»   » ಕನ್ನಡ ಸಿನೆಮಾ ವೀಕ್ಷಕರಲ್ಲಿ ಸದಭಿರುಚಿಯ ಕೊರತೆ ಇದೆಯಾ?

ಕನ್ನಡ ಸಿನೆಮಾ ವೀಕ್ಷಕರಲ್ಲಿ ಸದಭಿರುಚಿಯ ಕೊರತೆ ಇದೆಯಾ?

By: ಸುಭಾಶ್
Subscribe to Filmibeat Kannada

ಸೂಪರ್ ಹಿಟ್ ಆಗೇಆಗುತ್ತೆ ಅಂತ ಅಂದುಕೊಂಡಿರುವ ಚಿತ್ರ ಮಕಾಡೆ ಮಲಗಿರತ್ತೆ, ಈ ಡಬ್ಬಾ ಚಿತ್ರ ಎರಡು ವಾರ ಓಡಿದರೆ ಹೆಚ್ಚು ಅಂದುಕೊಂಡಿರುವ ಸಿನೆಮಾ ಲೆಕ್ಕಾಚಾರಗಳನ್ನೆಲ್ಲ ಬುಡಮೇಲು ಮಾಡಿ ಸೂಪರ್ ಹಿಟ್ ಆಗಿರತ್ತೆ. ಚಿತ್ರ ಸೋಲುವುದಕ್ಕೆ ಕಾರಣ ಯಾರು? ಪ್ರೇಕ್ಷಕರ ಅಭಿರುಚಿಯಾ, ಬಿಗ್ ಹೀರೋಗಳ ಅಥವಾ ನಿರ್ಮಾಪಕರ ಧೋರಣೆಯಾ? ಈ ಕುರಿತು ಓದುಗರೊಬ್ಬರು ಪತ್ರ ಬರೆದಿದ್ದಾರೆ, ಓದಿ, ಒಪ್ಪಿದರೂ ಒಪ್ಪದಿದ್ದರೂ ಕಾಮೆಂಟ್ ಮಾಡಿ.

***

ಕನ್ನಡಿಗರಲ್ಲಿ ಅದರಲ್ಲೂ ಸಿನೆಮಾ ನೋಡುಗರಲ್ಲಿ ಸದಭಿರುಚಿಯ ಕೊರತೆ ಇದ್ದಂತೆ ಕಾಣುತ್ತದೆ. ಸದಭಿರುಚಿ ಇಲ್ಲವೇ ಇಲ್ಲ ಅಂತಲೂ ಹೇಳಬಹುದು. ಸಿನೆಮಾ ನಟರ ಧೋರಣೆಯೇ ಸದಭಿರುಚಿ ಕಡಿಮೆಯಾಗಲು ಕಾರಣವೆ? ಇಲ್ಲಿನ ಸಿನೆಮಾಗಳಲ್ಲಿ ನಾಯಕನಾಗಿ ನಟಿಸುವವರ ಕೆಲವರಲ್ಲಿ ಒಂದು ಥರಾ ಧೋರಣೆ ಇದೆ. ಅವೇನೆಂದರೆ....

Kannada movie audience lack passion and good taste

* ಕನ್ನಡ ಸಿನೆಮಾ ನೋಡುಗರು ನಾವು ಉಣಬಡಿಸಿದ್ದನ್ನು ತಿನ್ನುತ್ತಾರೆ... ಅದು ಬೂಸಾ ಆಗಿದ್ದರೂ ಅಷ್ಟೇ...
* ಬೇರೆ ನಾಯಕ ನಟರು ಬೆಳೆಯಲೇಬಾರದು.
* ನಾವು ನೋಡಲು ಚೆನ್ನಾಗಿಲ್ಲದಿದ್ದರೇನಂತೆ.... ನಮ್ಮ ಫೈಟ್ ಗಳು ಚೆನ್ನಾಗಿಲ್ಲವೇ.... ಬೀದಿ ಕುಣಿತ ಚೆನ್ನಾಗಿಲ್ಲವೇ...
* ನಾವು ಮಾಡಿದ್ದನ್ನಷ್ಟೇ ನೋಡಬೇಕು.... ಸಿನೆಮಾ ನಟನೆ ಎಂದರೆ ನಾವು ಮಾಡಿದ್ದೇ...

ಹೀಗಾಗಿ ಒಳ್ಳೆಯ ಸದಭಿರುಚಿಯ ಸಿನೆಮಾಗಳೆ ಇಲ್ಲದಂತಾಗಿದೆ. ಸಾಲದೆಂಬಂತೆ ನಮ್ಮ ಜನ ಕೂಡ 'ಸಿನೆಮಾ ನೋಡಲೇಬೇಕು... ಇಲ್ಲದಿದ್ದರೆ ತಿಂದ ಅನ್ನ ಜೀರ್ಣಿಸುವುದಿಲ್ಲ, ನಿದ್ದೆ ಬರುವುದಿಲ್ಲ...' ಎನ್ನುವ ಮಟ್ಟಿಗೆ ಸಿನೆಮಾ ದಾಸರಾಗಿದ್ದಾರೆ...

ಇದರಿಂದ ಎಚ್ಚತ್ತುಕೊಳ್ಳುವುದು ಯಾವಾಗ? ಇಂತಹ ಸಿನೆಮಾಗಳನ್ನು ನೋಡಲೇಬಾರದು ಮತ್ತು ಇವಕ್ಕೆ ಪ್ರೋತ್ಸಾಹ ಕೊಡಬಾರದು ಎಂಬ ಧೃಢ ನಿಶ್ಚಯ ಮಾಡಿದಾಗಲೇ... ಈ ಧೋರಣೆ ಇಲ್ಲದೇ ಕನ್ನಡ ಭಾಷೆ, ಸಾಹಿತ್ಯ, ಸದಭಿರುಚಿ ಪ್ರಜ್ಞೆ ಬರಲು ಸಾಧ್ಯವೇ ಇಲ್ಲ...

ಈ ಬಗ್ಗೆ ಕನ್ನಡ ಸಾಹಿ(ಯಿ)ತಿಗಳು ಮತ್ತು ಕನ್ನಡ ಪರ ಹೋರಾಟಗಾರರು ಏನು ಹೇಳುತ್ತಾರೆ? ಕನ್ನಡ ಸಿನೆಮಾ ವೀಕ್ಷಕರಲ್ಲಿ ನಿಜವಾಗಿಯೂ ಸದಭಿರುಚಿಯ ಕೊರತೆ ಇದೆಯಾ? ಕನ್ನಡ ಸಿನಿಪ್ರಿಯರು ಏನು ಹೇಳುತ್ತಾರೆ?

English summary
Letter to the editor : Subhash, a Kannada movie buff, says audience in Karnataka lack passion and good taste. Partially attitude of film actors too has contributed to this problem. He thinks, we Kannada movie lovers out-rightly reject bad movies. What says you?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada