For Quick Alerts
  ALLOW NOTIFICATIONS  
  For Daily Alerts

  'ದೊಡ್ಮನೆ ಹುಡ್ಗ' ಸಂಭ್ರಮಾಚರಣೆಗೆ ಅಭಿಮಾನಿಗಳ ಭರಪೂರ ಸಿದ್ಧತೆ

  By Suneetha
  |

  ಪುನೀತ್ ರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಷನ್ ನ ಬಹು ನಿರೀಕ್ಷಿತ ಸಿನಿಮಾ 'ದೊಡ್ಮನೆ ಹುಡ್ಗ' ಇದೇ ತಿಂಗಳಿನಲ್ಲಿ ತೆರೆ ಕಾಣಲಿದೆ. ಚಿತ್ರದ ಬಿಡುಗಡೆಗೆ ದಿನ ಹತ್ತಿರವಾಗುತ್ತಿದ್ದಂತೆ ಅಭಿಮಾನಿಗಳು ಕೂಡ ಸಂಭ್ರಮ ಪಡುತ್ತಿದ್ದಾರೆ.

  ಸೆಪ್ಟೆಂಬರ್ 23ರಂದು ತೆರೆ ಕಾಣುತ್ತಿರುವ ಈ ಚಿತ್ರದ ಸಂಭ್ರಮಾಚರಣೆಯನ್ನು ಆಚರಿಸಲು ಈಗಿನಿಂದಲೇ ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಇಡೀ ಚಿತ್ರಮಂದಿರದ ಎದುರು ಪುನೀತ್ ರಾಜ್ ಕುಮಾರ್ ಅವರ ಬೃಹತ್ ಕಟೌಟ್ ಹಾಕಿ ಸಿಂಗಾರ ಮಾಡಲಿದ್ದಾರೆ.['ದೊಡ್ಮನೆ' ಅಂದ್ರೆ ಏನು.? ಸೂರಿ ಬಾಯ್ಬಿಟ್ಟ ದೊಡ್ಡ ಸೀಕ್ರೆಟ್ ಇಲ್ಲಿದೆ.!]

  ಮುಖ್ಯ ಚಿತ್ರಮಂದಿರದ ಎದುರು ಸುಮಾರು 108 ಅಡಿ ಎತ್ತರದ ಕಟೌಟ್ ಹಾಕಲಿದ್ದು, ಪ್ರಸನ್ನ ಚಿತ್ರಮಂದಿರದ ಎದುರು ಬರೋಬ್ಬರಿ 10 ಕಟೌಟ್ ಗಳನ್ನು, ಪುನೀತ್ ಅಭಿಮಾನಿಗಳು ಹಾಕಲಿದ್ದಾರಂತೆ.

  ಇನ್ನು ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 25ನೇ ಸಿನಿಮಾ ಆಗಿರೋದ್ರಿಂದ, ಇದನ್ನು ನೆನಪಿನಲ್ಲುಳಿಯುವಂತೆ ಮಾಡಲು ಅಭಿಮಾನಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ ಎನ್ನುತ್ತಿವೆ ಮೂಲಗಳು. ಜೊತೆಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಕಟೌಟ್ ಗಳನ್ನು ಕೂಡ ಎಲ್ಲಾ ಚಿತ್ರಮಂದಿರಗಳ ಎದುರು ನಿಲ್ಲಿಸಿದ್ದಾರಂತೆ.['ದೊಡ್ಮನೆ ಹುಡ್ಗ' ಟ್ರೈಲರ್ ನಲ್ಲಿ ಅದೆಷ್ಟು ವಿಶೇಷತೆಗಳಿವೆ ಗೊತ್ತಾ.?]

  Kannada Movie 'Dodmane Huduga' is all set to release on September 23

  ಈ ವಾರ ಸೆನ್ಸಾರ್ ಅಂಗಳಕ್ಕೆ ಕಾಲಿಡಲಿರುವ 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ರಾಧಿಕಾ ಪಂಡಿತ್ ದ್ವಿಪಾತ್ರದಲ್ಲಿ ಮಿಂಚಿದ್ದು, ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ್, ರವಿಶಂಕರ್, ರಂಗಾಯಣ ರಘು, ಸುನೀಲ್ ನಾಗಪ್ಪ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.['ದೊಡ್ಮನೆ ಹುಡ್ಗ' ಪುನೀತ್ ರಾಜ್ ಕುಮಾರ್ ಆಡಿದ ದೊಡ್ಡ ಮಾತು]

  ಮಾತ್ರವಲ್ಲದೇ 'ದೊಡ್ಮನೆ ಹುಡ್ಗ' ಸಿನಿಮಾ ಬಿಡುಗಡೆಗೆ ಒಂದು ವಾರಕ್ಕೆ ಮುನ್ನವೇ ಮುಂಗಡ ಟಿಕೆಟ್ ಕಾಯ್ದಿರಿಸುವ ಅವಕಾಶವನ್ನು, ಸಿನಿಪ್ರಿಯರಿಗೆ ಚಿತ್ರತಂಡ ಒದಗಿಸಿದೆ ಎನ್ನುತ್ತಿವೆ ಚಿತ್ರದ ಮೂಲಗಳು.['ದೊಡ್ಮನೆ ಹುಡ್ಗಿ' ರಾಧಿಕಾ ಪಂಡಿತ್ ಜೊತೆ ಎಕ್ಸ್ ಕ್ಲೂಸಿವ್ ಚಿಟ್ ಚಾಟ್]

  ಅಂತೂ-ಇಂತೂ ಈ ತಿಂಗಳಾಂತ್ಯಕ್ಕೆ ಅಪ್ಪು ಅಭಿಮಾನಿಗಳು ಇಡೀ ಕರ್ನಾಟಕದಾದ್ಯಂತ ಹಬ್ಬದ ವಾತಾವರಣ ಸೃಷ್ಟಿ ಮಾಡಲಿದ್ದು, ಪುನೀತ್ ಅವರ 25ನೇ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಿದ್ದಾರೆ.

  English summary
  Kannada Movie 'Dodmane Huduga' all set to release on September 23. Kannada Actor Puneeth Rajkumar, Kannada Actress Radhika Pandith, Actor Ambareesh in the lead role. Fans are keeping their fingers crossed for its September 23 release. They have already planned the celebrations, with preparations going on to erect a huge cut out of Puneeth Rajkumar of around 108 foot. The movie is directed by Duniya Soori.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X