»   » 'ಅಧ್ಯಕ್ಷ'ರಿಗೆ ಸೆನ್ಸಾರ್ ಆಗಿಲ್ಲ.. ಬರ್ತಾರೋ ಇಲ್ವೋ...

'ಅಧ್ಯಕ್ಷ'ರಿಗೆ ಸೆನ್ಸಾರ್ ಆಗಿಲ್ಲ.. ಬರ್ತಾರೋ ಇಲ್ವೋ...

By: ಜೀವನರಸಿಕ
Subscribe to Filmibeat Kannada

ಅಧ್ಯಕ್ಷ ಸಿನಿಮಾ ಸದ್ಯ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ. ಹಾಡುಗಳ ಮೂಲಕ ಹುಚ್ಚೆಬ್ಬಿಸಿರೋ ಶರಣ್ ಅಭಿನಯದ 'ಅಧ್ಯಕ್ಷ' ಆಗಸ್ಟ್ 15ಕ್ಕೆ ತೆರೆಗೆ ಬರೋಕೆ ಡೇಟ್ ಫಿಕ್ಸ್ ಮಾಡ್ಕೊಂಡಿದೆ. ಆದರೆ ಚಿತ್ರ ಮಾತ್ರ ಇನ್ನೂ ಸೆನ್ಸಾರ್ ಆಗಿಲ್ಲ. ಸೆನ್ಸಾರ್ ಮಂಡಳಿಯಲ್ಲಿ ಮಹಿಳಾ ಸದಸ್ಯರು ಇಲ್ಲದೇ ಇರೋದು ಇದಕ್ಕೆ ಕಾರಣ.

ಆದರೆ 'ವಿಕ್ಟರಿ' ಸಿನಿಮಾ ಮೂಲಕ ವಿಕ್ಟರಿ ಬರೆದಿದ್ದ ಶರಣ್-ನಿರ್ದೇಶಕ ನಂದಕಿಶೋರ್ ಜೋಡಿಯ ಮತ್ತೊಂದು ಸಿನಿಮಾದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ನಿರೀಕ್ಷೆಗಳಿವೆ. ಚಿತ್ರದ ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ. ಹಾಗೆ ನೋಡಿದ್ರೆ ಈ ವರ್ಷ ಯಾಕೋ ಕನ್ನಡ ಚಿತ್ರ ಪ್ರೇಮಿಗಳ ಅದೃಷ್ಟಾನೇ ಚೆನ್ನಾಗಿಲ್ಲ ಅನ್ನಿಸುತ್ತೆ.

Kannada movie Adyaksha lands in censor trouble

ಈ ಬಾರಿ ವಿಶೇಷ ದಿನಗಳಲ್ಲಿ, ಹಬ್ಬಗಳ ಸಮಯದಲ್ಲಿ ಸ್ಟಾರ್ ಸಿನಿಮಾಗಳು ತೆರೆಕಾಣ್ತಾ ಇಲ್ಲ. ವರಮಹಾಲಕ್ಷ್ಮಿ ಹಬ್ಬಕ್ಕೆ ಪ್ರತೀ ವರ್ಷ ಸ್ಟಾರ್ ಸಿನಿಮಾಗಳು ಸಾಲು ನಿಲ್ಲುತ್ತಿದ್ದವು. ಆದರೆ ಈ ವರ್ಷ ಮಾತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ ಯಾವ ಸ್ಟಾರ್ ಸಿನಿಮಾಗಳೂ ಇಲ್ಲ.

ಆಗಸ್ಟ್ 15ಕ್ಕೆ 'ಅಧ್ಯಕ್ಷ' ಬಾರದಿದ್ರೆ ಮತ್ಯಾವ ಸಿನಿಮಾಗಳೂ ಇಲ್ಲ. ಒಟ್ಟಾರೆ ಕರ್ನಾಟಕ ಪ್ರಾದೇಶಿಕ ಸೆನ್ಸಾರ್ ಮಂಡಳಿಯಲ್ಲಿ ಮಹಿಳಾ ಅಧಿಕಾರಿಗಳಿಲ್ಲದೆ ಕನ್ನಡ ಸಿನಿಮಾಗಳು ರಿಲೀಸ್ ಆಗೋಕೆ ಪರದಾಡ್ತಾ ಇರೋದು ಮಾತ್ರ ಬೇಸರದ ವಿಷಯ.

English summary
Sandalwood most expected movie Adyaksha lands in censor trouble. The movie is all set to release on 15th August without censor. The movie will see Sharan in the lead role again. He has paired up with his friend and Victory director Nandakishore.
Please Wait while comments are loading...