»   » 'ಭಲೇ ಜೋಡಿ'ಯ ಜಬರ್ದಸ್ತ್ ಆಟ ನೋಡಲು ನೀವು ರೆಡಿಯಾಗಿ

'ಭಲೇ ಜೋಡಿ'ಯ ಜಬರ್ದಸ್ತ್ ಆಟ ನೋಡಲು ನೀವು ರೆಡಿಯಾಗಿ

Posted By:
Subscribe to Filmibeat Kannada

'ಬೆತ್ತನಗೆರೆ' ಸಿನಿಮಾದಲ್ಲಿ ಲಾಂಗು-ಮಚ್ಚು ಹಿಡಿದು ಆರ್ಭಟಿಸಿದ್ದ ಚಾಕಲೇಟ್ ಹುಡುಗ ಸುಮಂತ್ ಶೈಲೇಂದ್ರ ಈಗ ಹಳೇ ಫಾರ್ಮ್ ಗೆ ಮರಳಿದ್ದಾರೆ. ರೌಡಿಸಂ ಸಿನಿಮಾಗಳಿಂದ ಕೊಂಚ ಪಕ್ಕಕ್ಕೆ ಸರಿದು ಇದೀಗ ಲವ್ವರ್ ಬಾಯ್ ಆಗಿ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ.

ಅಂದ್ಹಾಗೆ, ಸುಮಂತ್ ಶೈಲೇಂದ್ರ ರೋಸ್ ಹಿಡಿದು ಡ್ಯುಯೆಟ್ ಹಾಡಿರುವ ಸಿನಿಮಾ 'ಭಲೇ ಜೋಡಿ'. ಈ ಶೀರ್ಷಿಕೆ ಕೇಳಿದ ಕೂಡಲೆ ನಿಮಗೆ 1970ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ 'ಭಲೇ ಜೋಡಿ' ಸಿನಿಮಾ ನೆನಪಿಗೆ ಬರಬಹುದು. ಆದ್ರೆ, ಈ 'ಭಲೇ ಜೋಡಿ'ಗೂ ಆ 'ಭಲೇ ಜೋಡಿ'ಗೂ ಯಾವುದೇ ಸಂಬಂಧ ಇಲ್ಲ.[ಸೆನ್ಸಾರ್ ಮಂಡಳಿ ವಿರುದ್ಧ ನಿರ್ಮಾಪಕ ಶೈಲೇಂದ್ರ ಬಾಬು ಗರಂ]

Kannada Movie 'Bhale Jodi' to release on February 19th

ತೆಲುಗಿನ ಸೂಪರ್ ಹಿಟ್ 'ಅಲಾ ಮೊದಲೈಯಿಂದಿ' ಚಿತ್ರದ ರೀಮೇಕ್ ಈ ಹೊಚ್ಚ ಹೊಸ 'ಭಲೇ ಜೋಡಿ' ಕಥೆ. ಸುಮಂತ್ ಶೈಲೇಂದ್ರ ಜೊತೆ ಶಾನ್ವಿ ಶ್ರೀವಾಸ್ತವ ಜೋಡಿಯಾಗಿ ನಟಿಸಿರುವ ಚಿತ್ರ ಇದು.

ಇದೇ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಮತ್ತು ಹರಿಪ್ರಿಯಾ ಕೂಡ ನಟಿಸಿದ್ದಾರೆ. 'ಸೂಪರ್ ರಂಗ' ಸಿನಿಮಾದ ಬಳಿಕ ಸಾಧು ಕೋಕಿಲ ಈ ಚಿತ್ರಕ್ಕೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಮಗನ ಸಿನಿಮಾಗೆ ಅಪ್ಪ ಶೈಲೇಂದ್ರ ಬಾಬು ಬಂಡವಾಳ ಹಾಕಿದ್ದಾರೆ.

ಸೆನ್ಸಾರ್ ಅಂಗಳದಿಂದ ಪಾಸ್ ಆಗಿರುವ 'ಭಲೇ ಜೋಡಿ' ಫೆಬ್ರವರಿ 19 ರಂದು ನಿಮ್ಮ ಮುಂದೆ ಬರ್ತಿದ್ದಾರೆ. 'ಭಲೇ ಜೋಡಿ'ಯ ಆಟ ನೋಡಲು ನೀವು ರೆಡಿಯಾಗಿ.

English summary
Sumanth Shailendra and Shanvi Srivastava starrer Kannada Movie 'Bhale Jodi' is all set to release on February 19th. The movie is directed by Sadhu Kokila.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada