»   » ಅಟ್ಟಹಾಸ ಚಿತ್ರದ ಹೀರೋ ’ಕಿಶೋರ್’ ಸಂದರ್ಶನ

ಅಟ್ಟಹಾಸ ಚಿತ್ರದ ಹೀರೋ ’ಕಿಶೋರ್’ ಸಂದರ್ಶನ

Posted By:
Subscribe to Filmibeat Kannada
Attahasa hero Kishore exclusive interview
ಈ ಹಿಂದೆ 'ಹುಲಿ'ಯಾಗಿ ಘರ್ಜಿಸಿದ್ದ ಕಲಾವಿದ ಕಿಶೋರ್ ಗಜಹಂತಕ, ನರಹಂತಕ ವೀರಪ್ಪನ್ ಪಾತ್ರದಲ್ಲಿ ಆರ್ಭಟಿಸಲಿದ್ದಾರೆ. ಈ ವರ್ಷದ ಕನ್ನಡದ ಬಹು ನಿರೀಕ್ಷಿತ ಎಎಂಆರ್ ರಮೇಶ್ ನಿರ್ದೇಶನದ 'ಅಟ್ಟಹಾಸ' ಚಿತ್ರ ಈ ವಾರ ಅಂದರೆ ಫೆ 15ಕ್ಕೆ ತೆರೆ ಕಾಣಲಿದೆ.

ಮೂಲತ: ಉಪನ್ಯಾಸಕ ಮತ್ತು ಫ್ಯಾಷನ್ ಡಿಸೈನರ್ ಆಗಿರುವ ಕಿಶೋರ್, ಮುರಳಿ ಮತ್ತು ರಮ್ಯಾ ಅಭಿನಯದ ಕಂಠಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡ ಚಿತ್ರಗಳ ಜೊತೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಬ್ಯೂಸಿಯಾಗಿರುವ ಕಿಶೋರ್ ಇದುವರೆಗೆ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಮೂರು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಅಟ್ಟಹಾಸ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರ ಬಿಡುಗಡೆಗೆ ಮುನ್ನ ನಮ್ಮ ಅಂತರ್ಜಾಲಕ್ಕೆ ಕಿಶೋರ್ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಸಂದರ್ಶನ ನಡೆಸಿದವರು ಬಾಲರಾಜ್ ತಂತ್ರಿ.

ಪ್ರ: ಅಟ್ಟಹಾಸ ಚಿತ್ರದ ಆಫರ್ ಬಂದಾಗ ನಿಮಗೆ ಏನನಿಸಿತು?
ಕಿಶೋರ್ : ಬಹಳ ಹಿಂದೆಯೇ ಈ ಚಿತ್ರ ಸೆಟ್ಟೇರಿತ್ತು. ಒಂದು ಒಳ್ಳೆ ಪಾತ್ರಕ್ಕಾಗಿ ನಾನು ಕಾಯುತ್ತಿದ್ದೆ. ಹಿಂದೆ ಮುಂದೆ ನೋಡದೇ ನಿರ್ದೇಶಕ ರಮೇಶ್ ನೀಡಿದ ಆಫರಿಗೆ ಎಸ್ ಅಂದೆ.

ಪ್ರ: ಚಿತ್ರದಲ್ಲಿ ನಿಮ್ಮ ವೀರಪ್ಪನ್ ಪಾತ್ರದ ಬಗ್ಗೆ?
ಕಿಶೋರ್ : ಇದೊಂದು ಬಹಳ ಟಫ್ ಮತ್ತು ಚಾಲೆಂಜಿಗ್ ರೋಲ್. ಸತ್ಯ ಘಟನೆಗಳನ್ನು ಆದರಿಸಿ, ಘಟನೆ ನಡೆದ ಪ್ರದೇಶದಲ್ಲೇ ಶೂಟಿಂಗ್ ಮಾಡಿದ್ದೇವೆ. ವೀರಪ್ಪನ್ ಬಾಡಿ ಲಾಂಗ್ವೇಜ್, ಮಾತನಾಡುವ ಶೈಲಿಯನ್ನು ಸತತವಾಗಿ ಅಭ್ಯಾಸ ನಡೆಸಿ ಪಾತ್ರಕ್ಕೆ ನ್ಯಾಯ ಕೊಡಲು ಪ್ರಯತ್ನಿಸಿದ್ದೇನೆ.

ಪ್ರ: ಡಾ.ರಾಜ್ ಪಾತ್ರದಲ್ಲಿ ನಟಿಸಿರುವ ಸುರೇಶ್ ಒಬೆರಾಯ್ ಬಗ್ಗೆ?
ಕಿಶೋರ್ : ಹಿಂದೆ ಅವರ ಚಿತ್ರಗಳನ್ನು ನೋಡಿ ಬೆಳೆದವನು ನಾನು. ಚಿತ್ರದಲ್ಲಿ ಅವರ ನಟನೆಯ ಬಗ್ಗೆ ಹೇಳುವುದಾದರೆ ಅಣ್ಣಾವ್ರ ಘನತೆ, ಗೌರವಕ್ಕೆ ತಕ್ಕುದಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಅದ್ಭುತ ಕಲಾವಿದರು ಅವರು.

ಪ್ರ: ಅರ್ಜುನ್ ಸರ್ಜಾ ಜೊತೆ ನಿಮ್ಮ ವರ್ಕ್ ಎಕ್ಸ್ ಪಿಯೆರೆನ್ಸ್
ಕಿಶೋರ್ : ಪೋಲೀಸ್ ಅಧಿಕಾರಿ ವಿಜಯ್ ಕುಮಾರ್ ಪಾತ್ರದಲ್ಲಿ ಅರ್ಜುನ್ ನಟಿಸಿದ್ದಾರೆ. He is a down to earth artist.

ಪ್ರ: ಡೈರೆಕ್ಟರ್ ರಮೇಶ್ ಕಮಿಟ್ ಮೆಂಟ್ ಬಗ್ಗೆ ?
ಕಿಶೋರ್ : ಒಂದೊಂದು ಪಾತ್ರಕ್ಕೂ, ಸನ್ನಿವೇಶಕ್ಕೂ ರಮೇಶ್ ತಮ್ಮನ್ನು ತೊಡಗಿಸಿ ಕೊಳ್ಳುತ್ತಿದ್ದ ರೀತಿ ನೋಡಿ ಅಚ್ಚರಿಯಾಗುತ್ತಿತ್ತು. ಇಂಥಹ ಕಮಿಟೆಡ್ ಡೈರೆಕ್ಟರ್ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ.

ಪ್ರ: ನೈಜ ಕಥಾದಾರಿತ ಚಿತ್ರಗಳು ಹೆಚ್ಚಾಗಿ ಬರ್ತಾ ಇದೆ, ಈ ಟ್ರೆಂಡ್ ಬಗ್ಗೆ?
ಕಿಶೋರ್: ಇದೊಂದು ಒಳ್ಳೆ ಬೆಳವಣಿಗೆ. ಆದರೆ ಇಂಥಹ ಚಿತ್ರಗಳು ಸಾಮಾಜಿಕ ಕಳಕಳಿಗೆ ಧಕ್ಕೆ ತರಬಾರದು ಎನ್ನುವುದು ನನ್ನ ಅಭಿಪ್ರಾಯ.

ಪ್ರ: ಅಟ್ಟಹಾಸ ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಏನು ನಿರೀಕ್ಷೆ ಮಾಡ್ತೀರಾ?
ಕಿಶೋರ್: We have done our best. ಒಳ್ಳೆ ಚಿತ್ರವನ್ನು ನೀಡಿದ್ದೇವೆ. ನಮ್ಮ ಶ್ರಮಕ್ಕೆ ಮಾರ್ಕ್ಸ್ ಕೊಡಬೇಕಾದವರು ಪ್ರೇಕ್ಷಕರು. ಚಿತ್ರ ನೋಡಿ, ನಮ್ಮನ್ನು ಪ್ರೋತ್ಸಾಹಿಸಿ.

ಅಟ್ಟಹಾಸ ಚಿತ್ರದ ಗ್ಯಾಲರಿ

English summary
Much awaited Attahasa movie hero Kishore exclusive interview to Oneindia Kannada. This movie set to release in three languages i.e. Kannada, Tamil and Telugu and releasing on Feb 15th.
Please Wait while comments are loading...