»   » ಕ್ರಿಕೆಟ್ ಆಯ್ತು, ಈಗ 'ಕಬಡ್ಡಿ' ಆಡಲಿದ್ದಾರೆ ಕನ್ನಡ ನಟಿಯರು

ಕ್ರಿಕೆಟ್ ಆಯ್ತು, ಈಗ 'ಕಬಡ್ಡಿ' ಆಡಲಿದ್ದಾರೆ ಕನ್ನಡ ನಟಿಯರು

Posted By:
Subscribe to Filmibeat Kannada

'ಸೆಲೆಬ್ರಿಟಿ ಕ್ರಿಕೆಟ್ ಲೀಗ್' ಟೂರ್ನಮೆಂಟ್ ಮೂಲಕ ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ನಾಯಕರು, ನಿರ್ದೇಶಕರು, ತಂತ್ರಜ್ಞರು... ಎಲ್ಲರೂ ಕ್ರೀಡಾಂಗಣಕ್ಕೆ ಇಳಿದು ಕ್ರಿಕೆಟ್ ಆಡಿ ರಂಜಿಸಿದ್ದರು. ಆದ್ರೆ, ನಾಯಕಿಯರು ಮಾತ್ರ ಪೆವಿಲಿಯನ್ ನಲ್ಲಿ ಕೂತು ಜೋಶ್ ಹೆಚ್ಚಿಸುತ್ತಿದ್ದರು.

ಇದೀಗ ನಾಯಕಿಯರೂ ಕೂಡ ನಾವೇನ್ ಕಮ್ಮಿ ಅಂತ ಅಂಗಳಕ್ಕೆ ಧುಮುಕಲು ಮನಸ್ಸು ಮಾಡಿದ್ದಾರೆ. ಆದ್ರೆ, ಕ್ರಿಕೆಟ್ ಅಲ್ಲ, ಕಬಡ್ಡಿ ಆಟ ಆಡಲು......ಹೌದು, ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಕಬಡ್ಡಿ ಲೀಗ್ ಆಯೋಜಿಸುತ್ತಿದ್ದು, ಕನ್ನಡದ ಬಹುತೇಕ ನಟಿಯರು ಕಬಡ್ಡಿ ಆಟವಾಡಲಿದ್ದಾರೆ.

ಹಾಗಿದ್ರೆ, ಯಾವ ಯಾವ ನಟಿಯರು ಭಾಗಿಯಾಗಲಿದ್ದಾರೆ? ಎಷ್ಟು ತಂಡಗಳು ಆಡಲಿವೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ಓದಿ.....

ಯಾರೆಲ್ಲಾ ಕಬಡ್ಡಿ ಆಡಲಿದ್ದಾರೆ?

ಸದ್ಯ, ಯಾರು ಯಾವ ತಂಡದಲ್ಲಿ ಆಡಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದ್ರೆ, ಯಾರೆಲ್ಲಾ ಆಡಲಿದ್ದಾರೆ ಎಂಬುದು ಬಹಿರಂಗವಾಗಿದೆ. ನಟಿಯರಾದ ರಾಗಿಣಿ ದ್ವಿವೇದಿ, ಹರಿಪ್ರಿಯಾ, ಮೇಘನಾ ರಾಜ್, ಮಾನ್ವಿತಾ ಹರೀಶ್ ಕಬಡ್ಡಿಗೆ ಜೈ ಎಂದಿದ್ದಾರೆ.

ಕಬಡ್ಡಿ ಅಖಾಡದಲ್ಲಿ ಸ್ಟಾರ್ ಹೀರೋಯಿನ್ಸ್

ಯಜ್ಞಾ ಶೆಟ್ಟಿ, ದುನಿಯಾ ರಶ್ಮಿ, ಶುಭಾ ಪೂಂಜಾ, ಕಾರುಣ್ಯ ರಾಮ್, ಕಾಮ್ನಾ ಜೇಠ್ಮಲಾನಿ ಕೂಡ ಕಬಡ್ಡಿಗಾಗಿ ಅಖಾಡಕ್ಕೆ ಧುಮುಕಲಿದ್ದಾರೆ.

ಕಬಡ್ಡಿಗೆ ಕಿಕ್ ಕೊಡಲಿದ್ದಾರೆ ಯುವನಟಿಯರು

ನಟಿ ಸೋನು ಗೌಡ, ಲಾಸ್ಯ, ನೇಹಾ ಗೌಡ, ಮೇಘನಾ ಗಾಂವ್ಕರ್, ತಾರಾ, ತಾನಿಯಾ ಸೇರಿದಂತೆ ಮತ್ತಷ್ಟು ನಟಿಯರು ಕಬಡ್ಡಿ ಲೀಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಂತಾರಾಷ್ಟ್ರೀಯ ಆಟಗಾರರು ಆಡುವ ಸಾಧ್ಯತೆ!

ಈ ಎಲ್ಲ ನಟಿಯರ ಜೊತೆ ಅಂತಾರಾಷ್ಟ್ರೀಯ ಆಟಗಾರರು ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಹೈಜಂಪ್ ಅಥ್ಲೀಟ್ ಸಹನಾ ಕುಮಾರಿ ಕೂಡಾ ಕಬಡ್ಡಿ ಆಡುವುದು ಖಚಿತವಾಗಿದೆ.

ಒಟ್ಟು 8 ತಂಡಗಳು

ಈ ಕಬಡ್ಡಿ ಲೀಗ್ ನಲ್ಲಿ ಒಟ್ಟು 8 ತಂಡಗಳು ಭಾಗಿಯಾಗಲಿವೆ. ಕನ್ನಡ ನಟಿಯರು ಮಾತ್ರ ಈ ಟೂರ್ನಿಯಲ್ಲಿ ಆಡಲಿದ್ದಾರೆ. ನಟರಾದ ಕುಮಾರ್ ಗೌರವ್ ಮತ್ತು ಜುಲ್ಫಿಕರ್ ಅಹ್ಮದ್ ಖಾನ್ ಈ ಟೂರ್ನಿಯನ್ನ ಅಯೋಜಿಸುತ್ತಿದ್ದಾರೆ. ಮೂಲಗಳ ಪ್ರಕಾರ ಈ ಟೂರ್ನಿ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ.

English summary
For the First Time, Kannada Heroines to play Kabbadi tournament in Sandalwood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada