For Quick Alerts
  ALLOW NOTIFICATIONS  
  For Daily Alerts

  ರಂಗಿತರಂಗ ನಂತರ ವಿದೇಶದಲ್ಲಿ ಆಟಗಾರನ ಆಟ ಶುರು

  By Suneetha
  |

  ಚಂದನವನದ ಕುಳ್ಳ ದ್ವಾರಕೀಶ್ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ 49ನೇ ಚಿತ್ರ 'ಆಟಗಾರ' ಕಳೆದ ವಾರ ತೆರೆ ಕಂಡಿದ್ದು, ದ್ವಾರಕೀಶ್ ಅವರು ನಿರೀಕ್ಷಿಸಿದಂತೆ ಚಿತ್ರ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಗಳಿಸುತ್ತಿದೆ.

  ಇದೀಗ 'ಆಟಗಾರ' ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಇಡೀ ಕರ್ನಾಟಕದಾದ್ಯಂತ ಮಾತ್ರವಲ್ಲದೆ ಭಾರತದಾದ್ಯಂತ ಉತ್ತಮ ರೆಸ್ಪಾನ್ಸ್ ಕೂಡ ಗಳಿಸುತ್ತಿದೆ. ಕೇವಲ ಭಾರತ ಮಾತ್ರವಲ್ಲದೇ ಸೆಪ್ಟೆಂಬರ್ 18ರಂದು ವಿದೇಶಗಳಲ್ಲೂ 'ಆಟಗಾರ' ತೆರೆ ಕಾಣುತ್ತಿದೆ.

  ಇನ್ನು ಚಿತ್ರ ಬಿಡುಗಡೆಯಾದ ಕೇವಲ ಒಂದೇ ವಾರದಲ್ಲಿ ದೇಶದ್ಯಾಂತ ಸುಮಾರು 100 ಪ್ರದರ್ಶನಗಳನ್ನು ಕಂಡಿದೆ. ಅಮೇರಿಕ ದೇಶದಲ್ಲಿ 20 ಪ್ರದರ್ಶನ, ಯುರೋಪ್ 16, 10 ಆಸ್ಟ್ರೇಲಿಯಾ ಹಾಗೂ ಕೆನಡಾದಲ್ಲಿ 6 ಪ್ರದರ್ಶನಗಳನ್ನು ಕಂಡಿದೆ. ಜೊತೆಗೆ ಸಿಂಗಾಪೂರ್, ನ್ಯೂಜಿಲೆಂಡ್ ಮತ್ತು ಜಪಾನ್ ದೇಶಗಳಲ್ಲಿ ಮುಂದಿನ ದಿನಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.['ಆಟಗಾರ'ನ ಆಟಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?]

  ಹೊಸಬರಾದ ಭಂಡಾರಿ ಸಹೋದರರ 'ರಂಗಿತರಂಗ' ಚಿತ್ರದ ನಂತರ ದ್ವಾರಕೀಶ್ ನಿರ್ಮಾಣದ 'ಆಟಗಾರ' ವಿದೇಶಗಳಲ್ಲಿ ಉತ್ತಮ ಯಶಸ್ಸು ಕಾಣುವ ಮೂಲಕ ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

  'ಆ ದಿನಗಳು' ಚಿತ್ರದ ನಂತರ ಮತ್ತೆ ಪ್ರೇಕ್ಷಕರಿಗೊಂದು ಭರ್ಜರಿ ಸಸ್ಪೆನ್ಸ್- ಥ್ರಿಲ್ಲರ್ ಕಥೆಯನ್ನಾಧರಿಸಿದ ಕಥೆಯ ಮೂಲಕ ಗಾಂಧಿನಗರಕ್ಕೆ ಕಾಲಿಟ್ಟ ನಿರ್ದೇಶಕ ಕೆ.ಎಮ್ ಚೈತನ್ಯ ಅವರು 'ಆಟಗಾರ'ನ ಮೂಲಕ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

  'ಆಟಗಾರ' ಬಿಡುಗಡೆಯಾದ ಕೇವಲ ಒಂದೇ ವಾರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುವ ಮೂಲಕ ಬರೋಬ್ಬರಿ 2 ಕೋಟಿ ಕಲೆಕ್ಷನ್ ಮಾಡಿದೆ. ಅಂದಹಾಗೆ ಈ ಮೊದಲು ಚಿರಂಜೀವಿ ಸರ್ಜಾ ಅವರು ನಟಿಸಿದ್ದ ಯಾವೊಂದು ಚಿತ್ರವು ಇಷ್ಟು ಕಲೆಕ್ಷನ್ ಮಾಡಿರಲಿಲ್ಲ ಅನ್ನೋದು ವಿಶೇಷ.[ಚಿತ್ರ ವಿಮರ್ಶೆ: 'ಆಟಗಾರ'ನ ಆಟ, ಓಟ ಜೋರಾಗಿದೆ ಗುರು]

  ಕನ್ನಡ ಚಿತ್ರರಂಗದ 10 ಖ್ಯಾತ ನಟ-ನಟಿಯರಾದ ಚಿರಂಜೀವಿ ಸರ್ಜಾ, ಮೇಘನಾ ರಾಜ್, ಪಾರುಲ್ ಯಾದವ್, ಅನಂತ್ ನಾಗ್, ಅನುಪ್ರಭಾಕರ್, ರವಿಶಂಕರ್, ಸಾಧುಕೋಕಿಲ, ಅಚ್ಯುತ್ ಕುಮಾರ್, ಆರೋಹಿತಾ ಗೌಡ, ಪಾವಾನಾ ಮುಂತಾದವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, 'ಆಟಗಾರ' ನ ವಿಶೇಷವಾಗಿತ್ತು.[ದ್ವೀಪದ ನಡುವೆ 'ಆಟಗಾರನ' ನೋಟ ಚೆನ್ನ, ಎಲ್ಲವೂ ಇಲ್ಲಿ ವಿಭಿನ್ನ ]

  ಜೊತೆಗೆ ಸಸ್ಪೆನ್ಸ್ ಆಗಿ ಪ್ರೇಕ್ಷಕರ ಮನದಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿ ಭಾರಿ ಕುತೂಹಲ ಕೆರಳಿಸಿ ನೋಡುಗರ ಮನಗೆದ್ದಿರುವ ಅಸಲಿ ಆಟ ಇದೀಗ ಎಲ್ಲರಿಂದ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿದೆ.

  English summary
  The overseas release of kannada movie 'Aatagara' is scheduled on September 18. The movie will have nearly 100 shows in the opening weekend in around ten countries. In the US it will have 20 shows, in European countries 16 shows and 10 shows in Australia and 6 shows in Canada. The movie will also release simultaneously in Singapore, New Zealand and Japan. 'Aatagara' features Kannada actor Chiranjeevi Sarja, Kannada actress Meghana Raj, Kannada actress Parul Yadav, Anu Prabhakar, Anant Nag in the lead role. The movie is directed by KM Chaitanya of 'Aa Dinagalu' fame.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X