For Quick Alerts
  ALLOW NOTIFICATIONS  
  For Daily Alerts

  ಗಣೇಶ್ 'ಮಿಸ್ಟರ್ 420' ಮೊದಲರ್ಧ ಹೇಗಿದೆ?

  By Rajendra
  |

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರಣೀತಾ ಜೋಡಿಯ 'ಮಿ.420' ಚಿತ್ರ ಶುಕ್ರವಾರ (ಅ.19) ರಾಜ್ಯದಾದ್ಯಂತ ತೆರೆಕಂಡಿದೆ. ಈ ಚಿತ್ರದ ವಿಮರ್ಶೆ ನಿಮ್ಮ ನೆಚ್ಚಿನ ಒನ್ಇಂಡಿಯಾ ಕನ್ನಡದಲ್ಲಿ ಸಂಜೆ ಒಳಗೆ ಮೂಡಿಬರಲಿದೆ. ನಮ್ಮ ಸಿನೆಮಾ ಪತ್ರಕರ್ತರ ಪ್ರಕಾರ ಚಿತ್ರದ ಮೊದಲರ್ಧದ ರಿಪೋರ್ಟ್ ಹೀಗಿದೆ.

  ಇದೊಂದು ಸಾದಾಸೀದ ಕತೆ. ಹೆಸರಿಗೆ ತಕ್ಕಂತೆ ಚಿತ್ರದ ನಾಯಕ ನಟ (ಗೋಲ್ಡನ್ ಸ್ಟಾರ್ ಗಣೇಶ್) '420' ಕೆಲಸ ಮಾಡುತ್ತಿರುತ್ತಾನೆ. ಇವನಿಗೆ ಸಾಥ್ ನೀಡುವವನು ಅವರ ಸೋದರ ಮಾಮ (ರಂಗಾಯಣ ರಘು). ಈ ಇಬ್ಬರು ಕಳ್ಳರನ್ನು ಪೊಲೀಸ್ ಪೇದೆ (ಸಾಧು ಕೋಕಿಲ) ಫಾಲೋ ಮಾಡುತ್ತಾನೆ. ಇವರಿಗೆ ಒಂದು ಸೂಟ್ ಕೇಸ್ ಸಿಕ್ಕಿರುತ್ತದೆ.

  ಸೂಟ್ ಕೇಸ್ ಸಮೇತ ಪೊಲೀಸ್ ಇಬ್ಬರನ್ನು ಠಾಣೆಗೆ ಕರೆದೊಯುತ್ತಾನೆ. ಅಲ್ಲಿ ಸೂಟ್ ಕೇಸ್ ಓಪನ್ ಮಾಡಿದರೆ ವ್ಯಕ್ತಿಯೊಬ್ಬನ ತಲೆ ಅದರಲ್ಲಿ ಪತ್ತೆಯಾಗುತ್ತದೆ. ಮುಂದೇನಾಗುತ್ತದೆ ಎಂಬ ಕುತೂಹಲಘಟ್ಟದಲ್ಲಿ ಕತೆ ಸಾಗುತ್ತದೆ.

  ಈ ಚಿತ್ರದ ನಾಯಕ ಚೆಂದುಳ್ಳಿ ಚೆಲುವೆಯೊಬ್ಬಳ (ಪ್ರಣೀತಾ) ಮನಸ್ಸನ್ನೂ ಕದಿಯುತ್ತಾನೆ. ಆಕೆಗೆ ಈತನ 420 ಕೆಲಸಗಳು ಗೊತ್ತಾಗುತ್ತವೆ. ಬಳಿಕ ಏನಾಗುತ್ತದೆ ಎಂಬ ಅಂಶವೂ ಪ್ರೇಕ್ಷಕರಿಗೆ ಒಂದಷ್ಟು ಮಜಾ ನೀಡುತ್ತದೆ.

  ಆದರೆ ಕಥೆಯಲ್ಲಿ ಏನೂ ವಿಶೇಷವಿಲ್ಲದಿದ್ದರೂ ಮೊದಲರ್ಧ ಎಲ್ಲರ ನಿರೀಕ್ಷೆಯಂತೆ ಸಾಗುತ್ತದೆ. ಆದರೆ ಕಾಮಿಡಿ ಮಾತ್ರ ಭರ್ಜರಿಯಾಗಿದೆ ಎನ್ನುತ್ತಾರೆ ನಮ್ಮ ವರದಿಗಾರರು.

  ಇದು 'ಮಿ.420' ಚಿತ್ರದ ಸಂಪೂರ್ಣ ಚಿತ್ರಣವೇನು ಅಲ್ಲ. ಚಿತ್ರದ ಮೊದಲರ್ಧದ ಮೇಲೊಂದು ಇಣುಕು ನೋಟವಷ್ಟೇ. ಇದನ್ನೇ ಚಿತ್ರವಿಮರ್ಶೆ ಎಂದು ನಮ್ಮ ಓದುಗರು ಭಾವಿಸಬಾರದು. ಸ್ವಲ್ಪ ಸಮಯ ಕಾದರೆ ಚಿತ್ರದ ಸಂಪೂರ್ಣ ವಿಮರ್ಶೆ ನಿಮಗೆ ಸಿಗುತ್ತದೆ. ಅಲ್ಲಿಯವರೆಗೂ 420 ಚಿತ್ರದ ವಿಡಿಯೋಗಳನ್ನು ನೋಡುತ್ತಿರಿ!

  ಮಿ.420 ತಮಟೆ ಸೌಂಡು ಹಾಡು | ತಲೆಕೆಡಿಸಬೇಡ ಹಾಡು | ನೀ ಎಷ್ಟು ಮುದ್ದು ಹಾಡು

  English summary
  How is the Kannada film Mr.420?, The romantic comedy movie starring Ganesh and Pranitha in the lead. Here is the first half report of the film. Our reporter says that, the first half is fully loaded with comedy directed by Pradeep Raj. Watch Oneindia Kannada for full review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X