For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಹಿಟ್ ಸಿನಿಮಾ 'ದಿಯಾ' ಆಗಸ್ಟ್ 19ಕ್ಕೆ ತೆಲುಗಿನಲ್ಲಿ ರಿಲೀಸ್

  |

  ಕನ್ನಡದ ಯಶಸ್ವಿ ಸಿನಿಮಾ 'ದಿಯಾ' ಈಗ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಕಳೆದ ವರ್ಷ ಕನ್ನಡದಲ್ಲಿ ತೆರೆಕಂಡಿದ್ದ ದಿಯಾ ಬಹಳ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಹಿಟ್ ಬಾರಿಸಿದ ನಂತರ ಪರಭಾಷೆಯಲ್ಲಿ ರಿಮೇಕ್ ಹಕ್ಕು ಹಾಗೂ ಡಬ್ಬಿಂಗ್ ಹಕ್ಕಿಗೆ ಬೇಡಿಕೆ ಹೆಚ್ಚಾಗಿತ್ತು.

  ಈಗ ತೆಲುಗಿನಲ್ಲಿ ದಿಯಾ ಸಿನಿಮಾ ಡಬ್ಬಿಂಗ್ ಆಗಿ ಬಿಡುಗಡೆಯಾಗುತ್ತಿದೆ. ತೆಲುಗಿನಲ್ಲಿ ದಿಯಾ ಚಿತ್ರವನ್ನು ಹೊಸದಾಗಿ ರಿಲೀಸ್ ಮಾಡಲಾಗುತ್ತದೆ. ಅದಕ್ಕಾಗಿ ಪ್ರಿ-ರಿಲೀಸ್ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ. ಸಂಪೂರ್ಣವಾಗಿ ತೆಲುಗು ಸಿನಿಮಾ ಎನ್ನುವಂತೆ ಪ್ರೇಕ್ಷಕರಿಗೆ ಕೊಡಲು ವಿತರಕರು ನಿರ್ಧರಿಸಿದ್ದಾರೆ.

  'ದಿಯಾ' ಸಿನಿಮಾ ರಿಮೇಕ್ ರೈಟ್ಸ್ ಗೆ ಹೆಚ್ಚಿದ ಬೇಡಿಕೆ'ದಿಯಾ' ಸಿನಿಮಾ ರಿಮೇಕ್ ರೈಟ್ಸ್ ಗೆ ಹೆಚ್ಚಿದ ಬೇಡಿಕೆ

  ಅಂದ್ಹಾಗೆ, ದಿಯಾ ಸಿನಿಮಾ ಡಿಜಿಟಲ್ ಸ್ಟ್ರೀಮ್ ಕಾಣ್ತಿದ್ದು, ಆಗಸ್ಟ್ 19ಕ್ಕೆ ಪ್ರದರ್ಶನ ಕಾಣಲಿದೆ. ತೆಲುಗಿನಲ್ಲಿ ಆರ್‌ಕೆ ನಲ್ಲಮ್ ಮತ್ತು ರವಿ ಕಶ್ಯಪ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿನ್ನೆಲೆ ಆಗಸ್ಟ್ 16 ರಂದು ಸಂಜೆ 6 ಗಂಟೆಗೆ ಪ್ರಸಾದ್ ಲ್ಯಾಬ್‌ನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

  2020 ಫೆಬ್ರವರಿ 7 ರಂದು ದಿಯಾ ಸಿನಿಮಾ ಬಿಡುಗಡೆಯಾಗಿತ್ತು. ಕೆಎಸ್ ಅಶೋಕ್ ಈ ಚಿತ್ರ ನಿರ್ದೇಶಿಸಿದ್ದು, ಡಿ ಕೃಷ್ಣ ಚೈತನ್ಯ ನಿರ್ಮಾಣ ಮಾಡಿದ್ದರು. ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ, ಖುಷಿ ರವಿ ಪ್ರಮುಖ ತಾರಬಳಗದಲ್ಲಿ ಕಾಣಿಸಿಕೊಂಡಿದ್ದರು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶಿಸಿದ್ದಾರೆ.

  ತೆಲುಗಿನಲ್ಲಿ ದಿಯಾ ಸಿನಿಮಾ ರಿಮೇಕ್ ಮಾಡುವುದಾಗಿ ಸುದ್ದಿಯಾಗಿತ್ತು. ನಟಿ ಸಮಂತಾ ಈ ಚಿತ್ರದಲ್ಲಿ ನಟಿಸುವುದಾಗಿ ವರದಿಯಾಗಿತ್ತು. ಆದ್ರೀಗ, ನೇರವಾಗಿ ಡಬ್ಬಿಂಗ್ ಆಗಿ ಡಿಜಿಟಲ್ ಪ್ರದರ್ಶನ ಕಾಣುತ್ತಿದೆ.

  Kannada Blockbuster Dia Now Releasing In Telugu

  ದಿಯಾ ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ವಿಶೇಷ ಅಂದ್ರೆ ಬಾಲಿವುಡ್‌ನಲ್ಲಿ ಸ್ವತಃ ಪೃಥ್ವಿ ಅಂಬರ್ ಅವರೇ ನಾಯಕನಟನಾಗಿ ನಟಿಸುತ್ತಿದ್ದಾರೆ. ಮೂಲ ಚಿತ್ರ ನಿರ್ದೇಶಿಸಿದ್ದ ಕೆಎಸ್ ಅಶೋಕ್ ಅವರೇ ಹಿಂದಿಯಲ್ಲೂ ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ಚಿತ್ರೀಕರಣ ಲಕ್ನೌ, ಡೆಹ್ರಾಡೂನ್ ಸುತ್ತಾಮುತ್ತಾ ನಡೆಯಲಿದೆ.

  English summary
  Kannada BlockBuster Dia Now Releasing In Telugu. Releasing Aug 19 On Digital Stream.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X