»   » ಸೆಟ್ಟೇರುವ ಮುನ್ನವೇ ವಿವಾದ ಅಳಿಸಿಹಾಕಿದ 'ಭೂಮಿಪುತ್ರ'!

ಸೆಟ್ಟೇರುವ ಮುನ್ನವೇ ವಿವಾದ ಅಳಿಸಿಹಾಕಿದ 'ಭೂಮಿಪುತ್ರ'!

Posted By:
Subscribe to Filmibeat Kannada

ಕನ್ನಡ ಚಿತ್ರಗಳಿಗೆ ಈ ಟೈಟಲ್ ವಿವಾದ ಎಂಬುದು ಸಾಮಾನ್ಯವಾಗಿಬಿಟ್ಟಿದೆ. ಒಬ್ಬರು ಟೈಟಲ್ ರಿಜಿಸ್ಟರ್ ಮಾಡಿದ್ರೂ, ಅದೇ ಹೆಸರಿನಲ್ಲಿ ಮತ್ತೊಬ್ಬರು ಸಿನಿಮಾ ಅನೌನ್ಸ್ ಮಾಡುತ್ತಾರೆ. ಹೀಗಿರುವಾಗ ಎಸ್.ನಾರಾಯಣ್ ನಿರ್ದೇಶನ ಮಾಡಲಿರುವ 'ಭೂಮಿಪುತ್ರ' ಚಿತ್ರದ್ದು ಇದೇ ಕಥೆಯಾಗಿತ್ತು.

ಇತ್ತೀಚೆಗಷ್ಟೇ ಎ.ಎಂ.ಆರ್ ರಮೇಶ್ ಮತ್ತು ನಿರ್ಮಾಪಕ ತರುಣ್ ಶಿವಪ್ಪ ನಡುವೆ 'ಲೀಡರ್' ಟೈಟಲ್ ಗಾಗಿ ದೊಡ್ಡ ಹೈ ಡ್ರಾಮಾನೇ ನಡೆದಿತ್ತು. ಇದು ಇನ್ನು ತಣ್ಣಗಾಗಲಿಲ್ಲ. ಅಷ್ಟರಲ್ಲಾಗಲೇ 'ಭೂಮಿಪುತ್ರ' ಚಿತ್ರಕ್ಕೂ ಟೈಟಲ್ ಸಮಸ್ಯೆ ಎದುರಾಗಿತ್ತು. ಆದ್ರೆ, ಸಿನಿಮಾ ಸೆಟ್ಟೇರುವ ಮುನ್ನವೇ ವಿವಾದವಾಗದೇ ಬಗೆಹರಿದಿದೆ.[ಬೆಳ್ಳಿತೆರೆಯಲ್ಲಿ ಮೂಡಲಿದೆ ಜೆಡಿಎಸ್ 'ದಳಪತಿ'ಯ T20 ಆಡಳಿತ]

ಅಷ್ಟಕ್ಕೂ, 'ಭೂಮಿಪುತ್ರ' ಟೈಟಲ್ ಯಾರ ಬಳಿ ಇತ್ತು. ಅವರಿಂದ ಹೇಗೆ ತಗೊಂಡ್ರು ಅಂತ ಮುಂದೆ ಓದಿ....

ಈ ಟೈಟಲ್ ಯಾರ ಬಳಿ ಇತ್ತು?

ಎಸ್.ನಾರಾಯಣ್ 'ಭೂಮಿಪುತ್ರ' ಟೈಟಲ್ ಘೋಷಣೆ ಮಾಡುವುದಕ್ಕೂ ಮುಂಚೆ, ಸ್ಮಿತಾ ಎಂಟರ್‌ಪ್ರೈಸಸ್ ನ ದೊಡ್ಮನೆ ವೆಂಕಟೇಶ್ ಅವರ ಬಳಿ ಈ ಟೈಟಲ್ ಇತ್ತು. ಎರಡು ವರ್ಷಗಳ ಹಿಂದೆ ವೆಂಕಟೇಶ್ ಅವರು ಆ ಹೆಸರನ್ನು ಫಿಲ್ಮ್ ಛೇಂಬರ್ ನಲ್ಲಿ ನೋಂದಾಯಿಸಿದ್ದರು.

ಎಸ್.ನಾರಾಯಣ್ ಮನವಿಗೆ ಟೈಟಲ್ ಬಿಟ್ಟುಕೊಟ್ಟರಂತೆ!

ಕುಮಾರಸ್ವಾಮಿ ಅವರ ಕುರಿತು ಎಸ್.ನಾರಾಯಣ್ `ಭೂಮಿಪುತ್ರ' ಎಂಬ ಚಿತ್ರ ಮಾಡುತ್ತಿರುವುದಾಗಿ ಘೋಷಣೆ ಮಾಡಿದ ನಂತರ ಈ ಟೈಟಲ್ ವಿಚಾರ ಎಸ್.ನಾರಾಯಣ್ ಅವರಿಗೆ ಗೊತ್ತಾಯಿತು. ನಂತರ ಟೈಟಲ್ ಬಿಟ್ಟುಕೊಡಿ ಎಂದು ವೆಂಕಟೇಶ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. ಮನವಿಗೆ ಬೆಲೆ ಕೊಟ್ಟ ದೊಡ್ಮನೆ ವೆಂಕಟೇಶ್ ಅವರು ಈ ಟೈಟಲ್ ನ್ನ ಚೆನ್ನಾಂಬಿಕಾ ಫಿಲಂಸ್‍ ಗೆ ವರ್ಗಾಯಿಸಿ ಕೊಟ್ಟಿದ್ದಾರೆ.['ಭೂಮಿಪುತ್ರ' ಸಿನಿಮಾ ಹಿಂದಿದ್ಯಾ ಎಚ್.ಡಿ.ಕೆ ಚುನಾವಣಾ ರಣತಂತ್ರ.?]

ಸೆಟ್ಟೇರುವ ಮುನ್ನವೇ ಬಗೆಹರಿದ ಟೈಟಲ್ ಸಮಸ್ಯೆ!

ಅಲ್ಲಿಗೆ ಸಿನಿಮಾ ಸೆಟ್ಟೇರುವ ಮುನ್ನವೇ 'ಭೂಮಿಪುತ್ರ' ಟೈಟಲ್ ವೊಂದು ವಿವಾದ ಪಟ್ಟಿಯಲ್ಲಿ ಸೇರುವುದಕ್ಕಿಂತ ಮುಂಚೆಯೇ ಎಲ್ಲವೂ ಬಗೆಹರಿದಂತಾಗಿದೆ. ಇನ್ನು ಚಿತ್ರ ಶುರುವಾಗುವುದಷ್ಟೇ ಬಾಕಿಯಷ್ಟೇ.

ಇಂದು ಚಿತ್ರಕ್ಕೆ ಚಾಲನೆ!

ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದು (ಮೇ 8) ಸಂಜೆ 6 ಗಂಟೆಗೆ ಚಿತ್ರದ ಮುಹೂರ್ತ ನಡೆಯಲಿದೆ. ಮಾಜಿ ಪ್ರಧಾನಿ ದೇವೇಗೌಡರು ಚಿತ್ರಕ್ಕೆ ಚಾಲನೆ ನೀಡಲಿದ್ದು, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಲಿದ್ದಾರೆ. ಪ್ರಭುಕುಮಾರ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶನ ಮಾಡುತ್ತಿದ್ದಾರೆ.['ಭೂಮಿಪುತ್ರ' ಚಿತ್ರದ ಫಸ್ಟ್ ಲುಕ್ ರಿಲೀಸ್: ಮೇ 8ಕ್ಕೆ ಚಾಲನೆ]

ಹೆಚ್.ಡಿ.ಕೆ ಪಾತ್ರದಲ್ಲಿ ಅರ್ಜುನ್ ಸರ್ಜಾ!

'ಭೂಮಿಪುತ್ರ' ಚಿತ್ರದಲ್ಲಿ ನಟ ಅರ್ಜುನ್ ಸರ್ಜಾ ಹೆಚ್.ಡಿ.ಕುಮಾರಸ್ವಾಮಿ ಅವರ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತಾವಧಿಯ ಬಗ್ಗೆ ಭೂಮಿಪುತ್ರ ಸಿನಿಮಾ ತಯಾರಾಗುತ್ತಿದೆ.

English summary
Kannada Movie Boomiputra Title Controversy Ends. Smith Enterprises Dodmane Venkatesh Gives Bhoomiputra Title to Channambika Films

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada