For Quick Alerts
  ALLOW NOTIFICATIONS  
  For Daily Alerts

  ಕೊನೆಯ ಬಾರಿಗೆ ನೋಡಲು ಸಾಧ್ಯವಿಲ್ಲ ಎನ್ನುವ ದುಃಖ ಕಾಡುತ್ತಿದೆ: ಬುಲೆಟ್ ಸಾವಿಗೆ ಕಂಬನಿ ಮಿಡಿದ ಗಣ್ಯರು

  |

  ಹಾಸ್ಯನಟ ಬುಲೆಟ್ ಪ್ರಕಾಶ್ ಕೇವಲ 44ನೇ ವಯಸ್ಸಿನಲ್ಲಿಯೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಕಿಡ್ನಿ ಮತ್ತು ಲಿವರ್ ವೈಫಲ್ಯದಿಂದದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಯೆ ಕೊನೆಯುರೆಳೆದಿದ್ದಾರೆ. ಏಪ್ರಿಲ್ 7 ರಂದು ಹೆಬ್ಬಾಳದ ಚಿತಾಗಾರದಲ್ಲಿ ಬುಲೆಟ್ ಪ್ರಕಾಶ್ ಅಂತ್ಯ ಸಂಸ್ಕಾರ ನೆರವೇರಲಿದೆ.

  ಕೇವಲ ಕುಟುಂಬದವರು ಮತ್ತು ತೀರಾ ಆಪ್ತರು ಮಾತ್ರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ. ಲಾಕ್ ಡೌನ್ ಹಿನ್ನಲೆ ಬುಲೆಟ್ ಪ್ರಕಾಶ್ ಅವರನ್ನು ಕೊನೆಯಬಾರಿಗೆ ನೋಡಲು ಸಾಧ್ಯವಿಲ್ಲ ಎನ್ನುವ ದುಃಖ ಅನೇಕರನ್ನು ಕಾಡುತ್ತಿದೆ. ಚಿತ್ರರಂಗದ ಅನೇಕ ಸ್ಟಾರ್ ಜೊತೆ ಅಭಿನಯಿಸಿರುವ ಬುಲೆಟ್ ಎಲ್ಲರ ಜೊತೆಯು ಆತ್ನೀಯರಾಗಿದ್ದರು. ಈಗ ಗೆಳೆಯನ ಅಗಲಿಕೆಯ ನೋವು ಅವರನ್ನು ಕಾಡುತ್ತಿದೆ. ದೂರದಲ್ಲಿಯೆ ಇದ್ದು ಬುಲೆಟ್ ಪ್ರಕಾಶ್ ಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಕಿಚ್ಚ ಸುದೀಪ್, ದರ್ಶನ್, ದುನಿಯ ವಿಜಯ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಮುಂದೆ ಓದಿ...

  ಉಸಿರು ಮತ್ತು ಬದುಕು ಗೆದ್ದವ ಈ ಬಾರಿ ಮತ್ತೆ ಗೆಲ್ಲಲಿಲ್ಲ: ಬುಲೆಟ್ ಸಾವಿಗೆ ಗೆಳೆಯರ ಕಣ್ಣೀರುಉಸಿರು ಮತ್ತು ಬದುಕು ಗೆದ್ದವ ಈ ಬಾರಿ ಮತ್ತೆ ಗೆಲ್ಲಲಿಲ್ಲ: ಬುಲೆಟ್ ಸಾವಿಗೆ ಗೆಳೆಯರ ಕಣ್ಣೀರು

  ತುಂಬ ದುಃಖವಾಗುತ್ತಿದೆ-ಸುದೀಪ್

  ಬುಲೆಟ್ ಪ್ರಕಾಶ್ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ತುಂಬ ದುಃಖವಾಗುತ್ತಿದೆ. ಚಿತ್ರರಂಗದವರು ಕೊನೆಯ ಬಾರಿಗೆ ನೋಡಲು ಅವರ ಮನೆಗೆ ಹೋಗಲು ಸಾಧ್ಯವಿಲ್ಲ ಎನ್ನುವ ದುಃಖ ಇನ್ನು ಹೆಚ್ಚಾಗಿದೆ. ತುಂಬ ಫನ್ ಮತ್ತು ಅಧ್ಬುತ ನಟ. ನಿಮ್ಮ ಜಾಗ ತುಂಬಲು ಯಾರಿಂದನೂ ಸಾಧ್ಯವಿಲ್ಲ. ತುಂಬ ಮಿಸ್ ಮಾಡಿಕೊಳ್ಳುತ್ತೇನೆ ಗೆಳೆಯ. ಆತ್ಮಕ್ಕೆ ಶಾಂತಿ ಸಿಗಲಿ. ಯಾವಗಲು ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

  ಕನಸು ಈಡೇರಿಸಿಕೊಳ್ಳದೆ ಇಹಲೋಕ ತ್ಯಜಿಸಿದ ಬುಲೆಟ್ ಪ್ರಕಾಶ್ಕನಸು ಈಡೇರಿಸಿಕೊಳ್ಳದೆ ಇಹಲೋಕ ತ್ಯಜಿಸಿದ ಬುಲೆಟ್ ಪ್ರಕಾಶ್

  ನಟ ದರ್ಶನ್

  "ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.

  ಸದಾ ಜೊತೆಯಾಗಿದ್ದ ಗೆಳೆಯ- ದುನಿಯ ವಿಜಯ್

  "ಸದಾ ಜೊತೆಯಾಗಿದ್ದ ಆತ್ಮೀಯ ಒಮ್ಮೆಲೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ. ನನಗೆ ಬುಲೆಟ್ ಪ್ರಕಾಶ್ ಇನ್ನಿಲ್ಲ ಎಂಬುವ ನೋವನ್ನು ಪದಗಳಲ್ಲಿ ಬರೆಯಲು ಸಾಧ್ಯವಿಲ್ಲ. ಬುಲೆಟ್ ಕುಟುಂಬಕ್ಕೆ ಆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ನೀಡಲಿ. ಮತ್ತೆ ಹುಟ್ಟಿ ಬಾ ಗೆಳೆಯ" ಎಂದು ಆತ್ಮೀಯ ಗಳೆಯ ನಟ ದುನಿಯ ವಿಜಯ್ ಟ್ವೀಟ್ ಮಾಡಿದ್ದಾರೆ.

  ಕನ್ನಡ ಕಲಾದೇವಿಯ ಮಗನಾಗಿ ಮತ್ತೆ ಹುಟ್ಟಿ ಬನ್ನಿ- ಉಪೇಂದ್ರ

  "ಚಂದನವನದಲ್ಲಿ ನಮ್ಮನ್ನೆಲ್ಲಾ ನಗಿಸಿ ನಲಿಸಿ ನಗೆ ಕಡಲಿನಲ್ಲಿ ತೇಲಿಸಿ ಕಣ್ಮರೆಯಾದ ಹಾಸ್ಯ ಮಾಂತ್ರಿಕ ಬುಲೆಟ್ ಪ್ರಕಾಶ್ ರವರಿಗೆ ಭಾವಪೂರ್ಣ ವಿದಾಯ. ಕರುನಾಡಲ್ಲೇ ಕನ್ನಡ ಕಲಾದೇವಿಯ ಮಗನಾಗಿ ಮತ್ತೆ ಹುಟ್ಟಿ ಬನ್ನಿ. ಓಂ ಶಾಂತಿ" ಎಂದು ನಟ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

  ನಟ ಚೇತನ್ ಕುಮಾರ್

  "ಬುಲೆಟ್ ಪ್ರಕಾಶ್ ನಿಧನರಾದ ಬಗ್ಗೆ ನಾವೆಲ್ಲರೂ ದುಃಖಿತರಾಗಿದ್ದೇವೆ. ಅವರು ಪ್ರತಿಭಾವಂತ ನಟ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪ. 'ಮೈನಾ'ದ ನೆನಪು ಇಲ್ಲಿದೆ" ಎಂದು ಬುಲೆಟ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

  "ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಅಕಾಲಿಕ ನಿಧನ ದುಃಖಕರ. ಉತ್ತಮ ನಟನಾಗಿ ಜನಮನ ಗೆದ್ದಿದ್ದ ಬುಲೆಟ್ ಪ್ರಕಾಶ್ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರೂ ಆಗಿದ್ದರು. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

  ಶ್ರೀರಾಮುಲು

  "ಉತ್ತಮ ನಟ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾಗೂ ಸಹೋದರ ಸಮಾನರಾದ ಶ್ರೀ ಬುಲೆಟ್ ಪ್ರಕಾಶ್ ಇಂದು ನಿಧನ ಹೊಂದಿರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ" ಎಂದು ರಾಜಕಾರಣಿ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

  English summary
  Kannada film stars Darshan, Sudeep, Upendra, Duniya Vijay and others condolences to Bullet Prakash.
  Tuesday, April 7, 2020, 12:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X