»   » ಬರುತ್ತಿದೆ ಕನ್ನಡದಲ್ಲೂ ಒಂದು ಫ್ಯಾಷನ್ ಚಿತ್ರ

ಬರುತ್ತಿದೆ ಕನ್ನಡದಲ್ಲೂ ಒಂದು ಫ್ಯಾಷನ್ ಚಿತ್ರ

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ 'ಫ್ಯಾಷನ್' ಎಂಬ ಚಿತ್ರ 2008ರಲ್ಲಿ ಬಿಡುಗಡೆಯಾಗಿತ್ತು. ಆ ಚಿತ್ರ ಥಳುಕು ಬಳುಕಿನ ಫ್ಯಾಷನ್ ಲೋಕದ ಬಗ್ಗೆ ಬೆಳಕು ಚೆಲ್ಲಿತ್ತು. ಭಾರತೀಯ ಫ್ಯಾಷನ್ ಉದ್ಯಮ, ಸ್ತ್ರೀ ವಾದ, ಮಹಿಳೆಯರ ಪವರ್ ಮುಂತಾದ ಅಂಶಗಳನ್ನಿಟ್ಟುಕೊಂಡು ಕಥೆಯನ್ನು ಹೆಣೆದು ಪವರ್ ಫುಲ್ ಆಗಿ ಕಟ್ಟಿಕೊಟ್ಟಿದ್ದರು ಮಧುರ್ ಭಂಡಾರ್ ಕರ್.

ಆ ಚಿತ್ರ ಬಾಕ್ಸ್ ಆಫೀಸಲ್ಲೂ ಭರ್ಜರಿ ಹಿಟ್ ಆಯಿತು. ಚಿತ್ರದ ಪಾತ್ರವರ್ಗದಲ್ಲಿ ಪ್ರಿಯಾಂಕಾ ಚೋಪ್ರಾ, ಕಂಗನಾ ರನೌತ್, ಮುಗ್ಧಾ ಗೋಡ್ಸೆ, ಅರ್ಬಾಜ್ ಖಾನ್ ಮುಂತಾದವರಿದ್ದರು. ಈಗ ಅದೇ ಹೆಸರಿನಲ್ಲಿ ಕನ್ನಡದಲ್ಲೂ 'ಫ್ಯಾಷನ್' ಚಿತ್ರ ಬಿಡುಗಡೆಯಾಗುತ್ತಿದೆ. ಇಲ್ಲೂ ಸಬ್ಜೆಕ್ಟ್ ಫ್ಯಾಷನ್ ಲೋಕಕ್ಕೆ ಸಂಬಂಧಿಸಿದ್ದು.


'Z' ಫಿಲಂಸ್ ನಿರ್ಮಿಸುತ್ತಿರುವ "ಫ್ಯಾಷನ್" ಚಿತ್ರವು ಯಾವುದೇ ಸದ್ದು ಗದ್ದಲವಿಲ್ಲದೆ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರವು ಈಗ ನಡೆಯುವ ಫ್ಯಾಷನ್ ಸ್ಪರ್ಧೆ ಹಾಗೂ ಅದರ ಹಿಂದೆ ನಡೆಯುವ ಗೋಲ್ ಮಾಲ್ ಕಥಾವಸ್ತುವನ್ನು ಹೊಂದಿದೆ.

ಚಿತ್ರಕ್ಕೆ ಸಾರ್ವಜನಿಕ ಪ್ರದರ್ಶನಕ್ಕೆ ಯೋಗ್ಯವಾದ 'ಯು' ಸರ್ಟಿಫಿಕೇಟ್ ಅನ್ನು ಸೆನ್ಸಾರ್ ನೀಡಿದ್ದು, ಮಾರ್ಚ್ ಅಂತ್ಯದ ವೇಳೆಗೆ ಚಿತ್ರವು ರಾಜ್ಯದ್ಯಂತ ತೆರೆ ಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರಕ್ಕೆ ಅನಂತ್ ಸಂಭಾಷಣೆ, ಸಾಹಿತ್ಯ, ಅರುಣ್ ಛಾಯಾಗ್ರಾಹಣ, ಸಮೀರ್ ಕುಲಕರ್ಣಿ ಸಂಗೀತ, ಪ್ರವೀಣ್ ಸಂಕಲನವಿದ್ದು, ಚಿತ್ರದ ಕಥೆ, ಚಿತ್ರಕಥೆ ಮತ್ತು ನಿರ್ದೇಶನ "Z". ತಾರಾಗಣದಲ್ಲಿ ಗಗನ್ ನಿಮೇಶ್, ಅತಿಶ್ರೀ, ರವಿಕಾ ಸೋಮಯ್ಯ, ಶಿಫಾಲಿ, ಮಲ್ಲೇಶ್, ಅನಂತ್‍ಸಿಂಗ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Kannada movie 'Fashion' ready for release by end of March. The film produced and directed by 'Z' films. It features Gagan Nimesh, Atishree, Ravika Somayya.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada