»   » ಈ ವಾರ ರಾಧಿಕಾ ಕುಮಾರಸ್ವಾಮಿ ನಾಟಿ ಚಿತ್ರ 'ಸ್ವೀಟಿ'

ಈ ವಾರ ರಾಧಿಕಾ ಕುಮಾರಸ್ವಾಮಿ ನಾಟಿ ಚಿತ್ರ 'ಸ್ವೀಟಿ'

Posted By:
Subscribe to Filmibeat Kannada

ನಟಿ ರಾಧಿಕಾ ಕುಮಾರಸ್ವಾಮಿ ಅವರು ನಾಲ್ಕಾರು ವರ್ಷಗಳ ಬಳಿಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಬಾರಿ ಚಿತ್ರಗಳ ಬಗ್ಗೆ ನಿರೀಕ್ಷೆಗಳು ಸಾಕಷ್ಟಿವೆ. ಸ್ವೀಟಿ ಚಿತ್ರದ ಬಗ್ಗೆ ಬಹಳಷ್ಟು ಸಿಹಿಸಿಹಿ ಕನಸುಗಳನ್ನೂ ಕಟ್ಟಿಕೊಂಡಿದ್ದಾರೆ ರಾಧಿಕಾ.

ಇದೇ ಶುಕ್ರವಾರ (ನ.8) 'ಸ್ವೀಟಿ' ಚಿತ್ರ ಬಿಡುಗಡೆಯಾಗುತ್ತಿದೆ. ಹಲವಾರು ಕಾರಣಗಳಿಂದ ಚಿತ್ರದ ಶೂಟಿಂಗ್ ಕುಂಟುತ್ತಾ ಎಡವುತ್ತಾ ಸಾಗಿ ಈಗ ಬಿಡುಗಡೆ ಭಾಗ್ಯ ಕಾಣುತ್ತಿದೆ. ಚಿತ್ರದ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಹಾಗೂ ರಾಧಿಕಾ ನಡುವೆ ಅಸಮಾಧಾನದ ಹೊಗೆ ಎದ್ದಿತ್ತು.


ವಿಜಯಲಕ್ಷ್ಮಿ ಸಿಂಗ್ ಅವರು ಚಿತ್ರೀಕರಣಕ್ಕೆ ತಡವಾಗಿ ಬರುತ್ತಿದ್ದದ್ದು, ಇದರಿಂದ ನಿರ್ಮಾಪಕಿ ರಾಧಿಕಾ ಅವರಿಗೆ ಲಕ್ಷಾಂತರ ರುಪಾಯಿ ನಷ್ಟವೂ ಆಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಬಳಿಕ ಇಬ್ಬರ ನಡುವಿನ ಮನಸ್ತಾಪವೂ ಕಡಿಮೆಯಾಗಿತ್ತು.

ಚಿತ್ರದ ನಾಯಕ ನಟ ಆದಿತ್ಯ ಈ ಬಗ್ಗೆ ವಿವರವನ್ನೂ ನೀಡಿದ್ದರು. ಇವೆಲ್ಲಾ ಅಂತೆಕಂತೆ ಸುದ್ದಿಗಳು. ನಾವೆಲ್ಲರೂ ಆತ್ಮೀಯವಾಗಿದ್ದೇವೆ. ರಾಧಿಕಾ ಅವರ ಜೊತೆ ಇನ್ನೊಂದು ಚಿತ್ರವನ್ನೂ ಮಾಡುವಷ್ಟು ಸ್ನೇಹ ನಮ್ಮ ನಡುವಿದೆ ಎಂದಿದ್ದರು.

ಈಗ ಎಲ್ಲಾ ಅಧ್ಯಾಯಗಳನ್ನು ಮುಗಿಸಿಕೊಂಡಿರುವ 'ಸ್ವೀಟಿ' ಚಿತ್ರ ತೆರೆಯ ಮೇಲೆ ಕಣ್ಬಿಡುತ್ತಿದೆ. ಕಥೆ ಬಗ್ಗೆ ಎಲ್ಲೂ ರಾಧಿಕಾ, ಆದಿತ್ಯ, ವಿಜಯಲಕ್ಷ್ಮಿ ಸಿಂಗ್ ಯಾರೂ ಬಾಯ್ಬಿಟ್ಟಿಲ್ಲ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ ಎಂಬುದಷ್ಟೇ ಗೊತ್ತಿರುವ ಸಮಾಚಾರ.

ಚಿತ್ರದಲ್ಲಿ ರಮ್ಯಾ ಕೃಷ್ಣ ಸಹ ಪೋಷಕ ಪಾತ್ರವನ್ನು ಪೋಷಿಸಿದ್ದು ಚಿತ್ರದ ಬಗ್ಗೆ ಇನ್ನೊಂದು ಹಿಡಿಯಷ್ಟು ಕುತೂಹಲ ಮೂಡಿಸಿದೆ. ಎಚ್.ಡಿ.ಕುಮಾರಸ್ವಾಮಿ ಅರ್ಪಿಸುವ, ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾಕುಮಾರಸ್ವಾಮಿ ನಿರ್ಮಿಸಿರುವ ಚಿತ್ರವಿದು.

'ಸ್ವೀಟಿ' ಚಿತ್ರಕ್ಕೆ 'ನನ್ನ ಜೋಡಿ' ಎಂಬ ಅಡಿಬರಹವಿದೆ. ವಿಜಯಲಕ್ಷ್ಮೀಸಿಂಗ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಜಯ್ ವಿನ್ಸಂಟ್ ಛಾಯಾಗ್ರಹಣ, ಕೆಂಪರಾಜ್ ಸಂಕಲನ, ಈಶ್ವರಿ ಕುಮಾರ್ ಕಲಾನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಹರ್ಷ, ಇಮ್ರಾನ್, ಮುರಳಿ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

ರವಿರಾಜ್ ಹಾಗೂ ಯಾದವ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ಆದಿತ್ಯ, ರಾಧಿಕಾ, ರಮ್ಯಕೃಷ್ಣ, ಗಿರೀಶ್ ಕಾರ್ನಾಡ್, ಸಾಧುಕೋಕಿಲಾ, ಉಮಾಶ್ರೀ, ತಬಲನಾಣಿ, ಶರತ್‍ಲೋಹಿತಾಶ್ವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಏಜೆನ್ಸೀಸ್)

English summary
Kannada film 'Sweety' is releasing on 8th November all over Karnataka. Adithya and Radhika Kumarswamy are in the lead role. Movie is directed by Vijayalakshmi Singh and produced by Radhika Kumaraswamy under the banner Shamika Enterprises. 
Please Wait while comments are loading...