪ್ರತಿಕ್ರಿಯೆಗೆ ಪಾತ್ರವಾಗಿತ್ತು. ಈಗ ಈ ಚಿತ್ರ ಅರ್ಧ ಸೆಂಚುರಿ ಪೂರೈಸಿದೆ. ಸೆಪ್ಟೆಂಬರ್ 6ರಂದು ತೆರೆಗೆ ಬಂದ 'ಲೂಸಿಯಾ' ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದವು.

ಚಿತ್ರವನ್ನು ಆನ್ ಲೈನ್ ನಲ್ಲೂ ಬಿಡುಗಡೆ ಮಾಡಲಾಗಿದ್ದೂ ಅಂತಾರಾಷ್ಟ್ರೀಯ ಪ್ರೇಕ್ಷಕರ ಗಮನಸೆಳೆದಿದೆ. ನಿದ್ರಾಹೀನತೆಯಿಂದ ಬಳಲುವ ನಿಕ್ಕಿ (ಸತೀಶ್ ನೀನಾಸಂ) ಸುತ್ತ ಸುತ್ತುವ ಮನೋವೈಜ್ಞಾನಿಕ ಕಥಾ ಹಂದರವನ್ನು ಚಿತ್ರ ಒಳಗೊಂಡಿದೆ. [ಲೂಸಿಯಾ ಚಿತ್ರ ವಿಮರ್ಶೆ]


ಆಸ್ಕರ್ ಪರಭಾಷಾ ಚಿತ್ರಗಳ ವಿಭಾಗಕ್ಕೆ ಭಾರತದಿಂದ ಇನ್ನೇನು ಲೂಸಿಯಾ ಆಯ್ಕೆ ಆಗಿಯೇ ಹೋಯಿತು ಎಂಬ ಸುದ್ದಿಗಳು ಬಂದವು. ಆವು ಬಂದಷ್ಟೇ ವೇಗವಾಗಿ ಸುದ್ದಿ ಠುಸ್ ಆಯಿತು. ಆಡಿಯನ್ಸ್ ಫಿಲಂಸ್ & ಹೋಮ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ 'ಲೂಸಿಯಾ'. ಪವನ್ ಕುಮಾರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸಿದ್ಧಾರ್ಥ್ ನುನಿ ಅವರ ಛಾಯಾಗ್ರಹಣವಿದೆ.

ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಸನತ್ ಸುರೇಶ್ ಮತ್ತು ಪವನ್ ಕುಮಾರ್ ಸಂಕಲನ, ಹರ್ಷ, ಮುರಳಿ, ಸೌಮ್ಯ ಜಗನ್ ಮೂರ್ತಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎಂ.ಕೆ.ಸುಬ್ರಹ್ಮಣ್ಯ.

ನೀನಾಸಂ ಸತೀಶ್, ಶ್ರುತಿ ಹರಿಹರನ್, ಹಾರ್ದಿಕಾ ಶೆಟ್ಟಿ, ಅಚ್ಯುತಕುಮಾರ್, ಸಂಜಯ್, ಕೃಷ್ಣ, ರಿಷಬ್, ಬಾಲಾಜಿ ಮನೋಹರ್, ಆರ್ಯನ್, ಪೂರ್ಣಚಂದ್ರ, ಪ್ರಶಾಂತ್, ಭರತ್, ಮಹದೇವ್, ವಸುಧಾ, ಪವನ್ ಕುಮಾರ್, ಪ್ರಸಾದ್, ಅರಸು, ನಾರಾಯಣಭಟ್, ಗೌರೀಶ್, ಮಹೇಶ್, ಸತೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸರಿಸುಮಾರು 110 ಜನ ಬಂಡವಾಳ ಹೂಡಿ ನಿರ್ಮಿಸಿರುವ ಚಿತ್ರ ಇದಾಗಿದೆ. ಮಂಗಳೂರಿನ ಹಾರ್ದಿಕ ಶೆಟ್ಟಿ, ಕೇರಳದ ಶ್ರುತಿ ಚಿತ್ರದ ನಾಯಕಿಯರು. ಚಿತ್ರದ ಆಡಿಯೋಗೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. "ನೀ ತೊರೆದ ಘಳಿಗೆಯಲಿ ನನ್ನ ಎದೆಯ ತುಂಬಾ ನಿನ್ನ ಗುರುತು", "ತಿನ್ಬೇಡಕಮ್ಮಿ ತಿನ್ ತಿನ್ಬೇಡಕಮ್ಮಿ" ಮತ್ತು "ಬಾನಲಿತ್ತು ಮುರಿದೊದ್ ಚಂದ್ರ" ಹಾಡುಗಳು ಸೂಪರ್ ಆಗಿವೆ. (ಒನ್ಇಂಡಿಯಾ ಕನ್ನಡ)

English summary
Sandalwood's critically acclaimed movie Lucia has completed its 50 days theatrical run. The movie, which got released on September 6, received rave reviews from the critics and audience across the state. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada