»   » ಸತತ ಒಂದು ವರ್ಷ ಓಡಿದ ಕನ್ನಡದ 13 ಚಿತ್ರಗಳು

ಸತತ ಒಂದು ವರ್ಷ ಓಡಿದ ಕನ್ನಡದ 13 ಚಿತ್ರಗಳು

Posted By:
Subscribe to Filmibeat Kannada

ಯಾವುದೇ ಭಾಷೆಯ ಚಿತ್ರವೊಂದು ಸತತ ಒಂದು ವರ್ಷ ಮತ್ತು ಅದಕ್ಕಿಂತಲೂ ಹೆಚ್ಚು ದಿನ ಪ್ರೇಕ್ಷಕನನ್ನು ತನ್ನತ್ತ ಸೆಳೆಯುತ್ತದೆ ಎಂದರೆ ಚಿತ್ರದ ಕಥೆ, ನಿರೂಪಣೆ ಇನ್ನೆಷ್ಟು ಬಿಗಿ ಇರಬೇಡ.

ಹಳೆಯ ಚಿತ್ರಗಳಾಗಲಿ ಅಥವಾ ಹೊಸ ಟ್ರೆಂಡಿನ ಚಿತ್ರಗಳಾಗಲಿ ಚಿತ್ರದ ಕಥೆ ಮತ್ತು ನಿರೂಪಣೆಯಲ್ಲಿ ತೂಕವಿದ್ದರೆ ವರ್ಷಕ್ಕೂ ಹೆಚ್ಚು ದಿನ ಪ್ರದರ್ಶನ ಕಂಡರೆ ಆಶ್ಚರ್ಯ ಪಡಬೇಕಾಗಿಲ್ಲ. ಇಲ್ಲವಾದಲ್ಲಿ ಮಸಾಲ ಚಿತ್ರಗಳಂತೆ ಕಮರ್ಷಿಯಲ್ ಹಿಟ್ ಪಟ್ಟಿಗೆ ಚಿತ್ರ ಸೇರಿ 100 ಅಥವಾ 175 ದಿನದೊಳಗೆ ಚಿತ್ರಮಂದಿರದಿಂದ ಕಾಲ್ಕೀಳುತ್ತವೆ.

ಕನ್ನಡ ಭಾಷೆಯಂತೆ ಹಿಂದಿ ಚಿತ್ರಗಳೂ ಒಂದು ವರ್ಷಕ್ಕೂ ಮೇಲೆ ಪ್ರದರ್ಶನ ಕಂಡ ಉದಾಹರಣೆ ಬಹಳಷ್ಟಿವೆ. ಶಾರೂಖ್ ಅಭಿನಯದ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೇ 1995ರಲ್ಲಿ ಬಿಡುಗಡೆಗೊಂಡು ಇನ್ನೂ ಪ್ರದರ್ಶನ ಗೊಳ್ಳುತ್ತಿದೆ.

ಭಾರತೀಯ ಸಿನಿಮಾದ ಲೆಜೆಂಡ್ ಚಿತ್ರಗಳಲ್ಲೊಂದಾದ ಶೋಲೆ ಚಿತ್ರ ಸತತ ಐದು ವರ್ಷ ಪ್ರದರ್ಶನ ಕಂಡಿತ್ತು. 1960ರಲ್ಲಿ ಬಿಡುಗಡೆಯಾಗಿದ್ದ ಪೃಥ್ವಿರಾಜ್ ಕಪೂರ್, ಮಧುಬಾಲ ತಾರಾಗಣದ ಮೊಗಲ್ ಇ ಆಜಾಂ ಆ ಕಾಲದಲ್ಲೇ ಸತತ ಮೂರು ವರ್ಷ ಪ್ರದರ್ಶನ ಕಂಡಿತ್ತು.

ನಮಗಿರುವ ಸಣ್ಣ ಮಾರುಕಟ್ಟೆಯಲ್ಲಿ ಸುಮಾರು 13 ಕನ್ನಡ ಚಿತ್ರಗಳು ಒಂದು ವರ್ಷ ಮತ್ತು ಅದಕ್ಕಿಂತಲೂ ಹೆಚ್ಚು ದಿನ ಪ್ರದರ್ಶನ ಕಂಡಿದೆ. ಬಂಗಾರದ ಮನುಷ್ಯ ಬೆಂಗಳೂರಿನಲ್ಲಿ ಎರಡು ವರ್ಷ ಮತ್ತು ರಾಜ್ಯದ ಇತರ ಐದು ನಗರಗಳಲ್ಲಿ ಸತತ ಒಂದು ವರ್ಷ ಪ್ರದರ್ಶನ ಕಂಡಿತ್ತು.

ಕನ್ನಡ ಚಿತ್ರರಂಗಕ್ಕೆ ಯಶಸ್ಸಿನ ಗರಿ ತಂದುಕೊಟ್ಟ 13 ಚಿತ್ರಗಳಾವುವು ? ಫೋಟೋ ಸ್ಲೈಡ್ ಕ್ಲಿಕ್ ಮಾಡಿ ತಿಳಿದುಕೊಳ್ಳಿ

ವಿ.ಸೂ: ಅಂತರ್ಜಾಲ, ಮಾಧ್ಯಮ ಮತ್ತು ಪತ್ರಿಕೆಗಳಿಂದ ಬಹಳಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಈ ಲೇಖನ ಬರೆಯಲಾಗಿದೆ. ಆದಾಗ್ಯೂ, ಕಣ್ತಪ್ಪಿನಿಂದ ಯಾವುದಾದರೂ ಚಿತ್ರದ ಹೆಸರು ಪಟ್ಟಿಯಿಂದ ಬಿಟ್ಟು ಹೋಗಿದ್ದಲ್ಲಿ ಕಾಮೆಂಟ್ ಸೆಕ್ಷನಿನಲ್ಲಿ ನಿಮ್ಮ ಅಭಿಪ್ರಾಯದ ಮೂಲಕ ತಿಳಿಸಲು ಕೋರುತ್ತಿದ್ದೇವೆ.

ಚಿತ್ರ: ಬಂಗಾರದ ಮನುಷ್ಯ

ಬಿಡುಗಡೆಯಾದ ವರ್ಷ: 1972
ನಿರ್ದೇಶಕ: ಸಿದ್ದಲಿಂಗಯ್ಯ
ತಾರಾಗಣ: ಡಾ.ರಾಜಕುಮಾರ್, ಭಾರತಿ, ಬಾಲಕೃಷ್ಣ, ವಜ್ರಮುನಿ, ಶ್ರೀನಾಥ್
ನಿರ್ಮಾಪಕ: ಗೋಪಾಲ್ ಲಕ್ಷ್ಮಣ್
ಸಂಗೀತ ನಿರ್ದೇಶಕ: ಜಿ ಕೆ ವೆಂಕಟೇಶ್
ಛಾಯಾಗ್ರಾಹಣ : ಡಿ ವಿ ರಾಜಾರಾಂ

ಚಿತ್ರ: ಅಂತ

ಬಿಡುಗಡೆಯಾದ ವರ್ಷ: 1981
ನಿರ್ದೇಶಕ: ಎಸ್ ವಿ ರಾಜೇಂದ್ರ ಸಿಂಗ್ ಬಾಬು
ತಾರಾಗಣ: ಅಂಬರೀಶ್, ಲಕ್ಷ್ಮಿ, ಜಯಮಾಲಾ, ಪಂಡರೀಬಾಯಿ, ಸುಂದರಕೃಷ್ಣ ಅರಸ್, ಪ್ರಭಾಕರ್, ವಜ್ರಮುನಿ, ಮುಸುರಿ ಕೃಷ್ಣಮೂರ್ತಿ
ನಿರ್ಮಾಪಕ: ಕೆ ಸಿ ಎನ್ ಚಂದ್ರಶೇಕರ್, ಎಚ್ ಎನ್ ಮಾರುತಿ, ವೇಣುಗೋಪಾಲ್
ಸಂಗೀತ ನಿರ್ದೇಶಕ: ಜಿ ಕೆ ವೆಂಕಟೇಶ್
ಛಾಯಾಗ್ರಾಹಣ : ಪಿ ಎಸ್ ಪ್ರಕಾಶ್

ಚಿತ್ರ: ನಂಜುಂಡಿ ಕಲ್ಯಾಣ

ಬಿಡುಗಡೆಯಾದ ವರ್ಷ: 1989
ನಿರ್ದೇಶಕ: ಎಂ ಎಸ್ ರಾಜಶೇಖರ್
ತಾರಾಗಣ: ರಾಘವೇಂದ್ರ ರಾಜಕುಮಾರ್, ಮಾಲಾಶ್ರೀ, ಗಿರಿಜಾ ಲೋಕೇಶ್
ನಿರ್ಮಾಪಕ: ಪಾರ್ವತಮ್ಮ ರಾಜಕುಮಾರ್
ಸಂಗೀತ ನಿರ್ದೇಶಕ: ಉಪೇಂದ್ರ ಕುಮಾರ್
ಛಾಯಾಗ್ರಾಹಣ : ವಿ ಕೆ ಕಣ್ಣನ್

ಚಿತ್ರ: ಗಜಪತಿ ಗರ್ವಭಂಗ

ಬಿಡುಗಡೆಯಾದ ವರ್ಷ: 1989
ನಿರ್ದೇಶಕ: ಎಂ ಎಸ್ ರಾಜಶೇಖರ್
ತಾರಾಗಣ: ರಾಘವೇಂದ್ರ ರಾಜಕುಮಾರ್, ಮಾಲಾಶ್ರೀ, ಧಿರೇಂದ್ರ ಗೋಪಾಲ್, ಹೊನ್ನವಳ್ಳಿ ಕೃಷ್ಣ
ನಿರ್ಮಾಪಕ: ಪಾರ್ವತಮ್ಮ ರಾಜಕುಮಾರ್
ಸಂಗೀತ ನಿರ್ದೇಶಕ: ಉಪೇಂದ್ರ ಕುಮಾರ್

ಚಿತ್ರ: ಜೀವನಚೈತ್ರ

ಬಿಡುಗಡೆಯಾದ ವರ್ಷ: 1992
ನಿರ್ದೇಶಕ: ದೊರೈ- ಭಗವಾನ್
ತಾರಾಗಣ: ಡಾ.ರಾಜಕುಮಾರ್, ಮಾಧವಿ, ಅಶ್ವಥ್, ಪಂಡರೀಬಾಯಿ, ಗುರುದತ್, ತೂಗುದೀಪ ಶ್ರೀನಿವಾಸ್, ಬಾಲರಾಜ್, ಅಭಿಜಿತ್
ನಿರ್ಮಾಪಕ: ಪಾರ್ವತಮ್ಮ ರಾಜಕುಮಾರ್
ಸಂಗೀತ ನಿರ್ದೇಶಕ : ಉಪೇಂದ್ರ ಕುಮಾರ್
ಛಾಯಾಗ್ರಾಹಣ: ಎಸ್ ವಿ ಶ್ರೀಕಾಂತ್

ಚಿತ್ರ: ಅಮೆರಿಕಾ..ಅಮೆರಿಕಾ

ಬಿಡುಗಡೆಯಾದ ವರ್ಷ: 1995
ನಿರ್ದೇಶಕ: ನಾಗತಿಹಳ್ಳಿ ಚಂದ್ರ ಶೇಖರ್
ತಾರಾಗಣ: ರಮೇಶ್, ಅಕ್ಷಯ್ ಆನಂದ್, ಹೇಮಾ
ನಿರ್ಮಾಪಕ: ವಿಶ್ವಪ್ರಿಯಾ ಫಿಲಂಸ್
ಸಂಗೀತ ನಿರ್ದೇಶಕ: ಮನೋಮೂರ್ತಿ
ಛಾಯಾಗ್ರಾಹಣ : ಸನ್ನಿ ಜೋಸೆಫ್

ಚಿತ್ರ: ಓಂ

ಬಿಡುಗಡೆಯಾದ ವರ್ಷ: 1995
ನಿರ್ದೇಶಕ: ಉಪೇಂದ್ರ
ತಾರಾಗಣ: ಶಿವರಾಜ್ ಕುಮಾರ್, ಪ್ರೇಮಾ
ನಿರ್ಮಾಪಕ: ಪಾರ್ವತಮ್ಮ ರಾಜಕುಮಾರ್
ಸಂಗೀತ ನಿರ್ದೇಶಕ: ಹಂಸಲೇಖಾ
ಛಾಯಾಗ್ರಾಹಣ : ಬಿ ಸಿ ಗೌರಿಶಂಕರ್

ಚಿತ್ರ: ಜನುಮದ ಜೋಡಿ

ಬಿಡುಗಡೆಯಾದ ವರ್ಷ: 1996
ನಿರ್ದೇಶಕ: ಟಿ ಎಸ್ ನಾಗಾಭರಣ
ತಾರಾಗಣ: ಶಿವರಾಜ್ ಕುಮಾರ್, ಶಿಲ್ಪಾ, ಪವಿತ್ರಾ ಲೋಕೇಶ್, ಹೊನ್ನವಳ್ಳಿ ಕೃಷ್ಣ
ನಿರ್ಮಾಪಕ: ಪಾರ್ವತಮ್ಮ ರಾಜಕುಮಾರ್
ಸಂಗೀತ ನಿರ್ದೇಶಕ: ವಿ ಮನೋಹರ್

ಚಿತ್ರ: ಯಜಮಾನ

ಬಿಡುಗಡೆಯಾದ ವರ್ಷ: 2000
ನಿರ್ದೇಶಕ: ಶೇಷಾದ್ರಿ ಮತ್ತು ರಾಧಾ ಭಾರತಿ
ತಾರಾಗಣ: ಡಾ.ವಿಷ್ಣುವರ್ಧನ್, ಪ್ರೇಮಾ, ಅವಿನಾಶ್, ಅಭಿಜಿತ್, ಶಶಿಕುಮಾರ್, ರಮೇಶ್ ಭಟ್
ನಿರ್ಮಾಪಕ: ರೆಹಮಾನ್ ಮತ್ತು ಮುಸ್ತಫಾ
ಸಂಗೀತ ನಿರ್ದೇಶಕ: ರಾಜೇಶ್ ರಾಮನಾಥ್

ಚಿತ್ರ: ಆಪ್ತಮಿತ್ರ

ಬಿಡುಗಡೆಯಾದ ವರ್ಷ: 2004
ನಿರ್ದೇಶಕ: ಪಿ ವಾಸು
ತಾರಾಗಣ: ಡಾ.ವಿಷ್ಣುವರ್ಧನ್, ಸೌಂದರ್ಯ, ಪ್ರೇಮಾ, ರಮೇಶ್, ಅವಿನಾಶ್, ಶಿವರಾಂ, ಸತ್ಯಜಿತ್
ನಿರ್ಮಾಪಕ: ದ್ವಾರಕೀಶ್
ಸಂಗೀತ ನಿರ್ದೇಶಕ: ಗುರುಕಿರಣ್
ಛಾಯಾಗ್ರಾಹಣ : ಕೃಷ್ಣ ಕುಮಾರ್

ಚಿತ್ರ: ಮುಂಗಾರುಮಳೆ

ಬಿಡುಗಡೆಯಾದ ವರ್ಷ: 2006
ನಿರ್ದೇಶಕ: ಯೋಗರಾಜ್ ಭಟ್
ತಾರಾಗಣ: ಗಣೇಶ್, ಪೂಜಾಗಾಂಧಿ, ಅನಂತ್ ನಾಗ್, ಜೈಜಗದೀಶ್, ಪದ್ಮಜಾ, ಸುಧಾ ಬೆಳ್ವಾಡಿ
ನಿರ್ಮಾಪಕ: ಇ ಕೃಷ್ಣಪ್ಪ
ಸಂಗೀತ ನಿರ್ದೇಶಕ: ಮನೋಮೂರ್ತಿ
ಛಾಯಾಗ್ರಾಹಣ : ಎಸ್ ಕೃಷ್ಣ

ಚಿತ್ರ: ಮಿಲನ

ಬಿಡುಗಡೆಯಾದ ವರ್ಷ: 2007
ನಿರ್ದೇಶಕ: ಪ್ರಕಾಶ್
ತಾರಾಗಣ: ಪುನೀತ್ ರಾಜಕುಮಾರ್, ಪಾರ್ವತಿ ಮೆನನ್, ಪೂಜಾ ಗಾಂಧಿ, ಮುಖ್ಯಮಂತ್ರಿ ಚಂದ್ರು, ಶೋಭರಾಜ್, ಸುಮಿತ್ರಾ
ನಿರ್ಮಾಪಕ: ದುಷ್ಯಂತ್
ಸಂಗೀತ ನಿರ್ದೇಶಕ: ಮನೋಮೂರ್ತಿ
ಛಾಯಾಗ್ರಾಹಣ : ಕೃಷ್ಣ ಕುಮಾರ್

ಚಿತ್ರ: ದುನಿಯಾ

ಬಿಡುಗಡೆಯಾದ ವರ್ಷ: 2007
ನಿರ್ದೇಶಕ: ಸೂರಿ
ತಾರಾಗಣ: ವಿಜಯ್, ರಶ್ಮಿ, ಯೊಗೀಶ್, ರಂಗಾಯಣ ರಘು
ನಿರ್ಮಾಪಕ: ಟಿ ಪಿ ಸಿದ್ದರಾಜು
ಸಂಗೀತ ನಿರ್ದೇಶಕ: ವಿ ಮನೋಹರ್
ಛಾಯಾಗ್ರಾಹಣ : ಸತ್ಯ ಹೆಗ್ಡೆ

English summary
Kannada movie run continuously for more than one year. Which are these 13 movies.
Please Wait while comments are loading...