Just In
Don't Miss!
- Automobiles
ಗ್ಲಾಸಿ ಆರೇಂಜ್ ವ್ಯಾರ್ಪ್ನೊಂದಿಗೆ ಮಾಡಿಫೈಗೊಂಡ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್ಯುವಿ
- Sports
ಎಬಿಡಿ ದಾಖಲೆಯನ್ನು ಸರಿದೂಗಿಸಿದ ಸಂಜು ಸ್ಯಾಮ್ಸನ್
- News
ಕೊರೊನಾ ಸೋಂಕು ಹೆಚ್ಚಳ: ಮಹಾರಾಷ್ಟ್ರ ಸಿಎಂ ಪತ್ರಿಕಾಗೋಷ್ಠಿಯ ಪ್ರಮುಖಾಂಶಗಳು
- Finance
2021 ಸ್ಕೋಡಾ ಕೊಡಿಯಾಕ್ ಅಧಿಕೃತವಾಗಿ ಬಿಡುಗಡೆ: ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಹೀಗೊಂದು ದಿನ' ಚಿತ್ರದ ನಾಲ್ಕು ವಿಶೇಷತೆಗಳು
ಎಲ್ಲ ಅಂದುಕೊಂಡಂತೆ ಆಗಿದ್ದರೇ ಮಾರ್ಚ್ 9 ರಂದು ವಿಶ್ವ ಮಹಿಳಾ ದಿನದ ವಿಶೇಷವಾಗಿ 'ಹೀಗೊಂದು ದಿನ' ಸಿನಿಮಾ ಬಿಡುಗಡೆಯಾಗಬೇಕಿದೆ. ಆದ್ರೆ, ದಕ್ಷಿಣ ಭಾರತದ ಚಲನಚಿತ್ರ ನಿರ್ಮಾಪಕರ ಪ್ರತಿಭಟನೆಯಿಂದ ಈ ವಾರ ರಿಲೀಸ್ ಆಗಬೇಕಿರುವ ಚಿತ್ರಗಳು ಮುಂದೂಡುವ ಸಾಧ್ಯತೆ ಇದೆ.
ವಿಶ್ವ ಮಹಿಳಾ ದಿನದಂದು ನೋಡಲೇಬೇಕಾದ ಚಿತ್ರ 'ಹೀಗೊಂದು ದಿನ'.!
'ಹೀಗೊಂದು ದಿನ' ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಈಗಾಗಲೇ ಟ್ರೈಲರ್ ಮೂಲಕ ಗಮನ ಸೆಳೆಯುತ್ತಿದೆ. ವಿಕ್ರಮ್ ಯೋಗಾನಂದ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದು, ವಿಕಾಸ್ ಕಥೆಯನ್ನು ಹೆಣೆದಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ಬಂಡವಾಳ ಹೂಡಿದ್ದು, ಅಭಿಲಾಷ್ ಗುಪ್ತಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಂದ್ಹಾಗೆ, 'ಹೀಗೊಂದು ದಿನ' ಸಿನಿಮಾ ಹಲವು ವಿಶೇಷತೆಗಳನ್ನ ಹೊಂದಿದೆ. ಇವುಗಳಲ್ಲಿ ಪ್ರಮುಖ 4 ವಿಶೇಷತೆಗಳನ್ನ ಪಟ್ಟಿ ಮಾಡಲಾಗಿದೆ. ಮುಂದೆ ಓದಿ....

ಮದುವೆಯ ನಂತರ ಮೊದಲ ಸಿನಿಮಾ
ನಟಿ ಸಿಂಧುಲೋಕನಾಥ್ ಅವರು ಇತ್ತೀಚಿಗಷ್ಟೆ ಮಂಗಳೂರು ಮೂಲದ ಶ್ರೇಯಸ್ ಕೊಡಿಯಾಲ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಬಳಿಕ ಸಿಂಧು ಅಭಿನಯದ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದೆ.

ಕೇವಲ 2 ಗಂಟೆಯಲ್ಲಿ ನಡೆಯುವ ಕಥೆ
'ಹೀಗೊಂದು ದಿನ' ಚಿತ್ರ ಎರಡು ಗಂಟೆಯಲ್ಲಿ ನಡೆಯುವ ಕಥೆ. ಒಂದು ಗುರಿಯಿಟ್ಟಕೊಂಡು ಚಿತ್ರದ ನಾಯಕಿ ಮನೆಯಿಂದ ಹೊರಗೆ ಬರುತ್ತಾಳೆ. ಈ ಎರಡು ಗಂಟೆಯಲ್ಲಿ ನಾಯಕಿ ಯಾವ ತೊಂದರೆಗಳನ್ನು, ಕಷ್ಟಗಳನ್ನು ಎದುರಿಸ್ತಾಳೆ ಎಂಬುವುದು ಕಥೆಯ ತಿರುಳು. ಕಥೆಯಲ್ಲಿ ನಾಯಕಿಯ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗಿನ ಸನ್ನಿವೇಶವನ್ನು ಹೊಂದಿದೆ. ಹೀಗಾಗಿ ಚಿತ್ರೀಕರಣವನ್ನು ಬೆಳಗಿನ ಜಾವ 6 ಗಂಟೆಯಿಂದ 8 ಗಂಟೆಯ ಮಧ್ಯ ಭಾಗದಲ್ಲಿ ಶೂಟ್ ಮಾಡಲಾಗಿದೆ.

ಕಲಾವಿದರ ದಂಡು
'ಹೀಗೊಂದು ದಿನ'ದಲ್ಲಿ ಕಲಾವಿದರ ದಂಡೆ ಇದೆ. ಸಿಂಧು ಲೋಕನಾಥ್ ಮುಖ್ಯ ಪಾತ್ರ ನಿರ್ವಹಿಸಿದ್ದರೇ, 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ'ಯ ಪ್ರವೀಣ್, ಹಿರಿಯ ನಟಿ ಗಿರಿಜಾ ಲೋಕೇಶ್, ಪದ್ಮಜಾ ರಾವ್, ಗುರುಪ್ರಸಾದ್, ಶೋಭರಾಜ್, ಮಿತ್ರ, ಗಿರಿ, ಬಾಲಾಜಿ ಮನೋಹರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಅನ್ ಕಟ್ ಸಿನಿಮಾ
'ಹೀಗೊಂದು ದಿನ' ಚಿತ್ರದ ಬಹುಮುಖ್ಯ ವಿಶೇಷತೆ ಅಂದ್ರೆ ಇದು ಅನ್ ಕಟ್ ಸಿನಿಮಾ. ಸುಮಾರು 2 ಗಂಟೆಯ ಕಥೆಯ ಅನ್ ಕಟ್ ಮಾದರಿಯಲ್ಲಿ ತೋರಿಸಿದ್ದಾರೆ.