For Quick Alerts
  ALLOW NOTIFICATIONS  
  For Daily Alerts

  ಡರ್ಟಿ ಪಿಕ್ಚರ್ ಮುಹೂರ್ತದಲ್ಲಿ ವೀಣಾ ಮಲಿಕ್ ಮಿಂಚು

  |

  ಕನ್ನಡದ ಡರ್ಟಿ ಪಿಕ್ಚರ್ ಚಿತ್ರ ಕೊನೆಗೂ ಮುಹೂರ್ತ ಆಚರಿಸಿಕೊಂಡಿದೆ. ಪಾಕಿಸ್ತಾನಿ ಹಾಟ್ ಗರ್ಲ್ ವೀಣಾ ಮಲಿಕ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ತಂಡ ನಿನ್ನೆ (13 ಜೂನ್ 2012) ಮುಹೂರ್ತ ಆಚರಿಸಿಕೊಂಡು ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗಿದೆ. ವೀಸಾ ಸಮಸ್ಯೆಗಳೆಲ್ಲವೂ ಮುಗಿದು ವೀಣಾ ಬೆಂಗಳೂರಿಗೆ ಕಾಲಿಟ್ಟಾಗಿದೆ.

  ಮೊದಲಿನಿಂದಲೂ ಸಾಕಷ್ಟು ವಿಭಿನ್ನ ರೀತಿಯಲ್ಲೇ ಪ್ರಚಾರವನ್ನು ಮಾಡಿಕೊಂಡು ಬಂದಿರುವ ಡರ್ಟಿ ಪಿಕ್ಚರ್ ಚಿತ್ರತಂಡ, ತಮ್ಮ ಚಿತ್ರದಲ್ಲಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ಒಬ್ಬರು ನಟಿಸಲಿರುವುದಾಗಿ ಘೋಷಿಸಿತ್ತು. ಆದರೆ ಅವರ್ಯಾರು ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ.

  ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳು ಎಂದರೆ ನೆನಪಾಗುವವರು ರಜನಿಕಾಂತ್, ಚಿರಂಜೀವಿ, ಮೋಹನ್ ಲಾಲ್, ಮಮ್ಮುಟ್ಟಿ ಮುಂತಾದವರು. ಆದರೆ ಅವರಲ್ಲೊಬ್ಬರೂ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬುದು ಖಾತ್ರಿಯಾಗಿದೆ. ಈ ಚಿತ್ರದಲ್ಲಿ ನಟಿಸಲಿರುವವರು ನಟ ಪಾರ್ಥಿಬನ್ ಎಂಬ ವಿಷಯ ಬಹಿರಂಗವಾಗಿದೆ.

  ಚಿತ್ರತಂಡ ಅಂದುಕೊಂಡಂತೆ ವೀಣಾ ಮಲಿಕ್ ಬಂದಿದ್ದಾರೆ. ಆದರೆ ದಕ್ಷಿಣ ಭಾರತದ ಯಾವ ಸೂಪರ್ ಸ್ಟಾರ್ ಗಳೂ ಚಿತ್ರದಲ್ಲಿ ನಟಿಸುತ್ತಿಲ್ಲ. ನಾಯಕರಾಗಿ ಈ ಚಿತ್ರದ ನಿರ್ಮಾಪಕ ವೆಂಕಟಪ್ಪ ಅವರ ಮಗ ಅಕ್ಷಯ್ ನಟಿಸುತ್ತಿದ್ದು ಪ್ರಮುಖ ಪಾತ್ರವೊಂದರಲ್ಲಿ ಪಾರ್ಥಿಬನ್ ನಟಿಸಲಿದ್ದಾರೆ ಅಷ್ಟೇ. ಚಿತ್ರದ ಕಥೆ ನಟಿ ಸಿಲ್ಕ್ ಸ್ಮಿತಾರ ಜೀವನಗಾಥೆಯನ್ನು ಒಳಗೊಂಡಿದೆ.

  ಇವಿಷ್ಟು ನಿನ್ನೆ ಮುಹೂರ್ತ ಆಚರಿಸಿಕೊಂಡ ಕನ್ನಡದ ಡರ್ಟಿ ಪಿಕ್ಚರ್ ಪುರಾಣ. ಅದೇನೆ ಇರಲಿ, ಕೇವಲ ಪ್ರಚಾರದಿಂದ ಮಾತ್ರ ಚಿತ್ರ ಗೆಲ್ಲುವುದಿಲ್ಲ ಎಂಬುದು ಚಿತ್ರತಂಡಕ್ಕೆ ಮನವರಿಕೆಯಾದರೆ ಸಾಕು ಎಂಬುದು ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಮಾತು. ಚಿತ್ರವನ್ನು ಚೆನ್ನಾಗಿ ಮಾಡಿ ಪ್ರೇಕ್ಷಕರ ಮುಂದಿಟ್ಟರೆ ಬಾಲಿವುಡ್ ನಲ್ಲಿ ಬಂದ ದಿ ಡರ್ಟಿ ಪಿಕ್ಚರ್ ನಂತೇ ಹಿಟ್ ಆಗಬಹುದು. (ಒನ್ ಇಂಡಿಯಾ ಕನ್ನಡ)

  English summary
  Kannada Dirty Picture Launched yesterday, on 15th June 2012. Pakistan Actress Veena Mailk acts in lead and Akshay, the producer son is the Hero for this. Movie Shooting Starts in this week. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X