»   » ಪ್ರಮುಖ ಕನ್ನಡದ ನಟರ ವಿರುದ್ದ ತಿರುಗಿಬಿದ್ದ ನಿರ್ಮಾಪಕರು

ಪ್ರಮುಖ ಕನ್ನಡದ ನಟರ ವಿರುದ್ದ ತಿರುಗಿಬಿದ್ದ ನಿರ್ಮಾಪಕರು

Posted By:
Subscribe to Filmibeat Kannada

ಇತ್ತೀಚೆಗೆ ಕನ್ನಡದ ಪ್ರಮುಖ ನಟರು ಕಿರುತೆರೆಯ ರಿಯಾಲಿಟಿ ಶೋನಲ್ಲಿ ಜನಪ್ರಿಯರಾಗುತ್ತಿರುವುದು ನಮ್ಮ ನಿರ್ಮಾಪಕರಿಗೆ ರುಚಿಸುತ್ತಿಲ್ಲವೇನೋ?

ಹಾಗಾಗಿ, ಕೆಲವು ದಿನಗಳ ಹಿಂದೆ ಸಭೆ ಸೇರಿದ್ದ ನಿರ್ಮಾಪಕರು ಪ್ರಮುಖ ನಟರ ಜೊತೆಗೆ ಕಿರುತೆರೆ ವಾಹಿನಿಗಳ ಮೇಲೂ ತಿರುಗಿ ಬಿದ್ದಿದ್ದಾರೆ. ಇವರು ತಮ್ಮ ಸಿಟ್ಟಿಗೆ ಕೊಡುತ್ತಿರುವ ಕಾರಣ ಏನಂದರೆ, ಕೆಲವು ಕನ್ನಡದ ನಟರು ಕಿರುತೆರೆಯ ಶೋನಲ್ಲಿ ಭಾಗವಹಿಸುತ್ತಿರುವುದರಿಂದ ಸಿನಿಮಾ ವೀಕೆಂಡ್ ಕಲೆಕ್ಶನಿಗೆ ಹೊಡೆತ ಬೀಳುತ್ತಿದೆ ಅನ್ನೋದು.

ನಿರ್ಮಾಪಕರು ಕೊಡುತ್ತಿರುವ ಮತ್ತೊಂದು ಕಾರಣವೆಂದರೆ, ಕನ್ನಡ ವಾಹಿನಿಗಳು ಪ್ರಮುಖ ನಟರ ಚಿತ್ರಗಳನ್ನು ಮಾತ್ರ ಭರ್ಜರಿ ರೈಟ್ಸಿಗೆ ಪಡೆದುಕೊಳ್ಳುತ್ತಿದ್ದಾರೆ. ಇತರ ಚಿತ್ರಗಳನ್ನು ಡೋಂಟ್ ಕೇರ್ ಮಾಡುತ್ತಿದ್ದಾರೆ ಅನ್ನೋದು. (ಕನ್ನಡ ಚಿತ್ರರಂಗ ಕಂಡ ಅಪರೂಪದ ಜೋಡಿಗಳು)

ಹಾಗಾಗಿ, ನಮ್ಮ ಕನ್ನಡದ ಪ್ರಮುಖ ನಟರು ಇಂತಹ ವಾಹಿನಿಗಳು ನಡೆಸಿಕೊಡುವ ಶೋಗಳಲ್ಲೂ ಭಾಗವಹಿಸಬಾರದು ಎನ್ನುವುದು ನಿರ್ಮಾಪಕರ ತಾಕೀತು. ನಿರ್ಮಾಪಕರ ಈ ತಾಕೀತಿಗೆ ನಮ್ಮ ನಟರು ಎಷ್ಟರ ಮಟ್ಟಿಗೆ ಸೊಪ್ಪು ಹಾಕುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಕಿರುತೆರೆಯ ಮೂಲಕ ಬೆಳಕಿಗೆ ಬಂದವರು ಕಿರುತೆರೆಯನ್ನು ಮರೆಯುವುದು ಸರಿಯೇ?

ಕಿರುತೆರೆಯ ಮೂಲಕ ಬಂದವರು

ಗೋಲ್ಡನ್ ಸ್ಟಾರ್ ಗಣೇಶ್, ಯಶ್, ರಾಧಿಕಾ ಪಂಡಿತ್, ಅಚ್ಯುತ್ ಕುಮಾರ್ ಮುಂತಾದ ಹಾಲಿ ಚಾಲ್ತಯಲ್ಲಿರುವ ನಟರು ಬೆಳಕಿಗೆ ಬಂದಿದ್ದು ಕಿರುತೆರೆಯ ಮೂಲಕ.

ಗಣೇಶ್ ಪತ್ನಿ ಹೇಳುವುದೇನು?

ನಿರ್ಮಾಪಕರು ಶಿಲ್ಪಾ ಗಣೇಶ್ ಅವರನ್ನು ಸಂಪರ್ಕಿಸಿದಾಗ, ನಮಸ್ಕಾರ... ನಮಸ್ಕಾರ.. ನಮಸ್ಕಾರ ಎನ್ನುತ್ತಲೇ ಕಿರುತೆರೆಯಿಂದಲೇ ಗಣೇಶ್ ಜನಪ್ರಿಯರಾಗಿದ್ದು. ಈಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳಬಾರದೆಂದರೆ ಹೇಗೆ. ಇತರ ಕೆಲವು ನಟರೆಲ್ಲಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರಲ್ಲಾ, ಅವರಿಗೂ ಈ ಮಾತನ್ನು ಮೊದಲು ಹೇಳಿ ಎಂದು ಶಿಲ್ಪಾ ಗಣೇಶ್ ನಿರ್ಮಾಪಕರಿಗೆ ಹೇಳಿದ್ದಾರಂತ ಸುದ್ದಿ.

ಬಿಗ್ ಬಾಸ್ ಸೀಸನ್ 2

'ಬಿಗ್ ಬಾಸ್ ಸೀಸನ್ 2' ಕಾರ್ಯಕ್ರಮದ ವೀಕೆಂಡ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವೀಕೆಂಡ್ ಶೋಗಳಿಕೆಗೆ ತೀವ್ರ ಪೆಟ್ಟು ಬೀಳುತ್ತಿದೆ ಎನ್ನುವುದು ನಿರ್ಮಾಪಕರ ವಾದ.

ವೀಕೆಂಡ್ ವಿತ್ ರಮೇಶ್

ರಮೇಶ್ ಅರವಿಂದ್ ನಡೆಸಿ ಕೊಡುತ್ತಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಜೀ ಕನ್ನಡದಲ್ಲಿ ಆರಂಭವಾಗಿದೆ. ಆರಂಭದ ಎರಡೂ ಎಪಿಸೋಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕಾರ್ಯಕ್ರಮ ಜನಮನ್ನಣೆಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸಿಸುತ್ತಿದೆ. ಈ ಕಾರ್ಯಕ್ರಮ ಕೂಡಾ ಶನಿವಾರ ಮತ್ತು ಭಾನುವಾರ ರಾತ್ರಿ ಪ್ರಸಾರವಾಗುತ್ತಿದೆ.

ಗಣೇಶ್ ಮತ್ತೆ ಕಿರುತೆರೆಗೆ

ಈ ಎರಡು ಶೋಗಳ ನಡುವೆ ಗೋಲ್ಡನ್ ಸ್ಟಾರ್ ಗಣೇಶ್ ಈಟಿವಿ ಕನ್ನಡದಲ್ಲಿ 'ಸೂಪರ್ ಮಿನಿಟ್' ಎನ್ನುವ ಶೋ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮ ಕೂಡಾ ಸದ್ಯದಲ್ಲೇ ಆರಂಭವಾಗಲಿದೆ.

English summary
Kannada leading actors in small screen, Producers unhappy with actors as well as Small screen.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada