»   » ಫಾರಿನ್ ನಲ್ಲಿ ಬೀಡುಬಿಟ್ಟ ಸ್ಯಾಂಡಲ್ ವುಡ್ ತಾರೆಯರು ಏನ್ ಮಾಡ್ತಿದ್ದಾರೆ?

ಫಾರಿನ್ ನಲ್ಲಿ ಬೀಡುಬಿಟ್ಟ ಸ್ಯಾಂಡಲ್ ವುಡ್ ತಾರೆಯರು ಏನ್ ಮಾಡ್ತಿದ್ದಾರೆ?

Posted By:
Subscribe to Filmibeat Kannada

ಕನ್ನಡದ ನಟ ನಟಿಯರು ತಮ್ಮ ಸಿನಿಮಾಗಳ ಶೂಟಿಂಗ್ ಗಾಗಿ ಫಾರಿನ್ ಗೆ ಹೋಗುವುದು ಕಾಮನ್. ಆದರೆ ಈಗ ಸ್ಯಾಂಡಲ್ ವುಡ್ ನ ಅನೇಕ ತಾರೆಯರು ಒಂದೇ ಟೈಂ ನಲ್ಲಿ ವಿದೇಶದಲ್ಲಿ ಇರುವುದು ವಿಶೇಷವಾಗಿದೆ.

ದರ್ಶನ್, ಸುದೀಪ್, ನಿರ್ದೇಶಕ ಪ್ರೇಮ್, ಧ್ರುವಸರ್ಜಾ, ಹರಿಪ್ರಿಯಾ, ರಚಿತಾ ರಾಮ್, ಸೇರಿದಂತೆ ಸಾಕಷ್ಟು ಕನ್ನಡದ ಸ್ಟಾರ್ ಗಳು ಈಗ ವಿದೇಶದಲ್ಲಿ ತಮ್ಮ ತಮ್ಮ ಸಿನಿಮಾದಲ್ಲಿ ಬಿಜಿ ಇದ್ದಾರೆ. ಅಲ್ಲದೆ ಇನ್ನಷ್ಟು ಸ್ಟಾರ್ ಗಳು ವಿಮಾನ ಏರುವುದಕ್ಕೆ ಹೊರಟು ನಿಂತ್ತಿದ್ದಾರೆ. ಮುಂದೆ ಓದಿ....

ಕಿಚ್ಚ ಸುದೀಪ್-ಪ್ರೇಮ್ ಸೆಲ್ಫಿ ಹಿಂದೆ ಇರೋ ವಿಷ್ಯನೇ ಬೇರೆ .!

'ದಿ ವಿಲನ್' ಟೀಂ

'ದಿ ವಿಲನ್' ಟೀಂ ಕೆಲ ದಿನಗಳಿಂದ ಬ್ಯಾಂಕಾಕ್ ನಲ್ಲಿ ಬೀಡುಬಿಟ್ಟಿದೆ. ಈಗಾಗಲೇ ಸುದೀಪ್, ನಿರ್ದೇಶಕ ಪ್ರೇಮ್ ಸೇರಿದಂತೆ ಚಿತ್ರತಂಡ ನಿನ್ನೆಯಿಂದ ಚಿತ್ರೀಕರಣ ಶುರು ಮಾಡಿದೆಯಂತೆ.

ಶಿವಣ್ಣ ಬ್ಯಾಂಕಾಕ್ ಪ್ರವಾಸ

'ದಿ ವಿಲನ್' ಸಿನಿಮಾದ ಚಿತ್ರೀಕರಣಕ್ಕಾಗಿ ನಟ ಶಿವರಾಜ್ ಕುಮಾರ್ ಸಹ ಕೆಲ ದಿನಗಳಲ್ಲೇ ಬ್ಯಾಂಕಾಕ್ ಪ್ರವಾಸ ಹೋಗಲಿದ್ದಾರೆ.

'ದಿ ವಿಲನ್' ಚಿತ್ರೀಕರಣಕ್ಕಾಗಿ ಲಂಡನ್ ಗೆ ಹಾರಲಿದೆ ಪ್ರೇಮ್ ಅಂಡ್ ಟೀಂ.!

ಮಲೇಶಿಯಾದಲ್ಲಿ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 'ತಾರಕ್' ಸಿನಿಮಾದ ಚಿತ್ರೀಕರಣ ಇಟಲಿ ಮತ್ತು ಸ್ವಿಟ್ಚರ್ಲೆಂಡ್ ನಲ್ಲಿ ನಡೆಯಲಿದ್ದು, ನಾಯಕಿ ಶಾನ್ವಿ ಶ್ರೀವಾಸ್ತವ್ ಮತ್ತು ಶೃತಿ ಹರಿಹರನ್ ಸಹ ಭಾಗಿಯಾಗಲಿದ್ದಾರೆ.

ಸ್ಲೊವೇನಿಯಾದಲ್ಲಿ 'ಭರ್ಜರಿ' ಟೀಂ

'ಭರ್ಜರಿ' ಸಿನಿಮಾದ ಹಾಡಿನ ಚಿತ್ರೀಕರಣ ಸ್ಲೊವೇನಿಯಾದಲ್ಲಿ ನಡೆಯುತ್ತಿದೆ. ನಟ ಧ್ರುವಸರ್ಜಾ, ರಚಿತಾ ರಾಮ್, ಹರಿಪ್ರಿಯಾ ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ.

ಮಲೇಶಿಯಾದಲ್ಲಿ ದರ್ಶನ್ 'ತಾರಕ್' ಹಾಡಿನ ಚಿತ್ರೀಕರಣ

ಫ್ಯಾಮಿಲಿ ಟ್ರಿಪ್

'ಮುಗುಳುನಗೆ' ಸಿನಿಮಾದ ಶೂಟಿಂಗ್ ನಿಂದ ಬ್ರೇಕ್ ತಗೆದುಕೊಂಡಿದ್ದ ಯೋಗರಾಜ್ ಭಟ್ ತಮ್ಮ ಕುಟುಂಬದೊಂದಿಗೆ ಇತ್ತೀಚಿಗಷ್ಟೆ ಆಸ್ಟ್ರೇಲಿಯಾ ಟ್ರಿಪ್ ಗೆ ಹೋಗಿದ್ದರು.

'ಬಟರ್ ಫ್ಲೈ' ಹಾರಾಟ

ರಮೇಶ್ ಅರವಿಂದ್ ಸಹ ತಮ್ಮ 'ಬಟರ್ ಫ್ಲೈ' ಸಿನಿಮಾದ ಶೂಟಿಂಗ್ ಫಾರಿನ್ ನಲ್ಲಿ ಮಾಡುವ ಪ್ಲಾನ್ ನಲ್ಲಿದ್ದು, ಸದ್ಯದಲ್ಲೇ ವಿದೇಶಕ್ಕೆ ತೆರಳಲಿದ್ದಾರೆ.

'ನೀರ್ ದೋಸೆ' ತಿಂದ ಮೇಲೆ ಫಾರಿನ್ ನಲ್ಲಿ ಹರಿಪ್ರಿಯಾ ಪ್ರತ್ಯಕ್ಷ

English summary
Kannada Film Stars Shiva Rajkumar, Sudeep, Darshan, Dhruva sarja Busy with their movie shooting in Foreign

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada